ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಬಲ, ಅನುಕೂಲ ಇಲ್ಲದಿದ್ದರೂ ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಮಾವಿನ ಸುಗ್ಗಿ, ಹಿಗ್ಗಿನಲ್ಲಿ ರೈತರು

By ಕೋಲಾರ ಪ್ರತಿನಿಧಿ
|
Google Oneindia Kannada News

ಶ್ರೀನಿವಾಸಪುರ (ಕೋಲಾರ), ಜೂನ್ 10: ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮಾವಿನ ತೋಟ ಇರುವ ರೈತರು ಒಂದಿಷ್ಟು ನೆಮ್ಮದಿ ಕಾಣುವಂತಾಗಿದೆ. ಗಿಡದಿಂದ ನೆಲಕ್ಕೆ ಉದುರಿಸಿದ 'ಲೂಸ್ ಕಟ್ಟಿಂಗ್'ಗಳಿಗಿಂತ ಕ್ರೇಟ್ ಕಟ್ಟಿಂಗ್ ಅಂದರೆ ಕೈಯಿಂದ ಕಿತ್ತ ಕಾಯಿಗಳು ಮಾರುಕಟ್ಟೆಯಲ್ಲಿ ಕಂಡುಬರುತ್ತಿವೆ.

ಇದೇ ಮೊದಲ ಬಾರಿಗೆ ಇಲ್ಲಿನ ಮಾವು ಬೆಳೆಗಾರರು ಕ್ರೇಟ್ ಕಟ್ಟಿಂಗ್ ಅನ್ನು ಅನುಸರಿಸುತ್ತಿರುವುದರಿಂದ 'ಕ್ವಾಲಿಟಿ ಮಾಲು' ಬರುತ್ತಿದೆ ಎಂದು ಮಾವು ವರ್ತಕರು ಅಭಿಪ್ರಾಯ ಪಡುತ್ತಿರುವುದರಲ್ಲದೆ ಒಳ್ಳೆಯ ಬೆಲೆ ಸಿಗಲು ಇದೂ ಒಂದು ಕಾರಣ ಎನ್ನುತ್ತಾರೆ.

ರಾಸಾಯನಿಕ ಮುಕ್ತ ಮಾವಿನ ಬಗ್ಗೆ ಜಾಗೃತಿ ಮೂಡಿಸಲು ಪ್ರಜ್ವಲ್ ಕರೆ ರಾಸಾಯನಿಕ ಮುಕ್ತ ಮಾವಿನ ಬಗ್ಗೆ ಜಾಗೃತಿ ಮೂಡಿಸಲು ಪ್ರಜ್ವಲ್ ಕರೆ

ಇದು ಮಾವಿನ ಸುಗ್ಗಿಯ ಉಚ್ಛ್ರಾಯ ಕಾಲ. ಕಳೆದ ವರ್ಷ ಈ ಅವಧಿಯಲ್ಲಿ ಶ್ರೀನಿವಾಸಪುರದ ಮಂಡಿಗಳ ರಸ್ತೆಯಲ್ಲಿ ಮಾವಿನ ಕಾಯಿಗಳನ್ನು ಚೆಲ್ಲಾಡಿರುವುದು ಕಾಣಬಹುದಾಗಿತ್ತು. ಕಾರಣ ಏನೆಂದರೆ, ಕಾಯಿ ರೋಗಕ್ಕೆ ತುತ್ತಾಗಿ ಕೊಳೆಯುತ್ತಿತ್ತು. ಇದರಿಂದಾಗಿ ವ್ಯಾಪಾರಿಗಳು ಮತ್ತು ರೈತರು ಸಾಲಗಾರರಾಗಿದ್ದರು.

Mango growers and sellers happy in Srinivasapura taluk

ಆದರೆ, ಈ ಸಲ ಬಿಸಿಲು-ಮಳೆ- ಗಾಳಿಯಿಂದಾಗಿ ಮರಗಳಲ್ಲಿ ಶೇಕಡಾ ನಲವತ್ತರಷ್ಟು ಫಸಲು ನಿಂತಿದ್ದರೂ ಕಳೆದ ಬಾರಿಯಂತೆ ನಷ್ಟ ಅನುಭವಿಸುವುದಿಲ್ಲ ಎಂಬ ಭರವಸೆ ಮೂಡಿದೆ. ಇದಕ್ಕೆ ಪ್ರಧಾನ ಕಾರಣ ಪ್ರತಿ ವರ್ಷದಂತೆ ತೋತಾಪುರಿ ಈ ಬಾರಿಯೂ ಮೈ ತುಂಬಿಕೊಳ್ಳುತ್ತಿರುವುದು. ಇದು ಇನ್ನಷ್ಟು ಹೆಚ್ಚು ಆದಾಯ ತರಬೇಕಾದರೆ ಇನ್ನೊಂದು ವಾರ, ಹದಿನೈದು ದಿನ ಮಳೆ ಹಿಂದೆ ಸರಿಯಬೇಕಿದೆ. ವರುಣ ಈ ಕೃಪೆ ಮಾಡಲಿ ಎಂಬುದು ಮಾವಿನ ರೈತರ ಪ್ರಾರ್ಥನೆಯಾಗಿದೆ.

ಈ ಸಲವಂತೂ ಒಳ್ಳೆಯ ಕ್ವಾಲಿಟಿ, ರುಚಿಯ ಶ್ರೀನಿವಾಸಪುರದ ಮಾವು ದೇಶಾದ್ಯಂತ ಘಮಗುಡಲಿದೆ. ಮಾವಿನಕಾಯಿ ಮಂಡಿಯ ಅನ್ವರ್ ಷರೀಫ್ ಅಂಡ್ ಸನ್ಸ್ ನ ಮಾಲೀಕರನ್ನು ಮಾತನಾಡಿಸಿದಾಗ, ದಿನಕ್ಕೆ ಸುಮಾರು ಐನೂರು ಟನ್ ಹೊರಹೋಗುತ್ತದೆ. ತೋತಾಪುರಿ ಸುಗ್ಗಿ ಆದಾಗ ಈ ಪ್ರಮಾಣ ದ್ವಿಗುಣಗೊಳ್ಳುವ ಸಾಧ್ಯತೆಗಳಿವೆ ಎಂದು ಒನ್ ಇಂಡಿಯಾ ಕನ್ನಡಕ್ಕೆ ಮಾಹಿತಿಯನ್ನು ನೀಡಿದರು.

ನೀವು ಮಾವು ಪ್ರಿಯರೇ, ಹಾಗಾದರೇ ತಿನ್ನೋ ಮುನ್ನ ಯೋಚಿಸ್ಲೇಬೇಕು... ನೀವು ಮಾವು ಪ್ರಿಯರೇ, ಹಾಗಾದರೇ ತಿನ್ನೋ ಮುನ್ನ ಯೋಚಿಸ್ಲೇಬೇಕು...

ಮಂಡಿಯಿಂದ ಹೊರಗೆ ಹಾಕಿದ ಕೊಳೆತ ಹಾಗೂ ಕಳಪೆ ಕಾಯಿಗಳ ಓಟೆಯನ್ನು ಆಂಧ್ರಪ್ರದೇಶದಿಂದ ಬಂದ ಮಹಿಳೆಯರು, ಮಕ್ಕಳು ವಿಶೇಷವಾಗಿ ಸಂಗ್ರಹಿಸಿ, ನರ್ಸರಿಗಳಿಗೆ ಮಾರುತ್ತಿದ್ದರು. ಇದನ್ನು ಬಳಸಿ, ನರ್ಸರಿಗಳವರು ಸಸಿ ಮಾಡಿ, ಅಂಟು ಕಟ್ಟಿ, ಮುಂದಿನ ಮುಂಗಾರು ಮಳೆ ಪ್ರಾರಂಭದಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ ಕಳೆದ ಎರಡ್ಮೂರು ವರ್ಷಗಳಿಂದ ಓಟೆ ಆರಿಸುವವರು ಕಂಡುಬರುತ್ತಿಲ್ಲ.

Mango growers and sellers happy in Srinivasapura taluk

ಕಾರಣ ಏನೆಂಬುದು ತಿಳಿಯುತ್ತಿಲ್ಲ. ಇದರಿಂದ ಬಿತ್ತನೆ ಮಾಡುವ ನರ್ಸರಿಗಳವರು ದೂರದ ಆಂಧ್ರಪ್ರದೇಶದಿಂದ ಓಟೆಗಳನ್ನು ತರಿಸಿಕೊಳ್ಳುವ ಪರಿಸ್ಥಿತಿ ಉದ್ಭವವಾಗಿದೆ. ಅಲ್ಲದೆ, ಸಸಿಗಳಿಗಾಗಿಯೂ ಆಂಧ್ರದತ್ತ ನೋಡಬೇಕಾಗಿದೆ. ಕಳೆದ ವರ್ಷ ಈ ಕಾರಣದಿಂದಾಗಿ ಸ್ಥಳೀಯ ಅರಣ್ಯ ಇಲಾಖೆ ನರ್ಸರಿಯಲ್ಲಿ ಬಿತ್ತನೆ ನಡೆಯಲಿಲ್ಲ.

ಇಲ್ಲಿ ವರ್ಷವೊಂದಕ್ಕೆ ಒಂದೂವರೆಯಿಂದ ಎರಡು ಲಕ್ಷದಷ್ಟು ಸಸಿಗಳಿಗೆ ಇಲಾಖೆಯೂ ಸೇರಿದಂತೆ ರೈತರಿಂದ ಬೇಡಿಕೆ ಇರುತ್ತಿತ್ತು.

ಮಾವು ಮೇಳಕ್ಕೆ ಏಕೆ ಹೋಗಲೇಬೇಕು, ಈ ಬಾರಿಯ ವಿಶೇಷತೆಗಳೇನು?ಮಾವು ಮೇಳಕ್ಕೆ ಏಕೆ ಹೋಗಲೇಬೇಕು, ಈ ಬಾರಿಯ ವಿಶೇಷತೆಗಳೇನು?

ಇನ್ನು ವಿವಿಧ ತಳಿಯ ಮಾವಿನ ಹಣ್ಣಿನ ಪ್ರತಿ ಟನ್ ನ (ಒಂದು ಸಾವಿರ ಕೇಜಿಗೆ) ಬೆಲೆ ಹೀಗಿದೆ:
ರಾಜಗಿರ - 17,000

ಬೇನಿಷಾ- 35,000

ಬಾದಾಮಿ- 35,000

ತೋತಾಪುರಿ- 12,000

ಕಾಲಾಪಹಾಡ್ - 25,000

ಮಲ್ಲಿಕಾ- 30,000

ಮಲಗೋಬಾ -45,000

ಮಾವು ಮಾರುಕಟ್ಟೆಗೆ ಶ್ರೀನಿವಾಸಪುರ ತಾಲೂಕು ಕರ್ನಾಟಕ ಮಾತ್ರವಲ್ಲ, ಭಾರತಕ್ಕೇ ಹೆಸರುವಾಸಿ. ಕೋಲಾರ ಜಿಲ್ಲೆ ಶ್ರೀನಿವಾಸಪುರಕ್ಕೆ ಸಮೀಪದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಮಾವಿಗೆ ಸಂಬಂಧಿಸಿದ ಸಂಶೋಧನಾ ಕೇಂದ್ರ ಇದೆ. ಈ ಬಾರಿಯ ಮಾವಿನ ಸುಗ್ಗಿ ಚೆನ್ನಾಗಿದೆ ಎಂದು ರೈತರು, ವರ್ತಕರು ಸಂತೋಷ ವ್ಯಕ್ತಪಡಿಸುತ್ತಾರೆ.

ಇಷ್ಟಾದರೂ ಮಾವು ಸಂಸ್ಕರಣಾ ಕೇಂದ್ರವಾಗಲೀ ಶೀತಲೀಕರಣ ಘಟಕವಾಗಲೀ ಈ ವರೆಗೂ ಸ್ಥಾಪನೆಗೊಂಡಿಲ್ಲ. ಸಂಬಂಧಪಟ್ಟವರು ಈ ವಿಚಾರವಾಗಿ ದಶಕಗಳ ಕಾಲದಿಂದ ಮಾವು ಬೆಳೆಗಾರರ ಮೂಗಿಗೆ ತುಪ್ಪ ಸವರುತ್ತಾ ಬರುತ್ತಿದ್ದಾರೆ. ಕಳೆದ ಅವಧಿಯಲ್ಲಿ ಮಾವು ಮಂಡಳಿಯ ಅಧ್ಯಕ್ಷರಾಗಿದ್ದ ದಳಸನೂರು ಗೋಪಾಲಕೃಷ್ಣ ಸಹ ಇತ್ತ ಗಮನ ಹರಿಸಲಿಲ್ಲ ಎಂದು ತಾಲೂಕಿನ ಮಾವು ಬೆಳೆಗಾರರು ಆರೋಪಿಸುತ್ತಾರೆ.

ಚಿಂತಾಮಣಿಯ ಬೂರಮಾಕಲಹಳ್ಳಿಯಲ್ಲಿ ಮಾವು ಕೊಯ್ಲೋತ್ತರ ಅಭಿವೃದ್ಧಿ ಕಾರ್ಯಾಲಯ ಇದೆ. ಆದರೆ ಅದರಿಂದ ಹೆಚ್ಚಿನ ಪ್ರಯೋಜನ ಇಲ್ಲವೆಂದು ರೈತರು ಅಭಿಪ್ರಾಯ ಪಡುತ್ತಾರೆ.

English summary
Mango growers and sellers happy in Srinivasapura taluk. Here is the ground report of Kolar district Srinivasapura taluk Mango market situation in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X