• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವರ್ತೂರು ಪ್ರಕಾಶ್ ಕಾಂಗ್ರೆಸ್‌ಗೆ; ಮುನಿಯಪ್ಪ ಹೇಳಿದ್ದೇನು?

By ಕೋಲಾರ ಪ್ರತಿನಿಧಿ
|

ಕೋಲಾರ, ಫೆಬ್ರವರಿ 16; ಕಾಂಗ್ರೆಸ್ ಹಿರಿಯ ನಾಯಕ ಕೆ. ಎಚ್. ಮುನಿಯಪ್ಪ ಮಾಜಿ ಸಚಿವ ವರ್ತೂರು ಪ್ರಕಾಶ್ ವಿರುದ್ದ ಕಿಡಿ ಕಾರಿದ್ದಾರೆ. "ನಾನು ಕಾಂಗ್ರೆಸ್ ಸೇರುತ್ತೇನೆ, ಈ ಕುರಿತು ಮಾತುಕತೆಗಳು ನಡೆದಿವೆ" ಎಂದು ವರ್ತೂರು ಪ್ರಕಾಶ್ ಹೇಳಿದ್ದರು.

ಮಂಗಳವಾರ ಕೋಲಾರದ ಪತ್ರಕರ್ತರ ಭವನದಲ್ಲಿ ಮಾತನಾಡಿದ ಕೆ. ಎಚ್. ಮುನಿಯಪ್ಪ, "ವರ್ತೂರು ಪ್ರಕಾಶ್‌ಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ. ಜವಾಬ್ದಾರಿ ಮರೆತು ವರ್ತೂರು ಪ್ರಕಾಶ್ ಮಾತನಾಡಬಾರದು" ಎಂದರು.

ಕಾಂಗ್ರೆಸ್ ಕದ ತಟ್ಟುತ್ತಿರುವ ಮಾಜಿ ಸಚಿವ ವರ್ತೂರು ಪ್ರಕಾಶ್

"ಇತ್ತೀಚೆಗೆ ಕೋಲಾರದಲ್ಲಿ ಕಾಂಗ್ರೆಸ್ ಇಲ್ಲ ಎಂದು ವರ್ತೂರು ಪ್ರಕಾಶ್ ಹೇಳಿದ್ದರು. ಅವರು ಕಾಂಗ್ರೆಸ್ ಪಕ್ಷ ಸೇರುವ ಯಾವುದೇ ಪ್ರಸ್ತಾಪವೂ ಇಲ್ಲ. ಕಾಂಗ್ರೆಸ್‌ಗೆ ಅವರನ್ನು ಸೇರಿಸಲ್ಲ ಎಂದು ರಾಜ್ಯ ಸಮಿತಿ ಸ್ಪಷ್ಟನೆ ನೀಡಿದೆ" ಎಂದು ಕೆ. ಎಚ್. ಮುನಿಯಪ್ಪ ಹೇಳಿದರು.

ವರ್ತೂರು ಪ್ರಕಾಶ್ ಭದ್ರತೆಗೆ ಪಂಜಾಬ್ ಬೌನ್ಸರ್ಸ್‌ಗಳು!

ವರ್ತೂರು ಪ್ರಕಾಶ್ ಹೇಳಿದ್ದೇನು?: ಸೋಮವಾರ ಕೋಲಾರದಲ್ಲಿ ಮಾತನಾಡಿದ್ದ ವರ್ತೂರು ಪ್ರಕಾಶ್, "ನನಗೆ ಕಾಂಗ್ರೆಸ್ ಸೇರಲು ಆಸೆಯಾಗಿದೆ. ಈಗಾಗಲೇ ಕಾಂಗ್ರೆಸ್ ಮುಖಂಡರ ಜೊತೆ ಮಾತುಕತೆ ನಡೆಯುತ್ತಿದೆ" ಎಂದು ಹೇಳಿದ್ದರು.

ವರ್ತೂರು ಪ್ರಕಾಶ್ ಅಪಹರಣ ಪ್ರಕರಣ; ಪ್ರಮುಖ ಆರೋಪಿ ಬಂಧನ

"ನಾನು ಸ್ಥಾಪನೆ ಮಾಡಿದ ನಮ್ಮ ಕಾಂಗ್ರೆಸ್ ಈಗ ಇಲ್ಲ. ನನ್ನ ನಡೆ ಏನಿದ್ದರೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಡೆ. ನನ್ನ ಕಾರ್ಯಕರ್ತರ ಒತ್ತಾಯದಿಂದ ಕಾಂಗ್ರೆಸ್ ಬೇಕು ಎಂದು ಹೇಳುತ್ತಿದ್ದೇನೆ. ಇನ್ನು 26 ತಿಂಗಳ ಬಳಿಕ ಚುನಾವಣೆ ಬರಲಿದೆ. ನಾನು ಏನಾದರೂ ಮಾಡಿ ಶಾಸಕ ಆಗಬೇಕು" ಎಂದು ತಿಳಿಸಿದ್ದರು.

   ಬಿಪಿಎಲ್‌ ಕಾರ್ಡ್ ರದ್ದು ವಿಚಾರಕ್ಕೆ ಕೇಂದ್ರ ಸಚಿವ ಸದಾನಂದಗೌಡ ಪ್ರತಿಕ್ರಿಯೆ | BLP Card | Oneindia Kannada

   ಮುನಿಯಪ್ಪ ಭೇಟಿ; ವರ್ತೂರು ಪ್ರಕಾಶ್ ಅವರು, "ಇನ್ನು ಮೂರು ದಿನಗಳಲ್ಲಿ ಕೆ. ಎಚ್. ಮುನಿಯಪ್ಪ ಅವರನ್ನು ಭೇಟಿ ಮಾಡುತ್ತೇನೆ. ಕಾಂಗ್ರೆಸ್‌ಗೆ ಬೇಡ ಅಂತ ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಹಾಗೂ ಕೆ. ಎಚ್. ಮುನಿಯಪ್ಪ ಹೇಳಿಕೆ ನೀಡಿದ್ದಾರೆ" ಎಂದು ಹೇಳಿದ್ದರು.

   English summary
   There is no proposal of Varthur Prakash joining Congress party said Congress senior leader and Kolar former MP K. H. Muniyappa.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X