ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ; ಕೋವಿಡ್ ಜಾಗೃತಿ ಮೂಡಿಸಲು ವ್ಯಕ್ತಿಯೊಬ್ಬರ ಪುಟ್ಟ ಪ್ರಯತ್ನ!

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಮೇ 09; ಕೋವಿಡ್ ಕುರಿತು ಜನಜಾಗೃತಿ ಮೂಡಿಸಲು ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೋಲಾರದ ವ್ಯಕ್ತಿಯೊಬ್ಬರು ದಿನ ಬೆಳಗಾದರೆ ಕೈಯಲ್ಲಿ ಮೈಕ್ ಹಿಡಿದು ಬೀದಿ-ಬೀದಿ ಅಲೆಯುತ್ತಾ ಕೊರೊನಾ ಕುರಿತು ಜನಜಾಗೃತಿ ಮೂಡಿಸುತ್ತಾ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದಾರೆ.

ಭುಜಕ್ಕೆ ಮೈಕ್ ಹಾಕಿಕೊಂಡು, ಕೈಯಲ್ಲಿ ಒಂದು ಕೋಲು ಹಿಡಿದು ಓಡಾಡುತ್ತಿರುವ ಇವರು ಹೆಸರು ಎಸ್. ಪಿ. ವೆಂಕಟೇಶ್. ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ನಿವಾಸಿ. ಮೂಲತಃ ಗೃಹ ಬಳಕೆ ವಸ್ತುಗಳ ಮಳಿಗೆ ಮಾಲೀಕರಾದ ವೆಂಕಟೇಶ್, ಕಳೆದ ವರ್ಷ ಕೊರೊನಾ ಲಾಕ್‍ಡೌನ್ ವೇಳೆ ಆರಂಭಿಸಿರುವ ಜನಜಾಗೃತಿ ಕಾರ್ಯವನ್ನು ಇಂದಿಗೂ ಮುಂದುವರೆಸಿದ್ದಾರೆ.

ಕೋಲಾರ ಸಂಸದರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತಕೋಲಾರ ಸಂಸದರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಬೆಳಗ್ಗೆ 8 ಗಂಟೆಗೆ ಬಂಗಾರಪೇಟೆಯಲ್ಲಿ ಹೆಚ್ಚು ಜನರು ಸೇರುವಂತಹ ಪ್ರದೇಶವಾದ, ತರಕಾರಿ ಮಾರುಕಟ್ಟೆ, ಕುವೆಂಪು ವೃತ್ತ, ಬಜಾರ್ ರಸ್ತೆ, ಹೂ ಮಾರುಕಟ್ಟೆ ಹೀಗೆ ನಗರದ ಹಲವೆಡೆ ಬೈಕ್‍ನಲ್ಲಿ ತೆರಳಿ, ರಸ್ತೆಯುದ್ದಕ್ಕೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮೈಕ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಕೋಲಾರ; ಮಹಿಳೆ ಸಾವು, ರಸ್ತೆಯಲ್ಲೇ 4 ಗಂಟೆ ಉಳಿದ ಶವ ಕೋಲಾರ; ಮಹಿಳೆ ಸಾವು, ರಸ್ತೆಯಲ್ಲೇ 4 ಗಂಟೆ ಉಳಿದ ಶವ

 Man Creates Awareness On Covid Norms In Bangarapet

ಬಂಗಾರಪೇಟೆ ನಗರದವರೇ ಆಗಿರುವ ಎಸ್‌. ಪಿ. ವೆಂಕಟೇಶ್, ವ್ಯಾಪಾರಿಯಾಗಿ ಈ ಭಾಗದಲ್ಲಿ ಪರಿಚಿತರಾಗಿದ್ದು, ಕಳೆದ ಹಲವು ವರ್ಷಗಳಿಂದಲೂ ಸಮಾಜ ಸೇವೆಯಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಕೊರೊನಾ ಸಮಯದಲ್ಲಿಯೂ ನಮ್ಮೂರಿಗೆ ಏನಾದರೊಂದು ಸೇವೆ ನೀಡಬೇಕು ಎನ್ನುವ ಉದ್ದೇಶದಿಂದಲೇ ಜನಜಾಗೃತಿ ಮೂಡಿಸಲು ಮುಂದಾಗಿದ್ದೇನೆ ಎನ್ನುತ್ತಾರೆ.

ಕೋಲಾರ; ತಾಲೂಕಿಗೆ 2 ಕೋವಿಡ್ ಕೇರ್ ಸೆಂಟರ್ ಆರಂಭ ಕೋಲಾರ; ತಾಲೂಕಿಗೆ 2 ಕೋವಿಡ್ ಕೇರ್ ಸೆಂಟರ್ ಆರಂಭ

ಬೆಳಗ್ಗೆ ಮೈಕ್ ಹಿಡಿದು ತಮ್ಮ ಬೈಕ್‍ನಲ್ಲೇ ಹೊರಡುವ ಇವರು, ರಾಜ್ಯ ಸರ್ಕಾರದ ಮಾರ್ಗಸೂಚಿಗಳು, ಕೋವಿಡ್ ನಿಯಮಗಳು ಹಾಗೂ ಮುಂಜಾಗ್ರತಾ ಕ್ರಮಗಳನ್ನು ರೆಕಾರ್ಡ್ ಮಾಡಿಟ್ಟುಕೊಂಡು, ಮೈಕ್ ಮೂಲಕ ಜನರಿಗೆ ತಿಳಿಸುತ್ತಾರೆ.

ಜನರು ಹೆಚ್ಚಿರುವ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲೇ ತೆರಳಿ ಬಾಯಿ ಮಾತಿನಿಂದಲೇ ದಯವಿಟ್ಟು ಅಂತರ ಕಾಪಾಡಿ, ಮಾಸ್ಕ್ ಹಾಕಿ, ಅನಗತ್ಯ ಸಂಚಾರ ಮಾಡಬೇಡಿ, ಎಲ್ಲರು ಕೊರೊನಾ ಲಸಿಕೆ ಪಡೆದುಕೊಳ್ಳಿ ಎಂದು ಹೇಳುತ್ತಾ ಬೆಳಗ್ಗೆ ಮತ್ತು ಸಂಜೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

Recommended Video

ಪುಕ್ಸಟ್ಟೆ ಸವಲತ್ತು ಬಿಟ್ಟು ಜನಕ್ಕೋಸ್ಕರ ಕೆಲಸ ಮಾಡೋದು ಯಾವಾಗ?? | Oneindia Kannada

ಕೋಲಾರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚತ್ತಿದೆ. ಬಂಗಾರಪೇಟೆ ತಾಲೂಕಿನಲ್ಲೂ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆಯು ಹೆಚ್ಚುತ್ತಲೇ ಇದೆ. ಹೀಗಾಗಿ ಪ್ರತಿನಿತ್ಯ ತಾಲೂಕು ಆಡಳಿತ, ಪುರಸಭೆ, ಪೊಲೀಸರು ಕೊರೊನಾ ಜನಜಾಗೃತಿಯನ್ನು ಮೂಡಿಸುತ್ತಿದ್ದಾರೆ. ವೆಂಕಟೇಶ್ ಅವರು ನಿಸ್ವಾರ್ಥ ಸೇವೆ ಮೂಲಕ ಕೋವಿಡ್ ವಾರಿಯರ್ ಆಗಿ ಮೆಚ್ಚುಗೆ ಪಡೆದಿದ್ದಾರೆ.

English summary
S. P. Venkatesh of Kolar district Bangarapet creating awareness on Covid-19 norms. Venkatesh owner of shop and he speeding morning and evening time for this social work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X