ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋಲಾರ್ ಶಕ್ತಿ ಬಳಸಿಕೊಂಡು ಮಾದರಿಯಾಯ್ತು ಕೋಲಾರದ ಈ ಹಳ್ಳಿ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಮೇ 28: ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ಒಟ್ಟಾಗಿ ಸೇರಿದರೆ ಗ್ರಾಮದಲ್ಲಿ ಎಂಥ ಬದಲಾವಣೆ ಬೇಕಾದರೂ ಸಾಧ್ಯ ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆ ಅಂದರೆ ಕೋಲಾರ ಜಿಲ್ಲೆಯ ತೋರದೇವಂಡ ಹಳ್ಳಿ.

ವಿದ್ಯುತ್ ನಂಬಿ ಸಾಲದ ಸುಳಿಯಲ್ಲಿ ಸಿಲುಕಿ ಕಂಗಾಲಾಗಿದ್ದ ಗ್ರಾಮ ಪಂಚಾಯ್ತಿಗೆ ಇದೀಗ ಹಗಲು ರಾತ್ರಿ ಸೂರ್ಯನಿಂದ ಬೆಳಕು. ಅಭಿವೃದ್ಧಿ ಕಾಣದೆ ಕತ್ತಲಾಗಿದ್ದ ಈ ಗ್ರಾಮಕ್ಕೆ ಈಗ ಸೋಲಾರ್ ಶಕ್ತಿ ಜೀವಾಳ. ಗ್ರಾಮ ಪಂಚಾಯ್ತಿಯ ಈ ಒಂದು ಮಾದರಿ ಎಲ್ಲರ ಗಮನ ಸೆಳೆಯುವಂತಾಗಿದೆ. ಪ್ರತಿ ವರ್ಷ ಬೀದಿ ದೀಪಗಳು ಮತ್ತು ವಿದ್ಯುತ್ ದೀಪಗಳು ಸೇರಿ ಒಟ್ಟು 1 ಕೋಟಿ 20 ಲಕ್ಷದ ರೂಪಾಯಿ ಖರ್ಚು ಬರುತ್ತಿತ್ತು. ಇದರಿಂದ ಈ ಗ್ರಾಮ ಪಂಚಾಯ್ತಿ ಸೋಲಾರ್ ವ್ಯವಸ್ಥೆಗೆ ಮೊರೆ ಹೋಯಿತು. ಅದರಲ್ಲಿ ಯಶಸ್ಸನ್ನೂ ಕಂಡಿತು...

 ಸೋಲಾರ್ ಅಳವಡಿಕೆ ಚಿಂತನೆ ಮಾಡಿದ ಗ್ರಾಮ ಪಂಚಾಯಿತಿ

ಸೋಲಾರ್ ಅಳವಡಿಕೆ ಚಿಂತನೆ ಮಾಡಿದ ಗ್ರಾಮ ಪಂಚಾಯಿತಿ

ಕೋಲಾರದ ತೋರದೇವಂಡಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಇಂದು ನಿನ್ನೆಯದಲ್ಲ. ಜೊತೆಗೆ ವಿದ್ಯುತ್ ಬಿಲ್ ಕೂಡ ಹೆಚ್ಚೇ ಬರುತ್ತಿತ್ತು. ಕಾಡುತ್ತಿದ್ದ ವಿದ್ಯುತ್ ಸಮಸ್ಯೆಯನ್ನು ನಿವಾರಿಸಲೆಂದು ಪಂಚಾಯತಿ ವತಿಯಿಂದ ಈಗ ಗ್ರಾಮ, ಗ್ರಾಮ ಪಂಚಾಯ್ತಿ ಕಟ್ಟಡಕ್ಕೆ ಸೋಲಾರ್ ಅಳವಡಿಕೆ ಮಾಡಲಾಗಿದೆ. ಇದೀಗ ತೋರದೇವಂಡಹಳ್ಳಿ ಗ್ರಾಮದ ಬೀದಿಗಳಲ್ಲಿ ಸೋಲಾರ್ ಲೈಟ್ ಗಳನ್ನು ಅಳವಡಿಸಲಾಗಿದೆ. ಸೋಲಾರ್ ಅಳವಡಿಕೆಯಿಂದ ಶಾಶ್ವತವಾಗಿ ವಿದ್ಯುತ್ ಸಮಸ್ಯೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಲಾಗಿದೆ. ತೋರದೇವಂಡಹಳ್ಳಿ ಗ್ರಾಮ ಪಂಚಾಯ್ತಿಯು ಸ್ವಾವಲಂಬನೆಯ ಪಾಠವನ್ನೂ ಹೇಳುತ್ತಿದೆ.

ವಿಶ್ವದ ದೊಡ್ಡ ಸೋಲಾರ್ ಪಾರ್ಕ್ ಕಾರ್ಯಾರಂಭ; ಇದು ಕರ್ನಾಟಕದ ಹೆಮ್ಮೆವಿಶ್ವದ ದೊಡ್ಡ ಸೋಲಾರ್ ಪಾರ್ಕ್ ಕಾರ್ಯಾರಂಭ; ಇದು ಕರ್ನಾಟಕದ ಹೆಮ್ಮೆ

 ಬಳಕೆ ನಂತರವೂ ಉಳಿಯುತ್ತಿದೆ ವಿದ್ಯುತ್

ಬಳಕೆ ನಂತರವೂ ಉಳಿಯುತ್ತಿದೆ ವಿದ್ಯುತ್

ಗ್ರಾಮ ಪಂಚಾಯ್ತಿಗೆ ಬರುವ ಅನುದಾನವೆಲ್ಲ ಕೇವಲ ವಿದ್ಯುತ್ ಬಿಲ್ ಗೇ ಹೋಗುತ್ತಿತ್ತು. ಹೀಗಾಗಿ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಕೂತು ಸೋಲಾರ್ ಅಳವಡಿಸುವ ತೀರ್ಮಾನ ಮಾಡಿದರು. ಕಂಪನಿಯೊಂದರ ಜೊತೆ ಒಪ್ಪಂದ ಮಾಡಿಕೊಂಡು ಗ್ರಾಮದಲ್ಲಿ ಸೋಲಾರ್ ಅಳವಡಿಸಿದರು. ಇದೀಗ ವಿದ್ಯುತ್ ಸಮಸ್ಯೆಯಿಂದ ದೂರವಾಗಿರುವ ಗ್ರಾಮ ಪಂಚಾಯ್ತಿ, ಹೆಚ್ಚಿಗೆ ಉತ್ಪಾದನೆ ಆಗುತ್ತಿರುವ ಸೋಲಾರ್ ವಿದ್ಯುತ್ ಅನ್ನು ಪಕ್ಕದಲ್ಲೇ ಇರುವ KPTCLಗೆ ನೀಡಲು ತೀರ್ಮಾನ ಮಾಡಿಕೊಂಡಿದೆ. ಸದ್ಯ ತೋರದೇವಂಡಹಳ್ಳಿಯಲ್ಲಿ ಯಶಸ್ಸು ಕಂಡಿದ್ದು, ಇನ್ನುಳಿದ ಊರಲ್ಲೂ ಅಳವಡಿಕೆ ಮಾಡುವ ಪ್ರಯತ್ನದಲ್ಲಿದ್ದಾರೆ.

 ಗ್ರಾಮದ ಬೀದಿಗಳಿಗೆ ಸೋಲಾರ್ ದೀಪ

ಗ್ರಾಮದ ಬೀದಿಗಳಿಗೆ ಸೋಲಾರ್ ದೀಪ

ತೋರದೇವಂಡಹಳ್ಳಿ ಗ್ರಾಮ ಪಂಚಾಯಿತಿ ಚಾವಣಿ ಮೇಲೆಯೇ ಸೋಲಾರ್ ಅಳವಡಿಕೆ ಮಾಡಲಾಗಿದೆ. ಪಂಚಾಯ್ತಿ ಒಳಗೆ ದೊಡ್ಡ ಪ್ಯಾನಲ್ ಹಾಗೂ ಬ್ಯಾಟರಿಗಳನ್ನು ಅಳವಡಿಕೆ ಮಾಡಿ ಇಡೀ ಗ್ರಾಮದ ಎಲ್ಲಾ ಬೀದಿ ದೀಪಗಳಿಗೆ ಸೋಲಾರ್ ಸಂಪರ್ಕ ನೀಡಲಾಗಿದೆ. ಮಾತ್ರವಲ್ಲದೆ ತಮಗೇ ಬೇಕಾದಷ್ಟು ವಿದ್ಯುತ್ ಬಳಕೆ ಮಾಡಿಕೊಂಡು ಉಳಿದ ವಿದ್ಯುತ್ತನ್ನು ಮಾರಾಟ ಮಾಡುತ್ತಿದೆ.

ನವ ಮಂಗಳೂರು ಬಂದರಿನಲ್ಲಿ ಬಾಷ್ ನಿಂದ ಸೌರ ವಿದ್ಯುತ್ ಉತ್ಪಾದನೆನವ ಮಂಗಳೂರು ಬಂದರಿನಲ್ಲಿ ಬಾಷ್ ನಿಂದ ಸೌರ ವಿದ್ಯುತ್ ಉತ್ಪಾದನೆ

 ಇನ್ನಷ್ಟು ಗ್ರಾಮಗಳಲ್ಲಿ ಅಳವಡಿಕೆಗೆ ಚಿಂತನೆ

ಇನ್ನಷ್ಟು ಗ್ರಾಮಗಳಲ್ಲಿ ಅಳವಡಿಕೆಗೆ ಚಿಂತನೆ

ಗ್ರಾಮದ ಪಕ್ಕದಲ್ಲೇ ಇರುವ ಕಾರ್ಖಾನೆಗಳ ಸಹಕಾರದಿಂದ CSR ಅನುದಾನದಲ್ಲಿ ಸುಮಾರು 18 ಲಕ್ಷ ರೂಪಾಯಿಗಳ ವೆಚ್ಚದಲ್ಲಿ 5 ಕೆ.ವಿ ಸೋಲಾರನ್ನು ಗ್ರಾಮ ಪಂಚಾಯ್ತಿ ಕಟ್ಟಡದ ಮೇಲೆ ಅಳವಡಿಕೆ ಮಾಡಿ, ಅದರ ಮೂಲದ ಗ್ರಾಮಗಳಲ್ಲಿರುವ 94 ವಿದ್ಯುತ್ ದೀಪಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ತೋರದೇವಂಡಹಳ್ಳಿ ಗ್ರಾಮದಲ್ಲಿ ಈ ಒಂದು ಪ್ರಯತ್ನ ಯಶಸ್ಸು ಕಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಮಗಳಿಗೆ ವಿಸ್ತರಿಸುವ ಚಿಂತನೆ ನಡೆದಿದೆ.

ಚಿತ್ರಗಳು : ಪಾವಗಡ ಸೋಲಾರ್ ಪಾರ್ಕ್‌ಗೆ ಡಿಕೆ ಶಿವಕುಮಾರ್ ಭೇಟಿಚಿತ್ರಗಳು : ಪಾವಗಡ ಸೋಲಾರ್ ಪಾರ್ಕ್‌ಗೆ ಡಿಕೆ ಶಿವಕುಮಾರ್ ಭೇಟಿ

English summary
Toradevandahalli gram panchayat in kolar district adopts solar energy in village to save electricity cost
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X