ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ; ಕೋವಿಡ್ ಲಸಿಕೆ ಹಂಚಿಕೆಗೆ ಹೇಗಿದೆ ಸಿದ್ಧತೆ?

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜನವರಿ 04: " ಕೋಲಾರ ಹಾಗೂ ರಾಮನಗರ ಜಿಲ್ಲೆಗಳು ಸೇರಿ ಒಟ್ಟು 35 ಸಾವಿರ ಕೋವಿಡ್ ಲಸಿಕೆ ಹಂಚಿಕೆ ಮಾಡಲು ತೀರ್ಮಾನ ಮಾಡಲಾಗಿದೆ. ಈ ತಿಂಗಳ ಕೊನೆಯ ವಾರದಲ್ಲಿ ಜಿಲ್ಲೆಗೆ ಲಸಿಕೆ ಬರಲಿದೆ. ಈಗಾಗಲೇ 3,700 ಜನರನ್ನು ಲಸಿಕೆ ನೀಡಲು ಗುರುತಿಸಿದ್ದೇವೆ" ಎಂದು ಕೋಲಾರ ಸಂಸದ ಮುನಿಸ್ವಾಮಿ ಹೇಳಿದರು.

ಕೋಲಾರದಲ್ಲಿ ಕೋವಿಡ್ ಲಸಿಕೆ ಹಂಚಿಕೆಗೆ ತಯಾರಿ ನಡೆಯುತ್ತಿದೆ. ಸೋಮವಾರ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ಸಂಸದ ಎಸ್. ಮುನಿಸ್ವಾಮಿ ಸಭೆ ನಡೆಸಿದರು. ಸಭೆಯಲ್ಲಿ ಆರೋಗ್ಯ ಸಹಾಯಕಿಯರಿಗೆ ಆತ್ಮಸ್ಥೈರ್ಯ ತುಂಬಿದರು.

ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ಭಾರತಕ್ಕೆ ಹೆಮ್ಮೆ ಏಕೆ?, ಮೇಲಿರುವ ವೈಜ್ಞಾನಿಕ ಸಂದೇಹವೇನು? ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆ ಭಾರತಕ್ಕೆ ಹೆಮ್ಮೆ ಏಕೆ?, ಮೇಲಿರುವ ವೈಜ್ಞಾನಿಕ ಸಂದೇಹವೇನು?

"ಆತ್ಮನಿರ್ಭರ್ ಭಾರತ್ ಅಡಿಯಲ್ಲಿ ದೇಸಿ ವ್ಯಾಕ್ಸಿನ್ ಕಂಡು ಹಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ಕೆ ಬೇರೆ ದೇಶಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದೆ. ಕೋಲಾರ ಹಾಗೂ ರಾಮನಗರ ಸೇರಿ ಒಟ್ಟು 35 ಸಾವಿರ ಲಸಿಕೆ ಹಂಚಿಕೆಗೆ ತೀರ್ಮಾನವಾಗಿದೆ" ಎಂದು ಸಂಸದರು ತಿಳಿಸಿದರು.

ಆಕ್ಸ್‌ಫರ್ಡ್‌ ಲಸಿಕೆ ಸರ್ಕಾರಕ್ಕೆ 200 ರೂ, ಸಾರ್ವಜನಿಕರಿಗೆ 1 ಸಾವಿರ ರೂ. ಬೆಲೆಯಲ್ಲಿ ವಿತರಣೆಆಕ್ಸ್‌ಫರ್ಡ್‌ ಲಸಿಕೆ ಸರ್ಕಾರಕ್ಕೆ 200 ರೂ, ಸಾರ್ವಜನಿಕರಿಗೆ 1 ಸಾವಿರ ರೂ. ಬೆಲೆಯಲ್ಲಿ ವಿತರಣೆ

MP Muniswamy Inspects Covid Vaccine Distribution Preparations

"ಎರಡು ಡೋಸ್‌ಗಳನ್ನು ನಾಲ್ಕು ವಾರಗಳ ಅಂತರದಲ್ಲಿ ನೀಡಲಾಗುತ್ತದೆ. ಈಗಾಗಲೇ ನಾವು ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಜಿಲ್ಲೆಯಲ್ಲಿ ಒಂದೇ ಒಂದು ಕೋವಿಡ್ ಕೇಸ್ ಇಲ್ಲದಹಾಗೆ ವ್ಯವಸ್ಥೆ ಮಾಡಿಕೊಳ್ಳುತಿದ್ದೇವೆ. ವೈದ್ಯರು, ನರ್ಸ್, ಆಂಬ್ಯುಲೆನ್ಸ್, ವ್ಯಾಕ್ಸಿನ್ ಕ್ಯಾರಿಯರ್‌ಗಳನ್ನು ಸಿದ್ಧಮಾಡಿಕೊಂಡಿದ್ದೇವೆ" ಎಂದು ಸಂಸದರು ವಿವರಣೆ ನೀಡಿದರು.

ಭಾರತಕ್ಕೆ ಅಭಿನಂದನೆ: ಕೊರೊನಾ ಲಸಿಕೆ ತುರ್ತು ಅನುಮತಿ ಬಗ್ಗೆ ಮೋದಿ ಮಾತು ಭಾರತಕ್ಕೆ ಅಭಿನಂದನೆ: ಕೊರೊನಾ ಲಸಿಕೆ ತುರ್ತು ಅನುಮತಿ ಬಗ್ಗೆ ಮೋದಿ ಮಾತು

ಭಾನುವಾರದ ವರದಿಯಂತೆ ಕೋಲಾರದಲ್ಲಿ 4 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 9735. ಸಕ್ರಿಯ ಪ್ರಕರಣಗಳ ಸಂಖ್ಯೆ 108.

English summary
Kolar BJP MP Muniswamy inspects covid vaccine distribution preparations. MP chaired the meeting of health department officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X