ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ಕ-ತಂಗಿಯನ್ನು ವಿವಾಹವಾಗಿದ್ದ ಉಮಾಪತಿ ಈಗ ಪೊಲೀಸರ ಅತಿಥಿ!

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಮೇ 17; ಸುಪ್ರಿಯಾ ಮತ್ತು ಲಲಿತಾರನ್ನು ವಿವಾಹವಾಗಿದ್ದ ಕೋಲಾರದ ಉಮಾಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿವಾಹಕ್ಕೆ ಸಂಬಂಧಿಸಿದಂತೆ ಒಟ್ಟು 7 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Recommended Video

ಅಕ್ಕ-ತಂಗಿಯನ್ನು ಮದುವೆಯಾಗಿದ್ದ ಉಮಾಪತಿಯನ್ನು ಅರೆಸ್ಟ್ ಮಾಡಿದ ಪೊಲೀಸರು

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ವೇಗಮಡುಗು ಉಮಾಪತಿ ಸುಪ್ರಿಯಾ ಮತ್ತು ಲಲತಾರನ್ನು 7/5/2021ರಂದು ಒಂದೇ ಮುಹೂರ್ತದಲ್ಲಿ ವಿವಾಹವಾಗಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮಂಗಳೂರು; ಮದುವೆ ದಿನ ಡಿಜೆ ಪಾರ್ಟಿ, ವರ ಪೊಲೀಸ್ ವಶಕ್ಕೆ! ಮಂಗಳೂರು; ಮದುವೆ ದಿನ ಡಿಜೆ ಪಾರ್ಟಿ, ವರ ಪೊಲೀಸ್ ವಶಕ್ಕೆ!

ಅಪ್ರಾಪ್ತ ಯುವತಿಯನ್ನು ವಿವಾಹವಾದ ಪ್ರಕರಣದಲ್ಲಿ ಮದುಮಗನನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗುತ್ತಿದ್ದಂತೆ ಅನುಮಾನಗೊಂಡ ಕೋಲಾರ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅಧಿಕಾರಿಗಳಿಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದರು.

ಕೊರೊನಾ ಆಫರ್: ಅಕ್ಕ- ತಂಗಿ ಇಬ್ಬರನ್ನ ವರಿಸಿದ ಮಧುಮಗ ! ಕೊರೊನಾ ಆಫರ್: ಅಕ್ಕ- ತಂಗಿ ಇಬ್ಬರನ್ನ ವರಿಸಿದ ಮಧುಮಗ !

Man Who Married Sisters

ಮುಳಬಾಗಿಲು ತಹಶೀಲ್ದಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಖೆ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಗ್ರಾಮಕ್ಕೆ ತೆರಳಿ ಪರಿಶೀಲನೆ ಮಾಡಿದ್ದರು. ಈ ವೇಳೆ ಲಲಿತಾಗೆ ಇನ್ನೂ 16 ವರ್ಷ ಎಂಬುದು ಖಚಿತವಾಗಿದೆ.

ದಕ್ಷಿಣ ಕನ್ನಡ; ವಾರಾಂತ್ಯದ ಕರ್ಫ್ಯೂ ನಡುವೆಯೂ 372 ವಿವಾಹ!ದಕ್ಷಿಣ ಕನ್ನಡ; ವಾರಾಂತ್ಯದ ಕರ್ಫ್ಯೂ ನಡುವೆಯೂ 372 ವಿವಾಹ!

ಈ ಹಿನ್ನಲೆಯಲ್ಲಿ ವಿವಾಹವಾ ಉಮಾಪತಿ, ತಾಯಿ, ತಂದೆ ಮತ್ತು ಹುಡುಗಿ ತಾಯಿ, ತಂದೆ ಸೇರಿದಂತೆ ಮದುವೆ ಮಾಡಿಸಿದ್ದ ಪೂಜಾರಿ ಹಾಗು ಲಗ್ನ ಪತ್ರಿಕೆ ಮುದ್ರಿಸಿದವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.

ನಂಗಲಿ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಉಮಾಪತಿ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.

ಇಬ್ಬರನ್ನು ವಿವಾಹ; ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ. ಅಕ್ಕನಿಗೆ ವಿವಾಹವಾಗದೇ ತಂಗಿ ಮದುವೆ ಆಗುವುದಿಲ್ಲ. ಅಕ್ಕನಿಗೆ ಎಲ್ಲಿ ಮದುವೆ ಆಗುವುದಿಲ್ಲವೋ ಎಂದು ಲಲಿತಾ ತನ್ನನ್ನು ಮದುವೆ ಆಗಬೇಕೆಂದರೆ ಸುಪ್ರಿಯಾಳನ್ನು ವಿವಾಹವಾಗಬೇಕು ಎಂದು ಷರತ್ತು ಹಾಕಿದ್ದಳು.

ಪೋಷಕರು, ಗ್ರಾಮಸ್ಥರು ಸಹ ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಹಿರಿಯರ ಸಮ್ಮುಖದಲ್ಲಿಯೇ ಮೇ 7ರಂದು ಉಮಾಪತಿ ಇಬ್ಬರನ್ನೂ ವಿವಾಹವಾಗಿದ್ದರು.

English summary
Kolar district Mulbagal taluk Nangali police arrested Umapathi who married Supriya and Lalitha on May 7th 2021. Case filed against Umapathi under child marriage act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X