• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಜಿಎಫ್‌ನಲ್ಲಿ ಮಹದೇವಪುರ ಸಬ್ ಇನ್ಸ್‌ಪೆಕ್ಟರ್‌ಗೆ ಚಾಕು ಇರಿತ

By ಕೋಲಾರ ಪ್ರತಿನಿಧಿ
|

ಕೋಲಾರ, ಮಾರ್ಚ್ 4: ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್‌ಗೆ ಚಾಕು ಇರಿಯಲಾಗಿದ್ದು, ಬೆಂಗಳೂರಿನ ಮಹದೇವಪುರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಹರಿನಾಥ್ ಬಾಬು ಅವರಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ.

ಬುಧವಾರ ತಡರಾತ್ರಿ ಕೆಜಿಎಎಫ್ ನಗರದ ಸುಸೈ ಪಾಳ್ಯದಲ್ಲಿ ನಡೆದಿರುವ ಘಟನೆ ನಡೆದಿದ್ದು, ಕಳ್ಳತನ ಪ್ರಕರಣದ ಆರೋಪಿ ಅಪ್ಪೆನ್ ಎನ್ನುವರನ್ನು ಹಿಡಿಯಲು ಬಂದಾಗ ಘಟನೆ ಸಂಭವಿಸಿದೆ.

ವಿಡಿಯೋ; ಗ್ರಾಮ ವಾಸ್ತವ್ಯದಲ್ಲಿ ಬಂಗಾರಪೇಟೆ ತಹಶೀಲ್ದಾರ್ ಡ್ಯಾನ್ಸ್! ವಿಡಿಯೋ; ಗ್ರಾಮ ವಾಸ್ತವ್ಯದಲ್ಲಿ ಬಂಗಾರಪೇಟೆ ತಹಶೀಲ್ದಾರ್ ಡ್ಯಾನ್ಸ್!

ಗಾಯಗೊಂಡಿದ್ದ ಸಬ್ ಇನ್ಸ್‌ಪೆಕ್ಟರ್ ಅವರನ್ನು ಪೊಲೀಸ್ ಇಲಾಖೆಯ ಇತರೆ ಸಿಬ್ಬಂದಿಗಳು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಬ್ ಇನ್ಸ್‌ಪೆಕ್ಟರ್ ಹರಿನಾಥ್ ಬಾಬು ಅವರ ಎರಡು ಕೈಗಳಿಗೆ ಚಾಕು ಇರಿದು ಆರೋಪಿ ಪರಾರಿಯಾಗಿದ್ದಾನೆ. ತಡರಾತ್ರಿ ಮೂವರು ಪೊಲೀಸ್ ಸಿಬ್ಬಂದಿ ಸಮೇತ ಆರೋಪಿ ಬಂಧಿಸಲು ಸಬ್ ಇನ್ಸ್‌ಪೆಕ್ಟರ್ ಹರಿನಾಥ್ ಬಾಬು ಹೋಗಿದ್ದಾಗ ಈ ಘಟನೆ ನಡೆದಿದೆ.

   ಅಬ್ಬಾ ಎಂಥಾ ಕೆಟ್ಟ ರಾಜಕಾರಣಿಗಳು ! ನಾಚಿಗೆಡ್ ಸರ್ಕಾರ ! | Oneindia Kannada

   ಈ ಕುರಿತು ಸ್ಥಳೀಯ ಪೊಲೀಸರಿಗೆ ಮಹದೇವಪುರ ಪೊಲೀಸರು ಮಾಹಿತಿ ನೀಡಿರಲಿಲ್ಲ. ಕೆಜಿಎಫ್ ನಗರದ ಆ್ಯಂಡರ್ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

   English summary
   Mahadevapura Sub Inspector Harinath Babu satabbed with a Knife at KGF in Kolar District.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X