• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್ ಡೌನ್; ಬೆಲೆ ಕುಸಿತದಿಂದ ರೈತರು ಕಂಗಾಲು

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಮೇ 06; ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ಇನ್ನಿಲ್ಲದ ಕಾಟ ಕೊಡುತ್ತಿದೆ. ರಾಜ್ಯ ಸರ್ಕಾರ 14 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿ ಮಾಡಿದರೂ ಸಹ ಸೋಂಕಿತರ ಸಂಖ್ಯೆ ಏರಿಕೆ ತಡೆಯಲು ಸಾಧ್ಯವಾಗಿಲ್ಲ. ಇದರ ನಡುವೆ ಯಾರಿಗೆ ಎಷ್ಟು ಕಷ್ಟ ಆಗಿದಿಯೋ ಗೊತ್ತಿಲ್ಲ, ರೈತರೂ ಮಾತ್ರ ಇನಿಲ್ಲದ ಕಷ್ಟ ಅನುಭವಿಸುತ್ತಿದ್ದಾರೆ.

ಜನತಾ ಕರ್ಫ್ಯೂ ಜಾರಿಯಲ್ಲಿರುವುದರಿಂದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದು, ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಸಿಗದಂತಹ ಹಿನ್ನೆಲೆಯಲ್ಲಿ ಬೆಳೆಯನ್ನು ಎಪಿಎಂಸಿ ಮಾರುಕಟ್ಟೆ ಹಾಗೂ ತೋಟಗಳಲ್ಲಿ ಬಿಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.

5 ಎಕರೆ ಜಮೀನು ಲೀಸ್‌ಗೆ ಪಡೆದು ದಾಳಿಂಬೆ ಬೆಳೆದು 'ಸಿರಿವಂತ'ನಾದ ರೈತ5 ಎಕರೆ ಜಮೀನು ಲೀಸ್‌ಗೆ ಪಡೆದು ದಾಳಿಂಬೆ ಬೆಳೆದು 'ಸಿರಿವಂತ'ನಾದ ರೈತ

ಹಣ್ಣು, ತರಕಾರಿಗಳ ಬೆಲೆ ಕಡಿಮೆಯಾಗಿದೆ. ಎಪಿಎಂಪಿ ಮಾರುಕಟ್ಟೆಗಳು ಬೆಳಗ್ಗೆ 6 ರಿಂದ 12 ಗಂಟೆ ತನಕ ಕಾರ್ಯನಿರ್ವಹಿಸಬೇಕೆಂದು ಸರ್ಕಾರ ಸಹ ಆದೇಶಿಸಿದೆ. ಕೃಷಿ ಕ್ಷೇತ್ರಕ್ಕೆ ಬಹು ದೊಡ್ಡ ಹೊಡೆತ ಬಿದ್ದಿದ್ದು, ಸಮರ್ಪಕವಾಗಿ ಹರಾಜು ಪ್ರಕ್ರಿಯೆ ನಡೆಯದೆ ಲಕ್ಷಾಂತರ ಮೌಲ್ಯದ ಬೆಳೆ ಎಪಿಎಂಸಿಗಳಲ್ಲಿ ಉಳಿಯುವಂತಾಗಿದೆ.

ಶಿವಮೊಗ್ಗ ರೈತ ಸಮಾವೇಶದಿಂದ ರೈತ ಸಂಘಕ್ಕೆ ಲಾಭವೇನು.. ನಷ್ಟವೇನು? ಶಿವಮೊಗ್ಗ ರೈತ ಸಮಾವೇಶದಿಂದ ರೈತ ಸಂಘಕ್ಕೆ ಲಾಭವೇನು.. ನಷ್ಟವೇನು?

ಒಂದು ಕಡೆ ರಾಜ್ಯ ಸರ್ಕಾರ ಕೃಷಿ ಚುಟುವಟಿಕೆಗಳಿಗೆ ಯಾವುದೇ ತೊಂದರೆಯಿಲ್ಲ ಎಂದು ಹೇಳಿದೆ. ಆದರೆ ಎಪಿಎಂಸಿಗಳು ಕೇವಲ 6 ಗಂಟೆಗಳ ಕಾಲ ಮಾತ್ರ ಮಾರಾಟ ಪ್ರಕ್ರಿಯೆ ನಡೆಸುವುದರಿಂದ ರೈತರು ಬೆಳೆದ ಬೆಳೆಗಳನ್ನು ಯಾರು ಖರೀದಿಸುತ್ತಿಲ್ಲ. ಎಪಿಎಂಸಿಗಳಿಗೆ ಬರುವ ಶೇಕಡಾ 70ರಷ್ಟು ಕೃಷಿ ಉತ್ಪನ್ನಗಳು ಮಾರಾಟವಾಗದೆ ಉಳಿಯುತ್ತಿವೆ.

ಕೊಪ್ಪಳದಲ್ಲಿ ಪೇರಲ ಬೆಳೆ ಸಂಸ್ಕರಣೆ ಕ್ಲಸ್ಟರ್‌ ಸ್ಥಾಪನೆ ಕೊಪ್ಪಳದಲ್ಲಿ ಪೇರಲ ಬೆಳೆ ಸಂಸ್ಕರಣೆ ಕ್ಲಸ್ಟರ್‌ ಸ್ಥಾಪನೆ

ಬೆಳೆ ತಂದ ರೈತರು ಕಂಗಾಲು

ಬೆಳೆ ತಂದ ರೈತರು ಕಂಗಾಲು

ರೈತರು ಬೆಳೆಯುವಂತಹ ಉತ್ಪನ್ನಗಳ ಬೆಲೆ ಸಹ ದಿಢೀರ್ ಕುಸಿತವಾಗಿದ್ದು, ಕೂಲಿ ಹಾಗೂ ಸಾಗಾಣಿಕೆ ವೆಚ್ಚವೂ ರೈತರಿಗೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆಗೆ ತಂದ ಉತ್ಪನ್ನಗಳನ್ನು ಖರೀದಿಸಲು ವರ್ತಕರು ಸಹ ಮಾರುಕಟ್ಟೆಗಳತ್ತ ಬರುತ್ತಿಲ್ಲ. ಇದರ ಪರಿಣಾಮ ರೈತರು ಮಾರುಕಟ್ಟೆಯಲ್ಲಿಯೇ ತಾವು ತಂದ ಉತ್ಪನ್ನಗಳನ್ನು ಬಿಟ್ಟು ಹೋಗುತ್ತಿದ್ದಾರೆ.

ಹೂವು ಬೆಳೆಗಾರರ ಸ್ಥಿತಿ

ಹೂವು ಬೆಳೆಗಾರರ ಸ್ಥಿತಿ

ತರಕಾರಿ ಹಾಗೂ ಹಣ್ಣು ಬೆಳೆಗಾರರ ಪರಿಸ್ಥಿತಿ ಮಾತ್ರವಲ್ಲ ಹೂವು ಬೆಳೆಗಾರರ ಸ್ಥಿತಿಯೂ ಹೀಗೆಯೇ ಆಗಿದೆ. ಜಾತ್ರೆ, ಉತ್ಸವಗಳ ಮೇಲೆ ಈಗಾಗಲೇ ಸರ್ಕಾರ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ, ದೇವಾಲಯಗಳಲ್ಲಿ ನಿತ್ಯ ಸಾಂಕೇತಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಸಭೆ-ಸಮಾರಂಭಗಳು ನಡೆಯದ ಪರಿಣಾಮ ಹೂವು ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲಿಯೂ ಹೂವು ಬೆಳೆಗಾರರು ತೀವ್ರ ತೊಂದರೆ ಅನುಭವಿಸಿದ್ದರು, ಇಂದಿಗೂ ಸಾವಿರಾರು ರೈತರಿಗೆ ಸರ್ಕಾರದಿಂದ ಪರಿಹಾರ ಬಂದಿಲ್ಲ.

ಟೊಮೆಟೊ ಬೆಳೆದ ರೈತರು

ಟೊಮೆಟೊ ಬೆಳೆದ ರೈತರು

ಏಷ್ಯಾದ 2ನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎನ್ನುವ ಹೆಗ್ಗಳಿಕೆ ಕೋಲಾರದ ಎಪಿಎಂಸಿಗೆ ಇದೆ. ಆದರೆ ಈಗ ಹಣ್ಣನ್ನು ಕೇಳುವವರಿಲ್ಲ, ಬೆಲೆಯೂ ಇಲ್ಲವಾಗಿದೆ. ಕೋಲಾರ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಬೆಳೆಯುವ ಟೊಮೆಟೊ ಬೆಲೆ ಕೆಜಿಗೆ ಕೇವಲ 2 ರಿಂದ 3 ರೂಪಾಯಿಗೆ ಆಗಿದೆ. ಮಾರುಕಟ್ಟೆಗೆ ತಂದರೂ ವರ್ತಕರು ಖರೀದಿಗೆ ಮುಂದಾಗುತ್ತಿಲ್ಲ. ಇದರೊಂದಿಗೆ ಪ್ರಮುಖ ಸಂಸ್ಕರಣಾ ಘಟಕಗಳು ಟೊಮೆಟೊ ಖರೀದಿಯನ್ನು ಸ್ಥಗಿತಗೊಳಿಸಿದರಿಂದಾಗಿ ಕೋಲಾರ ಎಪಿಎಂಸಿ ಒಂದರಲ್ಲಿಯೇ ನಿತ್ಯ 15-18 ಸಾವಿರ ಬಾಕ್ಸ್‌ಗಳನ್ನು ರೈತರು ಅಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ.

  #Covid19Updates, Bengaluru: ಉದ್ಯಾನನಗರಿಯಲ್ಲಿ 23106 ಹೊಸ ಕೋವಿಡ್ ಸೋಂಕಿತರು | Oneindia Kannada
  ವಿವಿಧ ತರಕಾರಿಗಳು

  ವಿವಿಧ ತರಕಾರಿಗಳು

  ಹೋಟೆಲ್‌, ಬೀದಿ ಬದಿ ಅಂಡಿಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಕ್ಯಾಪ್ಸಿಕಂ, ಬಜ್ಜಿ ಮೆಣಸಿನ ಕಾಯಿ, ಸೌತೆಕಾಯಿ, ಎಲೆಕೋಸ್, ಕ್ಯಾರೆಟ್, ಸೋರೆಕಾಯಿ, ಬೀಟ್‌ರೂಟ್ ಮತ್ತು ಇತರೆ ಕೃಷಿ ಉತ್ಪನ್ನಗಳು ಹರಾಜಾಗದೆ ಕೊಳೆಯುತ್ತಿವೆ.

  ಕೋಲಾರ ಎಪಿಎಂಸಿ ಮಾರುಕಟ್ಟೆಯಿಂದ ದೇಶದ ವಿವಿಧ ರಾಜ್ಯಗಳಿಗೆ ತರಕಾರಿ ಹಾಗೂ ಟೊಮೆಟೊ ಸರಬರಾಜು ಮಾಡಲಾಗುತ್ತದೆ. ಆದರೆ ಈಗ ಜನತಾ ಕರ್ಫ್ಯೂ ಇರುವುದರಿಂದ ಹೊರ ರಾಜ್ಯದ ವರ್ತಕರು ಯಾರು ಬರುತ್ತಿಲ್ಲ.

  English summary
  Farmers will leave loads of vegetables and fruits in Kolar APMC market after there in no demand for it. Kolar famous for tomatoes and now there is no people to buy it.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X