ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪ; ಸಚಿವ ಶಂಕರ್ ಸ್ಪಷ್ಟನೆ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಫೆಬ್ರವರಿ 21; "ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಆಡಳಿತದಲ್ಲಿ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ"ಎಂದು ತೋಟಗಾರಿಕಾ ಸಚಿವ ಆರ್. ಶಂಕರ್ ಸ್ಪಷ್ಟಪಡಿಸಿದರು.

ಕೋಲಾರದಲ್ಲಿ ಸಚಿವರು ಮಾಧ್ಯಮಗಳ ಜೊತೆ ಮಾತನಾಡಿದರು. ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರಇಲಾಖೆಗಳ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದರು.

ಕೆಪಿಸಿಸಿ ಉಸ್ತುವಾರಿ ವಿವರಿಸಿದ VST ಅಂದ್ರೆ ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್ ಕೆಪಿಸಿಸಿ ಉಸ್ತುವಾರಿ ವಿವರಿಸಿದ VST ಅಂದ್ರೆ ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್

ಆರ್. ಶಂಕರ್ ಮಾತನಾಡಿ, "ಯತ್ನಾಳ್ ಹೇಳಿಕೆ ನೀಡಿರುವ ರೀತಿ ಸಿಎಂ ಪುತ್ರ ವಿಜಯೇಂದ್ರ ಎಲ್ಲಿಯೂ ಹಸ್ತಕ್ಷೇಪ ಮಾಡುವುದಿಲ್ಲ. ಜೊತೆಗೆ ಯತ್ನಾಳ್ ಹೇಳಿಕೆಗಳಿಂದ ಪಕ್ಷಕ್ಕೆ ಯಾವುದೇ ರೀತಿಯ ಡ್ಯಾಮೇಜ್ ಆಗಿಲ್ಲ" ಎಂದರು.

ಕಗ್ಗದ ಮೂಲಕ ಯತ್ನಾಳ್‌ಗೆ ವಿಜಯೇಂದ್ರ ತಿರುಗೇಟು! ಕಗ್ಗದ ಮೂಲಕ ಯತ್ನಾಳ್‌ಗೆ ವಿಜಯೇಂದ್ರ ತಿರುಗೇಟು!

Minister R Shankar Denies BY Vijayendra Interference In Portfolio

"ನಾನು ಸಂಪುಟದಲ್ಲಿ ಇದ್ದೇನೆ, ವಿಜಯೇಂದ್ರ ಹಸ್ತಕ್ಷೇಪ ಮಾಡಿಲ್ಲ. ನನ್ನನ್ನ ಇದುವರೆಗೂ ಏನೂ ಕೇಳಿಲ್ಲ, ಹೇಳಿಲ್ಲ. ನನಗೆ ಇಲಾಖೆ ಕೆಲಸ ಮಾಡುವುದಕ್ಕೆ ಸಮಯವಿಲ್ಲ. ಇನ್ನು ಯತ್ನಾಳ್ ಹೇಳಿಕೆಗಳಂತಹ ಊಹಾಪೋಹಕ್ಕೆ ನಾನು ಏನೆಂದು ಉತ್ತರ ನೀಡಲಿ?" ಎಂದು ಪ್ರಶ್ನಿಸಿದರು.

ಸೂಪರ್ ಸಿಎಂ ಅಲ್ಲ, ನಾನು ಬಿಜೆಪಿ ಕಾರ್ಯಕರ್ತ; ಬಿ. ವೈ. ವಿಜಯೇಂದ್ರ ಸೂಪರ್ ಸಿಎಂ ಅಲ್ಲ, ನಾನು ಬಿಜೆಪಿ ಕಾರ್ಯಕರ್ತ; ಬಿ. ವೈ. ವಿಜಯೇಂದ್ರ

ಲಾಕ್ ಡೌನ್ ಇಲ್ಲ; ಕೋವಿಡ್ 2ನೇ ಅಲೆ ಕುರಿತು ಮಾತನಾಡಿದ ಸಚಿವರು, "ಕೊರೊನಾ ಪರಿಣಾಮ‌ ಈಗಾಗಲೇ ಕುಗ್ಗಿದೆ. ಎರಡನೇ ಹಂತದ ಲಾಕ್ ಡೌನ್ ಅವಶ್ಯಕತೆ ಇಲ್ಲ. ಲಸಿಕೆ ಬಂದಿದೆ, ಆದರೂ ಜನರು ಎಚ್ಚರಿಕೆಯಿಂದ ಇರಬೇಕು" ಎಂದರು.

ಐಎಂಎ ಪ್ರಕರಣಕ್ಕೆ ಸಂಭಂದಿಸಿದಂತೆ ಮಾತನಾಡಿದ ಅವರು, "ನನಗೆ ಇಲಾಖೆ ಬಿಟ್ಟು ಯಾವುದೇ ಕೆಲಸ ಗೊತ್ತಿಲ್ಲ. ನಾನು ರೈತರ ಪರವಾಗಿ ಕಾಳಜಿಯಿಂದ ಕೆಲಸ ಮಾಡಬೇಕು. ಹೀಗಾಗಿ ಸಿಎಂ ಅವರ ಮೇಲೆ ಇನ್ನೂ ಹೆಚ್ಚಿನ ಒತ್ತಡ ತಂದು, ಇಲಾಖೆ ಕೆಲಸ ಮಾಡುವಲ್ಲಿ ಹೆಚ್ಚು ಒತ್ತು ಕೊಡುವೆ" ಎಂದು ಹೇಳಿದರು.

ಮೀಸಲಾತಿ ವಿಚಾರ; "ಇನ್ನು ಎಲ್ಲಾ ಸಮಾಜದವರು ಮೀಸಲಾತಿ ಬೇಕೆಂದು ಕೇಳುತ್ತಿದ್ದಾರೆ. ಅದು ಅವರ ಹಕ್ಕು ಕೇಳುತ್ತಾರೆ. ಮುಖ್ಯಮಂತ್ರಿಗಳು ಸೇರಿದಂತೆ ಸಂಪುಟದ ಸಚಿವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದನಾಗಿರುತ್ತೇನೆ" ಎಂದರು.

English summary
Horticulture department minister R. Shankar denied BJP state vice president B. Y. Vijayendra interference in portfolio. BJP MLA Basanagouda Patil Yatnal alleged B. Y. Vijayendra interference.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X