• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶೇಷ ವರದಿ; ಶಿವರಾತ್ರಿಗೂ ಮುಸ್ಲಿಂ ಕುಟುಂಬಕ್ಕೂ ನಂಟು!

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಮಾರ್ಚ್ 10; ಕೋಲಾರದಲ್ಲಿ ಹಿಂದುಗಳು ಆಚರಿಸುವ ಶಿವರಾತ್ರಿಗೂ ಇಲ್ಲಿರುವ ಒಂದು ಮುಸ್ಲಿಂ ಕುಟುಂಬಕ್ಕೂ ಪರೋಕ್ಷವಾದ ಸಂಬಂಧವಿದೆ. ಈ ಮುಸ್ಲಿಂ ಕುಟುಂಬ ತಯಾರು ಮಾಡುವ ಪದಾರ್ಥವು ಬಹುತೇಕ ಹಿಂದುಗಳ ಮನೆಯಲ್ಲಿನ ಈಶ್ವರನಿಗೆ ನೈವೇದ್ಯಕ್ಕೆ ಇಡಲಾಗುತ್ತದೆ.

ಶಿವರಾತ್ರಿ ಹಬ್ಬದ ಅಂಗವಾಗಿ ಉಪವಾಸ ಮಾಡುವವರ ಲಘು ಆಹಾರವಾಗಿಯೂ ಈ ತಿನಿಸನ್ನು ಬಳಕೆ ಮಾಡಲಾಗುತ್ತದೆ. ಶಿವರಾತ್ರಿಯನ್ನು ನಿಷ್ಠೆಯಿಂದ ಪರಿಗಣಿಸುವ ಕೋಲಾರದ ಈ ಮುಸ್ಲಿಂ ಸಂಸಾರದ ಬಗೆಗಿನ ವರದಿ ಇಲ್ಲಿದೆ.

 ಶಿವರಾತ್ರಿ ವಿಶೇಷ, ಕ್ಷೇತ್ರ ಪ್ರದಕ್ಷಿಣೆ: 1,300 ವರ್ಷಗಳ ಇತಿಹಾಸದ ಇನ್ನ ಮಹಾಲಿಂಗೇಶ್ವರ ದೇವಾಲಯ ಶಿವರಾತ್ರಿ ವಿಶೇಷ, ಕ್ಷೇತ್ರ ಪ್ರದಕ್ಷಿಣೆ: 1,300 ವರ್ಷಗಳ ಇತಿಹಾಸದ ಇನ್ನ ಮಹಾಲಿಂಗೇಶ್ವರ ದೇವಾಲಯ

ಶಿವರಾತ್ರಿ ಹಬ್ಬದ ಸಂಭ್ರಮ ಕೋಲಾರದಲ್ಲಿ ಶುರುವಾಗಿದೆ. ಹಬ್ಬಕ್ಕೆ ಬೇಕಾದ ಪದಾರ್ಥಗಳನ್ನು ಖರೀದಿಸುವುದಕ್ಕೆ ಜನರು ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ. ಹೂವು, ಹಣ್ಣುಗಳ ಜೊತೆಗೆ ಶಿವರಾತ್ರಿ ಹಬ್ಬಕ್ಕೆ ಪ್ರಮುಖವಾಗಿ ಬೇಕಾದ ವಿವಿಧ ಧಾನ್ಯಗಳ ಹುರಿದ ಪುರಿಯನ್ನು ಮಾರುಕಟ್ಟೆಯಲ್ಲಿ ಹೇರಳವಾಗಿ ಕಂಡು ಬರುತ್ತಿದೆ.

ಸ ರಘುನಾಥ ಅಂಕಣ; ಶಿವರಾತ್ರಿ ದಿನ 'ಲೋಕಲ್’ ಶಕುಂತಲೆ ಎಂಬ ನಾಟಕಸ ರಘುನಾಥ ಅಂಕಣ; ಶಿವರಾತ್ರಿ ದಿನ 'ಲೋಕಲ್’ ಶಕುಂತಲೆ ಎಂಬ ನಾಟಕ

ಜಿಲ್ಲೆಯ ಬಹುತೇಕ ಪೇಟೆಗಳಲ್ಲಿ ಶಿವರಾತ್ರಿಯ ಸಂದರ್ಭದಲ್ಲಿ ಕಾಣಿಸುವ ಈ ಹುರಿದ ಪುರಿಯನ್ನು ತಯಾರಿಸುವುದು ಕೋಲಾರದಲ್ಲಿನ ಒಂದು ಮುಸ್ಲಿಂ ಕುಟುಂಬ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. ಹೌದು, ವಿವಿಧ ಧಾನ್ಯಗಳಿಂದ ಹುರಿದ ಪುರಿಯನ್ನು ತಯಾರಿಸುವ ಮುಸ್ಲಿಂರ ಕುಟುಂಬವಿದು.

ಮೈಲಾರ ಲಿಂಗ ಜಾತ್ರೆ; ಗೊರವಯ್ಯರ ಶಸ್ತ್ರ ಪವಾಡ ಮೈಲಾರ ಲಿಂಗ ಜಾತ್ರೆ; ಗೊರವಯ್ಯರ ಶಸ್ತ್ರ ಪವಾಡ

ಫೈರೋಜ್ ಬೇಗ್ ಕುಟುಂಬ

ಫೈರೋಜ್ ಬೇಗ್ ಕುಟುಂಬ

ಕೋಲಾರದ ಸುಲ್ತಾನ್ ತಿಪ್ಪಸಂದ್ರ ಬಡಾವಣೆಯಲ್ಲಿನ ಈ ಮನೆಯ ಒಡೆಯನ ಹೆಸರು ಫೈರೋಜ್ ಬೇಗ್. ಮುತ್ತಾತನ ಕಾಲದಿಂದಲೂ ಹುರಿದ ಪುರಿಯನ್ನು ತಯಾರಿಸಿ ಶಿವರಾತ್ರಿಯ ವೇಳೆಗೆ ಮಾರುಕಟ್ಟೆಗೆ ರವಾನಿಸುವ ಕಾಯಕ ಈ ಕುಟುಂಬದ್ದಾಗಿದೆ. ಹಬ್ಬದ ದಿನಗಳಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಬಹುತೇಕ ಅಂಗಡಿಗಳಿಗೆ ಹುರಿದ ಪುರಿಯನ್ನು ಫೈರೋಜ್ ಬೇಗ್ ಪೂರೈಸುತ್ತಾರೆ.

ಮೂರು ತಿಂಗಳಿನಿಂದ ತಯಾರಿ

ಮೂರು ತಿಂಗಳಿನಿಂದ ತಯಾರಿ

ರಾಗಿ, ಸಾಮೆ, ಭತ್ತ, ಜೋಳದಿಂದ ಮಾಡಿದ ಹುರಿದ ಪುರಿ ಮತ್ತು ಹುರಿದ ರಾಗಿ ಹಿಟ್ಟನ್ನು ಫೈರೋಜ್ ಬೇಗ್ ಕುಟುಂಬವು ಶಿವರಾತ್ರಿಗೆ ಮೂರು ತಿಂಗಳಿರುವಾಗಲೇ ತಯಾರಿಸಲು ಶುರು ಮಾಡುತ್ತಾರೆ. ದಾವಣಗೆರೆ ಮತ್ತು ನೆರೆಯ ಆಂಧ್ರಪ್ರದೇಶದಿಂದ ಅಗತ್ಯ ಧಾನ್ಯವನ್ನು ಸಂಗ್ರಹಿಸಿ ತಂದು, ಹುರಿದ ಪುರಿಯ ತಯಾರಿಯಲ್ಲಿ ಫೈರೋಜ್ ಬೇಗ್ ಕುಟುಂಬವು ತೊಡಗಿಕೊಳ್ಳುತ್ತದೆ.

ಮೂರು ತಿಂಗಳು ಸಸ್ಯಹಾರ ಸೇವನೆ

ಮೂರು ತಿಂಗಳು ಸಸ್ಯಹಾರ ಸೇವನೆ

ಮುಸ್ಲಿಂ ಧರ್ಮದವರಾದರೂ ಫೈರೋಜ್ ಬೇಗ್ ಕುಟುಂಬದವರು ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಹಿಂದೂ ಶಿವಭಕ್ತರಂತೆ ವೃತ ಆಚರಣೆ ಮಾಡುತ್ತಾರೆ. ಶಿವರಾತ್ರಿಗಾಗಿ ಈ ತಿನಿಸುಗಳನ್ನು ತಯಾರಿಸುವುದಕ್ಕೆ ಸಿದ್ದತೆ ಶುರುವಾದ ದಿನದಿಂದ ಶಿವರಾತ್ರಿ ಹಬ್ಬವು ಮುಗಿದ ಮರುದಿನದವರೆಗೂ ಅಂದಾಜು ಮೂರು ತಿಂಗಳ ಕಾಲ ಈ ಕುಟುಂಬದವರು ಶುದ್ಧ ಸಸ್ಯಹಾರವನ್ನು ಮಾತ್ರ ಸೇವಿಸುತ್ತಾರೆ.

  Ramesh Jarkiholi ಏನು ಅಂಥ ನನಿಗೆ ಚೆನ್ನಾಗೇ ಗೊತ್ತು?? | D K Shivakumar | Oneindia Kannada
  ಸ್ಥಳೀಯರಲ್ಲಿಯೇ ಹೆಮ್ಮೆ ಇದೆ

  ಸ್ಥಳೀಯರಲ್ಲಿಯೇ ಹೆಮ್ಮೆ ಇದೆ

  ಮೂರು ತಲೆಮಾರುಗಳಿಂದಲೂ ಶಿವರಾತ್ರಿ ಹಬ್ಬಕ್ಕೆ ದೊಡ್ಡ ಮಟ್ಟದಲ್ಲಿ ಹುರಿದ ಪುರಿಯನ್ನು ತಯಾರಿಸುವ ಫೈರೋಜ್ ಬೇಗ್ ಕುಟುಂಬದ ಬಗ್ಗೆ ಸ್ಥಳೀಯರಲ್ಲಿ ಹೆಮ್ಮೆಯಿದೆ. ಕೋಮು ಸಾಮರಸ್ಯ ಕಾಪಾಡುವ ಅಗತ್ಯವಿರುವ ಈ ಕಾಲದಲ್ಲಿ ಫೈರೋಜ್ ಬೇಗ್ ವ್ಯಾಪಾರಿಯಾದರೂ ಆತನ ಹಿಂದೂ ದೇವರ ಬಗೆಗಿನ ನಿಷ್ಠೆಯನ್ನು ಸ್ಥಳೀಯರು ಶ್ಲಾಘಿಸುತ್ತಾರೆ. ಫೈರೋಜ್ ಜೊತೆ ಪತ್ನಿ ಹಾಗೂ ಮಕ್ಕಳು ಸಹ ಈ ಕಾರ್ಯಕ್ಕೆ ನೆರವು ನೀಡುತ್ತಾರೆ.

  English summary
  Kolar based Feroz Beg a Muslim family will prepare food items for the naivedya offering to God Shiva in Shivaratri.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X