ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ ಸಂಸದರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಮೇ 6: ಕೋಲಾರ ಸಂಸದ ವಿ.ಮುನಿಸ್ವಾಮಿ ಅವರ ಸಮಯ ಪ್ರಜ್ಞೆಯಿಂದ ಕೋಲಾರ ಜಿಲ್ಲೆಯಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಆಕ್ಸಿಜನ್ ತುಂಬಿಸಿಕೊಂಡು ಬರುವ ಲಾರಿ 24 ಗಂಟೆ ತಡವಾದ ಪರಿಣಾಮ, ಆಕ್ಸಿಜನ್ ಅವಶ್ಯಕತೆ ಎದುರಾಗುವ ಸಾಧ್ಯತೆ ಇದೆ ಎಂದು ರಾತ್ರಿ 10 ಗಂಟೆ ವೇಳೆಗೆ ಕೋಲಾರ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಕರೆ ಮಾಡಿ ಸಂಸದರಿಗೆ ಮಾಹಿತಿ ನೀಡಿದರು.

Kolar MP Muniswamy Helps To Solve Oxygen Shortage Issue In District

ಕೂಡಲೇ ಎಚ್ಚೆತ್ತು ನೇರವಾಗಿ ತಾವೇ ಆಕ್ಸಿಜನ್ ತಯಾರಿಕಾ ಘಟಕಕ್ಕೆ ತೆರಳಿದ ಸಂಸದ ಮುನಿಸ್ವಾಮಿ, ಬೆಂಗಳೂರಿನ ಗರುಡಾಚಾರಪಾಳ್ಯದಲ್ಲಿರುವ ಬುರುಕ ಗ್ಯಾಸ್ ಲಿಮಿಟೆಡ್ ಬಳಿ ತೆರಳಿದರು.

Kolar MP Muniswamy Helps To Solve Oxygen Shortage Issue In District

ಕರೆ ಮಾಡಿ ಹೇಳಿದರೆ ಸಮಸ್ಯೆ ಬಗೆಹರಿಯೋದಿಲ್ಲ ಎಂದು ನೇರವಾಗಿ ತಾವೇ ತೆರಳಿದ ಸಂಸದರು, ಕಳೆದ 24 ಗಂಟೆಯಿಂದ ಆಕ್ಸಿಜನ್ ತುಂಬಿಸಲು ಕಾಯುತ್ತಿದ್ದ ಲಾರಿ ಸ್ಟ್ರಕ್ ಆಗಿ ನಿಂತಿತ್ತು. ಆಗ ಆಕ್ಸಿಜನ್ ತಯಾರಿಕಾ ಘಟಕದ ಮ್ಯಾನೇಜರ್ ಭೇಟಿಯಾಗಿ ಆಕ್ಸಿಜನ್ ರೀಫಿಲ್ ಮಾಡಿಸಿಕೊಂಡು ಬಂದರು.

Kolar MP Muniswamy Helps To Solve Oxygen Shortage Issue In District

Recommended Video

#Covid19Updates, Bengaluru: ಉದ್ಯಾನನಗರಿಯಲ್ಲಿ 23106 ಹೊಸ ಕೋವಿಡ್ ಸೋಂಕಿತರು | Oneindia Kannada

ಮಧ್ಯರಾತ್ರಿ 1 ಗಂಟೆ ವೇಳೆ ಸುಮಾರು 5 KL ನಷ್ಟು ಆಕ್ಸಿಜನ್ ನನ್ನು ಮಾಲೂರಿನ ವೆಂಕಟೇಶ್ವರ ಏರ್ ಪ್ರೊಡಕ್ಟ್ ಕೇಂದ್ರಕ್ಕೆ ಸೇರಿಸಿದ ಸಂಸದ ಮುನಿಸ್ವಾಮಿ, ನಂತರ ತಾವೇ ಮುಂದೆ ನಿಂತು ಆಕ್ಸಿಜನ್ ರೀಫಿಲ್ ಮಾಡಿಸಿದರು. ಪರಿಣಾಮ ಮಾಲೂರಿನ ಆಕ್ಸಿಜನ್ ಘಟಕದಿಂದ ಸಿಲೆಂಡರ್ ನಲ್ಲಿ ತುಂಬಿಸಿ ಸರಬರಾಜು ಮಾಡಲಾಗುತ್ತಿದೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆ ಆಗದೆ ಇದ್ದಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಸಂಸದರ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

English summary
Kolar MP Muniswamy helps Quickly to solve oxygen shortage Issue In Kolar district, Appreciation expressed from the public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X