• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಆಫರ್: ಅಕ್ಕ- ತಂಗಿ ಇಬ್ಬರನ್ನ ವರಿಸಿದ ಮಧುಮಗ !

|
Google Oneindia Kannada News

ಬೆಂಗಳೂರು, ಮೇ. 15: ಕೊರೊನಾ ಆತಂಕದಲ್ಲಿ ಜನ ಸಾಯುತ್ತಿದ್ದಾರೆ. ಇಂತಹ ಕಷ್ಟ ಕಾಲದಲ್ಲಿ ಅಕ್ಕ ತಂಗಿಯನ್ನು ಇಬ್ಬರನ್ನು ಒಂದೇ ದಿನ ಮದುವೆಯಾಗುವ ಮೂಲಕ ಮಧುಮಗನ " ಕೊರೊನಾ ಆಫರ್ ಮದುವೆ" ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಕೊರೊನಾಗೆ ಜೀವ ಉಳಿಸಿಕೊಳ್ಳುವುದೇ ಕಷ್ಟ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈತ ಮಾತ್ರ ವಾರದ ಹಿಂದೆ ಒಂದೇ ದಿನ ಅಕ್ಕ ತಂಗಿಯನ್ನು ವರಿಸಿ ಇದೀಗ ರಾಜ್ಯದೆಲ್ಲೆಡೆ ಸುದ್ದಿಯಾಗಿದ್ದಾನೆ.

   ಅಕ್ಕ-ತಂಗಿಯನ್ನು ಮದುವೆಯಾಗಿದ್ದ ಉಮಾಪತಿಯನ್ನು ಅರೆಸ್ಟ್ ಮಾಡಿದ ಪೊಲೀಸರು

   ಅಂದಹಾಗೆ ಈ ಅಪರೂಪದ ಕೊರೊನಾ ಆಫರ್ ಮದುವೆ ನಡೆದಿರುವುದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ತಿಮ್ಮರಾವುತನಹಳ್ಳಿ ಪಂಚಾಯಿತಿ ವೇಗಮಡುಗು ಗ್ರಾಮದಲ್ಲಿ. ಈ ಗ್ರಾಮದ ರಾಣೆಮ್ಮ ಮತ್ತು ಸುಬ್ಬಮ್ಮ ನಾಗರಾಜಪ್ಪ ಅವರ ದ್ವಿತೀಯ ಮತ್ತು ತೃತೀಯ ಪುತ್ರಿ ಇಬ್ಬರು ಪುತ್ರಿಯರನ್ನು ಗಡ್ಡೂರು ಗ್ರಾಮ ಉಪಾಪತಿ ಎಂಬಾತ ವರಿಸಿದ್ದಾನೆ. ಸುಪ್ರಿಯಾ ಮತ್ತು ಲಲಿತ ಇಬ್ಬರನ್ನು ಮೇ. 7 ರಂದು ಮದುವೆಯಾಗಿದ್ದಾನೆ. ಅರತಕ್ಷತೆ ಕಾರ್ಯಕ್ರಮವನ್ನು ವಧುವಿನ ಸ್ವಗೃಹ ವೇಗಮಡುಗು ಗ್ರಾಮದಲ್ಲಿ ನಡೆಸಿಕೊಡಲಾಗಿದೆ. ಈತ ಇಬ್ಬರನ್ನು ವರಿಸಿರುವ ಚಿತ್ರ ಹಾಗೂ ಲಗ್ನ ಪತ್ರಿಕೆ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

   ಮದುವೆಯಾಗಲಿಕ್ಕೆ ಒಂದು ವಧು ಸಿಗುವುದೇ ಕಷ್ಟ. ಇದರ ನಡುವೆ ಕೊರೊನಾ ಭೀತಿ. ಯಾರ ಜೀವ ಎಲ್ಲಿ ಅಂತ್ಯವೋ ಎನ್ನುವ ಭಯದ ವಾತಾವರಣ. ಇದರ ನಡುವೆಯೂ ಉಪಾಪತಿ ಅಕ್ಕ ತಂಗಿಯರನ್ನು ಒಂದೇ ದಿನ ಮದುವೆಯಾಗಿದ್ದು, ಆತನ ಮದುವೆ ಚಿತ್ರಗಳು ಎಲ್ಲಡೆ ವೈರಲ್ ಆಗಿವೆ. ನಾಗರಾಜಪ್ಪನಿಗೆ ಇಬ್ಬರು ಪತ್ನಿಯರಿದ್ದು, ಅಕ್ಕನನ್ನು ಕೇಳಿದಾಗ, ತಂಗಿಯನ್ನು ಕೂಡ ಮದುವೆಯಾಗಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ವಧುವಿನ ಕಡೆಯವರ ಈ ಬೇಡಿಕೆ ಒಪ್ಪಿ ಉಮಾಪತಿ ಮದುವೆಯಾಗಿದ್ದಾನೆ ಎನ್ನಲಾಗಿದೆ.

   English summary
   A man from Kolar married to two sisters on the same day, which is viral on a social media.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X