ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಶವಂತಪುರ-ದೆಹಲಿ ವಿಶೇಷ ರೈಲಿಗೆ ಹಸಿರು ನಿಶಾನೆ ತೋರಿದ ಡಿವಿಎಸ್

|
Google Oneindia Kannada News

ಬೆಂಗಳೂರು, ಮಾರ್ಚ್ 05: ಅವಿಭಜಿತ ಕೋಲಾರ ಜಿಲ್ಲೆ ಭಾಗದ ಜನರಿಗೆ ಮಂಗಳವಾರ ಮಧ್ಯಾಹ್ನ ಶುಭ ಸುದ್ದಿ ಸಿಕ್ಕಿದೆ. ಬಹು ಕಾಲ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಯಶವಂತಪುರ ಹಾಗೂ ದೆಹಲಿ ನಡುವಿನ ವಿಶೇಷ ರೈಲಿಗೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ಚಾಲನೆ ನೀಡಿದರು.

ಹುಬ್ಬಳ್ಳಿ-ಚೆನ್ನೈ ನಡುವೆ ವಾರಕ್ಕೊಂದು ವಿಶೇಷ ರೈಲು ಸಂಚಾರ ಹುಬ್ಬಳ್ಳಿ-ಚೆನ್ನೈ ನಡುವೆ ವಾರಕ್ಕೊಂದು ವಿಶೇಷ ರೈಲು ಸಂಚಾರ

ನೈಋತ್ಯ ರೈಲ್ವೆ ಪ್ರಕಟಣೆಯಂತೆ ಯಶವಂತಪುರದಿಂದ ದೆಹಲಿಗೆ ತೆರಳುವ ಪ್ರಯಾಣಿಕರ ಪೈಕಿ ಕೋಲಾರ ಭಾಗದವರಿಗೆ ನೇರ ರೈಲುಗಳಿರಲಿಲ್ಲ. ಈಗ ಈ ವಿಶೇಷ ರೈಲು, ಯಶವಂತಪುರದಿಂದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬಂಗಾರಪೇಟೆ ಮಾರ್ಗವಾಗಿ ದೆಹಲಿವರೆಗೆ ಸಂಚರಿಸಲಿದೆ.

ಯಶವಂತಪುರದಿಂದ ಮಂಗಳವಾರದಂದು 12.30ಕ್ಕೆ ಹೊರಡಲಿರುವ ರೈಲು, 1.38ಕ್ಕೆ ಚಿಕ್ಕಬಳ್ಳಾಪುರ, 2.18ಕ್ಕೆ ಚಿಂತಾಮಣಿ, 3.08ಕ್ಕೆ ಕೋಲಾರ, 3.38ಕ್ಕೆ ಬಂಗಾರಪೇಟೆ ತಲುಪಲಿದೆ. ಗುರುವಾರ ಬೆಳಗ್ಗೆ 9.30ಕ್ಕೆ ದೆಹಲಿ ತಲುಪಲಿದೆ.

ಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು 6 ದಿನಕ್ಕೆ ವಿಸ್ತರಣೆ ಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು 6 ದಿನಕ್ಕೆ ವಿಸ್ತರಣೆ

Minister DV Sadananda Gowda flags off Yeshwanthpur-Delhi Special train

ಆದರೆ, ಈ ರೈಲು ವೇಳಾಪಟ್ಟಿ ತಾತ್ಕಾಲಿಕವಾಗಿದೆ. ಪ್ರಯಾಣಿಕರ ಅನುಕೂಲ ನೋಡಿಕೊಂಡು ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ನೈಋತ್ಯ ರೈಲ್ವೆ ಪ್ರಕಟಿಸಿದೆ. ಕೋಲಾರ- ಯಶವಂತಪುರ ಬ್ರಾಡ್ ಗೇಜ್ ಮಾರ್ಗದಲ್ಲಿ ಈ ವಿಶೇಷ ರೈಲು ಸಂಚಾರ ಆರಂಭಿಸಿದ ಬಳಿಕ ಮುಂಬೈ, ಚೆನ್ನೈ ರೈಲುಗಳ ಸಂಚಾರಕ್ಕೂ ಬೇಡಿಕೆ ಇದೆ ಅದನ್ನು ಈಡೇರಿಸುವಂತೆ ಸಂಸದ ಕೆಎಚ್ ಮುನಿಯಪ್ಪ ಹೇಳಿದ್ದಾರೆ.

English summary
Union Minister DV Sadananda Gowda today(March 05) flagged off Yeshwanthpur-Delhi Special train. This train will be helpful to Kolar, Chikkaballapur and Bangarpet commuters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X