• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸ ವರ್ಷಾಚರಣೆ ಸಂಭ್ರಮಕ್ಕೆ ನಿಯಮ ವಿಧಿಸಿಲ್ಲ: ಕೋಲಾರ ಜಿಲ್ಲಾಧಿಕಾರಿ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಡಿಸೆಂಬರ್ 29: ಕೋಲಾರದಲ್ಲಿ ಹೊಸ ವರ್ಷಾಚರಣೆ ಸಂಭ್ರಮಕ್ಕೆ ಯಾವುದೇ ಹೊಸ ರೀತಿಯ ನಿಯಮಗಳನ್ನು ವಿಧಿಸಿಲ್ಲ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣಲ್ಲಿ ಮಂಗಳವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವರ್ಷಾಚರಣೆಗೆ ಯಾವುದೇ ಹೊಸ ನಿಯಮ ಜಾರಿ ಮಾಡಿಲ್ಲ. ಜೊತೆಗೆ ನಮ್ಮಲ್ಲಿ ಜನಸಂದಣಿ ಸೇರುವ ಹಾಗೂ ಪಾರ್ಟಿ ಮಾಡುವ ಯಾವುದೇ ಪ್ರವಾಸಿ ತಾಣಗಳಿಲ್ಲ ಎಂದರು. ಆಗಾಗಿ ನಾವು ಸಂಭ್ರಮಾಚರಣೆಗೆ ಯಾವುದೇ ಹೊಸ ನಿಯಮ ವಿಧಿಸಿಲ್ಲ ಎಂದು ಹೇಳಿದರು.

ಹೊಸ ವರ್ಷಾಚರಣೆ: ವಿಶೇಷ ಕಾರ್ಯಕ್ರಮ, ಪಾರ್ಟಿಗಳಿಗೆ ನಿಷೇಧಾಜ್ಞೆ ಜಾರಿ: ದಾವಣಗೆರೆ ಡಿಸಿಹೊಸ ವರ್ಷಾಚರಣೆ: ವಿಶೇಷ ಕಾರ್ಯಕ್ರಮ, ಪಾರ್ಟಿಗಳಿಗೆ ನಿಷೇಧಾಜ್ಞೆ ಜಾರಿ: ದಾವಣಗೆರೆ ಡಿಸಿ

ಇನ್ನು ಈಗಾಗಲೇ ಸರ್ಕಾರದ ಜಾರಿಗೆ ತಂದಿರುವ ಹೊಸ ನಿಯಮಗಳ ಬಗ್ಗೆ ಎಚ್ಚರಿಕೆ ವಹಿಸಲಾಗಿದ್ದು, ಈಗಾಗಲೇ ಜಾರಿ ಮಾಡಲಾಗಿದೆ. ಕೋವಿಡ್ ವಿಚಾರವಾಗಿ ನಿಯಮಗಳಂತೆ ಹೊಸ ವರ್ಷಾಚರಣೆ ಮಾಡಲು ಈಗಾಗಲೇ ಎಲ್ಲೆಡೆ ಜಿಲ್ಲಾಡಳಿತದಿಂದ ನಿರ್ದೇಶನ ನೀಡಲಾಗಿದೆ. ಅದರಂತೆ ಜನರು ಸಹ ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ವರ್ಷಾಚರಣೆ ಮಾಡುವಂತೆ ಮನವಿ ಮಾಡಿದರು.

ಇನ್ನು ಕೊರೊನಾ ಹೊಸ ರೂಪಾಂತರದ ಬಗ್ಗೆ ತಿಳಿಸಿದ ಅವರು, ಕೋಲಾರ ಜಿಲ್ಲೆಗೆ ಇದುವರೆಗೂ ಬ್ರಿಟನ್​ನಿಂದ ಬಂದವರು ಯಾರೂ ಇಲ್ಲ. ಬದಲಾಗಿ ಯುಎಸ್​​​ನಿಂದ ಮೂವರು ಬಂದಿದ್ದು, ಅವರನ್ನು ಪತ್ತೆ ಹಚ್ಚಿ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ಮೂವರ ವರದಿ ನೆಗೆಟಿವ್ ಬಂದಿದೆ ಎಂದರು.

ಮತ್ತೊಮ್ಮ ಪರೀಕ್ಷೆ ಮಾಡುವಂತೆ ಆರೋಗ್ಯ ಇಲಾಖೆಯವರಿಗೆ ಸೂಚಿಸಲಾಗಿದೆ. ಜೊತೆಗೆ ಕೊರೊನಾ ಲಸಿಕೆ ನೀಡಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ಮೊದಲ ಹಂತದಲ್ಲಿ ಆಶಾ ಕಾರ್ಯಕರ್ತೆಯರಿಗೆ, ವೈದ್ಯರಿಗೆ ನೀಡಲು ತಯಾರಿ ನಡೆದಿದೆ ಎಂದು ಜಿಲ್ಲಾಧಿಕಾರಿ ಸತ್ಯಭಾಮ ಮಾಹಿತಿ ನೀಡಿದರು.

English summary
District Collector Satyabhama said no new rules have been imposed for the new year celebration in Kolar District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X