ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ ಕ್ಲಾಕ್ ಟವರ್ ಮೇಲಿದ್ಧ ಧರ್ಮ ಧ್ವಜ ತೆಗೆಸಿ ಭಾರತ ಧ್ವಜ ಹಾರಿಸಿದ ಪೊಲೀಸರು!

|
Google Oneindia Kannada News

ಕೋಲಾರ, ಮಾ. 19: ಬೆಂಗಳೂರಿನಿಂದ ಕೋಲಾರಕ್ಕೆ ಎಂಟ್ರಿಯಾದರೆ ಮೊದಲು ಸಿಗುವ ಬಸ್ ನಿಲ್ದಾಣವೇ ಕೋಲಾರ ಕ್ಲಾಕ್ ಟವರ್! ಹಸಿರು ಬಣ್ಣದ ಜತೆಗೆ ಒಂದು ಧರ್ಮದ ಧ್ವಜ ದಶಕಗಳಿಂದ ಹಾರಾಡುತ್ತಿತ್ತು! ಕೋಲಾರ ಕ್ಲಾಕ್ ಟವರ್ ಮೇಲಿದ್ದ ಒಂದು ಧರ್ಮದ ಧ್ವಜವನ್ನು ಕೋಲಾರ ಜಿಲ್ಲಾ ಪೊಲೀಸರು ಶನಿವಾರ ತೆರವುಗೊಳಿಸಿದ್ದಾರೆ. ಕೋಲಾರ ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜ ಹಾರಿಸಿ ಕ್ಲಾಕ್ ಟವರ್ ಗೆ ಭಾರತಾಂಭೆಯ ಟಚ್ ನೀಡಿದ್ದಾರೆ!

ಶನಿವಾರ ಬೆಳಗ್ಗೆ ಕೋಲಾರದಲ್ಲಿ ಏನು ಆಗುತ್ತೋ ಎನ್ನುವಷ್ಟು ಆತಂಕ ಮನೆ ಮಾಡಿತ್ತು. ರ್ಯಾಪಿಡ್ ಆಕ್ಷನ್ ಪೋರ್ಸ್ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೋಲಾರ ಜಿಲ್ಲಾ ವರಿಷ್ಠಾಧಿಕಾರಿ ಡಿ. ದೇವರಾಜು ಅಲ್ಲಿಯೇ ಮೊಕ್ಕಾಂ ಹೂಡಿದ್ದರು. ಕ್ಲಾಕ್ ಟವರ್ ಮೇಲೆ ದಶಕಗಳಿಂದ ಹಾರಾಡುತ್ತಿದ್ದ ಒಂದು ಧರ್ಮದ ಪ್ರಾತಿನಿಧಿಕ ಧ್ವಜವನ್ನು ಕೆಳಗೆ ಇಳಿಸಿದ್ದಾರೆ. ಹಸಿರು ಬಣ್ಣದಿಂದ ಕೂಡಿದ್ದ ಇಡೀ ಕ್ಲಾಕ್ ಟವರ್ ಗೆ ಬಿಳಿ ಬಣ್ಣ ಬಳಿದು ತ್ರಿವರ್ಣ ಧ್ವಜ ಬಿಡಿಸಿದ್ದಾರೆ. ಒಂದು ಧರ್ಮದ ಧ್ವಜ ತೆಗೆದು ಟವರ್ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಪೊಲೀಸರ ಕಾರ್ಯ ವೈಖರಿ ಜಿಲ್ಲೆಯಲ್ಲಿ ಭಾರೀ ಸಂಚಲನ ಉಂಟು ಮಾಡಿದೆ.

Recommended Video

ಕೋಲಾರ ಕ್ಲಾಕ್ ಟವರ್ ನಲ್ಲಿ ಬದಲಾವಣೆ! | Oneindia Kannada

ಕೋಲಾರ ನಗರದ ಕ್ಲಾಕ್ ಟವರ್‌ನಲ್ಲಿ ದಶಕಗಳಿಂದ ಹಾರಾಡುತ್ತಿದ್ದ ಒಂದು ಧರ್ಮಕ್ಕೆ ಸೇರಿದ ಧ್ವಜವನ್ನು ಕೋಲಾರ ಜಿಲ್ಲಾ ಪೊಲೀಸರು ಶನಿವಾರ ಗೌರವಪೂರ್ವಕವಾಗಿ ಕೆಳಗೆ ಇಳಿಸಿದ್ದಾರೆ. ಒಂದು ಧರ್ಮ ಪ್ರತಿನಿಧಿಸುವ ಜತೆಗೆ ಹಸಿರುಮಯವಾಗಿದ್ದ 'ಕೋಲಾರ ಕ್ಲಾಕ್ ಟವರ್' ಮೇಲೆ ತಿವರ್ಣ ಧ್ವಜ ಹಾರಿಸಿ ಟವರ್‌ಗೂ ಭಾರತಾಂಬೆ ಬಣ್ಣ ಬಳಿದಿದ್ದಾರೆ. ಪೊಲೀಸರ ಈ ಕಾರ್ಯದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Kolar police hosted national flag in Kolar clock tower after 70 years

ಬೆಂಗಳೂರಿನಿಂದ ಕೋಲಾರಕ್ಕೆ ಪ್ರವೇಶಿಸುತ್ತಿದ್ದಂತೆ ಮೊದಲು ಸಿಗುವ ಬಸ್ ನಿಲ್ದಾಣವೇ ಕೋಲಾರ ಕ್ಲಾಕ್ ಟವರ್. ಸ್ವಾತಂತ್ರ್ಯ ಬಂದು 70 ವರ್ಷವಾದರೂ ಕೋಲಾರ ಕ್ಲಾಕ್ ಟವರ್ ಮೇಲೆ ರಾಷ್ಟ್ರ ಧ್ವಜ ಹಾರಿರಲಿಲ್ಲ. ಒಂದು ಧರ್ಮಕ್ಕೆ ಸೀಮಿತವಾಗಿದ್ದ ಧ್ವಜ ಹಾರಾಡುತ್ತಿತ್ತು. ಅದು ಸಾರ್ವಜನಿಕ ಸ್ಥಳವಾಗಿದ್ದರೂ ಒಂದು ಧರ್ಮದ ಧ್ವಜವೇ ಹಾರಾಡುತ್ತಿತ್ತು. ಅದನ್ನು ಈವರೆಗೂ ಯಾರೂ ಪ್ರಶ್ನೆ ಮಾಡುವ ಗೋಜಿಗೂ ಹೋಗಿರಲಿಲ್ಲ. ಪ್ರಶ್ನೆ ಮಾಡಿದ್ದರೆ ಕೋಮು ಸಾಮರಸ್ಯ ಕದಡುವ ಆತಂಕ ಮನೆ ಮಾಡಿತ್ತು. ಅದೇ ಆತಂಕ ಶನಿವಾರ ಕೂಡ ಮನೆ ಮಾಡಿತ್ತು. ಪೊಲೀಸರ ಬಂದೋ ಬಸ್ತ್‌ ನಡುವೆ ಧರ್ಮ ಧ್ವಜ ತೆಗೆದು ರಾಷ್ಟ್ರ ಧ್ವಜವನ್ನು ಹಾರಿಸಿದ್ದಾರೆ.

ಕ್ಲಾಕ್ ಟವರ್ ಇತಿಹಾಸ:

ಕೋಲಾರಕ್ಕೆ ತನ್ನದೇ ಆತ ಇತಿಹಾಸವಿದೆ. ರಾಮಾಯಣ ಮಹಾ ಭಾರತಕ್ಕಿಂತಲೂ ಮೊದಲು ಕೋಲಾರದ ಬಗ್ಗೆ ಉಲ್ಲೇಖವಾಗಿದೆ. ಕುವಲಾಲಪುರ ಕುವಲಾಲ, ಕೋಲಾಲ, ಕೋಲಾಹಲ ಎಂದೇ ಐತಿಹಾಸಿಕವಾಗಿ ಖ್ಯಾತಿ ಪಡೆದಿರುವ ಕೋಲಾರ ಗಂಗರ ರಾಜಧಾನಿ. ಚೋಳರು, ಪಾಂಡ್ಯರು, ವಿಜಯನಗರ ಸಾಮ್ರಾಜ್ಯ ಆಳ್ವಿಕೆಗೂ ಕೋಲಾರ ಒಳಪಟ್ಟಿತ್ತು. ಕೋಲಾರಮ್ಮ ದೇಗುಲಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂತಹ ನಗರಕ್ಕೆ ಪ್ರವೇಶ ಕೊಡುವ ಆರಂಭದಲ್ಲಿ ಸಿಗುವ ಕ್ಲಾಕ್ ಟವರ್ ನಿರ್ಮಾಣವಾಗಿರುವುದು 1948 ರಲ್ಲಿ.

Kolar police hosted national flag in Kolar clock tower after 70 years

ಕ್ಲಾಕ್ ಟವರ್ ಮೂಲ ಹುಡುಕಿದರೆ, ಕೋಲಾರದ ಉದ್ಯಮಿ ಮಹಮದ್ ಮುಸ್ತಫಾ ನಿರ್ಮಾಣ ಮಾಡಿದ್ದಾರೆ ಎಂಬ ಮಾಹಿತಿ ದೊರೆಯುತ್ತದೆ. ಇದರ ಇತಿಹಾಸ, ಉದ್ದೇಶ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ. ಕೋಲಾರ ಕ್ಲಾಕ್ ಟವರ್ ಸಾರ್ವಜನಿಕ ಪ್ರದೇಶವಾಗಿದ್ದರೂ, ಅಲ್ಲಿ ಒಂದು ಧರ್ಮಕ್ಕೆ ಸೇರಿದ ಧ್ವಜ ಹಾರಾಡುತ್ತಿತ್ತು. ಇದಕ್ಕೆ ಇದೀಗ ಕೋಲಾರ ಪೊಲೀಸರು ಮುಕ್ತಿಗೊಳಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

English summary
Indias tricolor flag has been flown by The kolar police after clearing a flag of one religion: kolar clock tower changed as tricolor clock tower now more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X