ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಟಿ ಲಿಂಗೇಶ್ವರ ನಿರ್ಮಾತೃ ಶ್ರೀ ಸಾಂಭ ಶಿವಮೂರ್ತಿ ವಿಧಿವಶ

|
Google Oneindia Kannada News

ಕೋಲಾರ, ಡಿಸೆಂಬರ್ 15: ವಿಶ್ವವಿಖ್ಯಾತ ಕೋಟಿ ಲಿಂಗೇಶ್ವರ ದೇವಾಲಯವನ್ನು ನಿರ್ಮಿಸಿದ್ದ ಶ್ರೀ ಸಾಂಭ ಶಿವಮೂರ್ತಿ(74) ಅವರು ವಿಧಿವಶರಾಗಿದ್ದಾರೆ.

ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೃದಯಾಘಾತದಿಂದ ಶುಕ್ರವಾರ ರಾತ್ರಿ ಇಹಲೋಕ ತ್ಯಜಿಸಿದರು ಎಂದು ಮೂಲಗಳು ತಿಳಿಸಿವೆ.

ಅನಂತ ಕುಮಾರ್ ನಿಧನಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಶೋಕ ಅನಂತ ಕುಮಾರ್ ನಿಧನಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಶೋಕ

ಗುರುವಾರ ರಾತ್ರಿ ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ಕೂಡಲೆ ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

Kolar: Seer who built Koti Lingeshwara passes away

ಬೆಮೆಲ್ ಸಂಸ್ಥೆಯಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ ಶ್ರೀಗಳು ಅಧ್ಯಾತ್ಮ ಸಾಧನೆಯ ಧ್ಯೇಯ ಹೊತ್ತು 1979 ರಲ್ಲಿ ಉದ್ಯೋಗ ತೊರೆದರು. ನಂತರ ವಿಶ್ವದಲ್ಲೇ ಅತೀ ಎತ್ತರದ್ದು ಎಂಬ ಕೀರ್ತಿ ಪಡೆದ 108 ಅಡಿ ಎತ್ತರದ ಶಿವಲಿಂಗ ಸ್ಥಾಪಿಸಿದರು. ಜಗತ್ಪ್ರಸಿದ್ಧ ಕೋಟಿ ಲಿಂಗೇಶ್ವರವೂ ಇವರದೇ ಸೃಷ್ಟಿ.

ಸ್ವಯಂಘೋಷಿತ ದೇವ ಮಾನವ ಬಾಲ ಸಾಯಿಬಾಬಾ ಹೃದಯ ಸ್ತಂಭನದಿಂದ ನಿಧನಸ್ವಯಂಘೋಷಿತ ದೇವ ಮಾನವ ಬಾಲ ಸಾಯಿಬಾಬಾ ಹೃದಯ ಸ್ತಂಭನದಿಂದ ನಿಧನ

1947 ರ ಆಗಸ್ಟ್ 23 ರಂದು ಜನಿಸಿದ್ದ ಶ್ರೀಗಳು ಪತ್ನಿ ರುಕ್ಮಿಣಿ, ಪುತ್ರ ಶಿವ ಪ್ರಸಾದ್ ಮತ್ತು ಪುಗತ್ರಿ ಅನುರಾಧ ಅವರನ್ನು ಅಗಲಿದ್ದಾರೆ.

ಕೋಟಿ ಲಿಂಗ ಕ್ಷೇತ್ರದ ಮುಕ್ತಿ ಮಂದಿರದಲ್ಲಿ ಶನಿವಾರ ಸಂಜೆ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ. ಕೋಲಾರ ಕೆಜಿಎಫ್ ತಾಲೂಕಿನ ಬೇತಮಂಗಲ ಹೋಬಳಿಯ ಕಮ್ಮಸಂದ್ರದಲ್ಲಿ ಇಂದು ಲಕ್ಷಾಂತರ ಭಕ್ತರ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

English summary
Kolar: Sri Sambha Shivamurthi, who built world famous Koti Lingeshwara passes away due to heart attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X