ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರದಲ್ಲಿ ಕೊರೊನಾ ನಡುವೆಯೂ ಜಮಾಯಿಸಿದ ನೂರಾರು ವರ್ತಕರು

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜುಲೈ 4: ಕೊರೊನಾ ಭೀತಿಯ ನಡುವೆ ಎಪಿಎಂಸಿ ವರ್ತಕರು ನೂರಾರು ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಮಾರುಕಟ್ಟೆಯ ಸೆಸ್ ಪಾವತಿಸುವುದಕ್ಕೆ ವಿರೋಧಿಸಿ ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ ವರ್ತಕರು ಭಾರೀ ಸಂಖ್ಯೆಯಲ್ಲಿ ಸೇರಿದ್ದಾರೆ. ಪ್ರತಿಭಟನೆಯಲ್ಲಿ ಕೋವಿಡ್ ನಿಯಮಗಳು ಉಲ್ಲಂಘನೆಯಾಗಿವೆ.

ಕೊರೊನಾ ಭಯದ ನಡುವೆ ಸರ್ಕಾರದ ವಿರುದ್ಧ ಜನರ ಪ್ರತಿಭಟನೆಕೊರೊನಾ ಭಯದ ನಡುವೆ ಸರ್ಕಾರದ ವಿರುದ್ಧ ಜನರ ಪ್ರತಿಭಟನೆ

ಕೃಷಿ ಉತ್ಪನ್ನಗಳ ಖರೀದಿಗಾಗಿ ವರ್ತಕರು ಸಮಿತಿಗೆ ಸೆಸ್ ಶುಲ್ಕ ಪಾವತಿಸಬೇಕಿದ್ದು, ಕೋವಿಡ್ ಸಮಸ್ಯೆ ಬಗೆಹರಿಯುವವರೆಗೂ ಸೆಸ್ ಪಾವತಿ ಸಾಧ್ಯವಿಲ್ಲ ಎಂದು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಎಪಿಎಂಸಿ ಸೆಸ್ ಸಂಗ್ರಹ ನಿಲ್ಲಿಸಿದ್ದು, ಕೊರೊನಾ ಮುಂದುವರೆದಿದ್ದರೂ ಇದೀಗ ಸೆಸ್ ಸಂಗ್ರಹಕ್ಕೆ ಮುಂದಾಗಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

Merchants Gathered In Large Number And Protest Against APMC In Kolar

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿಲುವಿಗೆ ವರ್ತಕರು ವಿರೋಧ ವ್ಯಕ್ತಪಡಿಸಿ ಕೃಷಿ ಉತ್ಪನ್ನ ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ಧರಣಿ ನಡೆಸುತ್ತಿದ್ದಾರೆ.

English summary
Hundreds of APMC merchants protested in Kolar amid Coronavirus fear,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X