ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

7 ಬಾರಿ ಸಂಸದ ಕೆ.ಎಚ್.ಮುನಿಯಪ್ಪ ಗಿಂತಲೂ ಪತ್ನಿ 64 ಪಟ್ಟು ಸಿರಿವಂತೆ!

|
Google Oneindia Kannada News

ಬೆಂಗಳೂರು, ಮಾರ್ಚ್ 30: ಕೋಲಾರ ಕ್ಷೇತ್ರದಿಂದ ಸತತ ಏಳು ಬಾರಿ ಸಂಸದರಾಗಿ ಆಯ್ಕೆ ಆಗಿರುವ ಕೆ.ಎಚ್.ಮುನಿಯಪ್ಪ ಅವರ ಎಂಟನೇ ಬಾರಿ ಆಯ್ಕೆ ಆಗಲೆಂದು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.

ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರು ಈ ಹಿಂದೆ ಯುಪಿಎ ಆಡಳಿತವಿದ್ದಾಗ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು. ಈ ಬಾರಿಯೂ ಅವರು ಮೈತ್ರಿ ಅಭ್ಯರ್ಥಿಯಾಗಿ ಕೋಲಾರದಿಂದ ಕಣಕ್ಕೆ ಇಳಿದಿದ್ದು, ಕೆಲವು ಅಡೆತಡೆಗಳಿದ್ದರೂ ಸಹ ಅವರೇ ಗೆಲ್ಲುವ ಅಭ್ಯರ್ಥಿ ಎನ್ನಲಾಗುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಾಮಪತ್ರದಲ್ಲಿ ಸಲ್ಲಿಸಿರುವ ವಿವರದಂತೆ ಕೆ.ಎಚ್.ಮುನಿಯಪ್ಪ ಅವರು ಬೆಂಗಳೂರು ವಿವಿಯಲ್ಲಿ ಬಿ.ಎ. ಮತ್ತು ಎಲ್‌ಎಲ್‌ಬಿ ವ್ಯಾಸಾಂಗ ಮಾಡಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ಅವರ ವಿರುದ್ಧ 'ಜಾತಿ ನಿಂದನೆ'ಗೆ ಸಂಬಂಧಿಸಿದ ಪ್ರಕರಣವೊಂದು ಇದೆ.

ಕೆ.ಎಚ್.ಮುನಿಯಪ್ಪ ಅವರು ಈ ಆರ್ಥಿಕ ವರ್ಷದಲ್ಲಿ 50.71 ಲಕ್ಷ ಹಣಕ್ಕೆ ಆದಾಯ ತೆರಿಗೆ ಪಾವತಿಸಿದ್ದಾರೆ. ಅವರ ಪತ್ನಿ 55.46 ಲಕ್ಷಕ್ಕೆ ಆದಾಯ ತೆರಿಗೆ ಪಾವತಿಸಿದ್ದಾರೆ. ಮುನಿಯಪ್ಪ ಅವರ ಬಳಿ 15.75 ಲಕ್ಷ ನಗದು ಹಣವಿದೆ. ಪತ್ನಿ ಬಳಿ 1.22 ಲಕ್ಷ ನಗದು ಇದೆ.

ವೀರಪ್ಪ ಮೊಯ್ಲಿ ಅವರ ಒಟ್ಟು ಆಸ್ತಿಗಿಂತಲೂ 14 ಪಟ್ಟು ಹೆಚ್ಚು ಸಾಲವಿದೆ ವೀರಪ್ಪ ಮೊಯ್ಲಿ ಅವರ ಒಟ್ಟು ಆಸ್ತಿಗಿಂತಲೂ 14 ಪಟ್ಟು ಹೆಚ್ಚು ಸಾಲವಿದೆ

ಮುನಿಯಪ್ಪ ಅವರ ಬ್ಯಾಂಕ್ ಖಾತೆಯಲ್ಲಿ 3.60 ಲಕ್ಷ ಹಣ ಇದೆ. ಪತ್ನಿ ಅವರ ಬ್ಯಾಂಕ್ ಖಾತೆಯಲ್ಲಿ 3.53 ಲಕ್ಷ ಹಣ ಇದೆ. 1 ಲಕ್ಷ ಮೌಲ್ಯದ ಷೇರುಗಳಿದ್ದರೆ, ಇಪಿಎಫ್ ಖಾತೆಯಲ್ಲಿ 6.26 ಲಕ್ಷ ಹಣ ಇದೆ. ಪತ್ನಿ ಹೆಸರಲ್ಲಿ 1.85 ಕೋಟಿ ಮೌಲ್ಯದ ಷೇರು ಇದೆ. ಎಲ್‌ಐಸಿಯಲ್ಲಿ 1.45 ಲಕ್ಷ ಹಣ ಇದೆ.

ಮುನಿಯಪ್ಪ ಬಳಿ ಇರುವ ಕಾರುಗಳೆಷ್ಟು?

ಮುನಿಯಪ್ಪ ಬಳಿ ಇರುವ ಕಾರುಗಳೆಷ್ಟು?

ಮುನಿಯಪ್ಪ ಅವರ ಹೆಸರಿನಲ್ಲಿ 20.15 ಲಕ್ಷ ಮೌಲ್ಯದ ಒಂದು ಇನ್ನೋವಾ ಕಾರಿದೆ. ಅವರ ಮಡದಿ ಹೆಸರಲ್ಲಿ ಯಾವುದೇ ಮೋಟಾರು ವಾಹನಗಳು ಇಲ್ಲ. ಮುನಿಯಪ್ಪ ಬಳಿ 3 ಲಕ್ಷ ಮೌಲ್ಯದ ಚಿನ್ನಾಭರಣ ಇದ್ದರೆ ಪತ್ನಿ ಬಳಿ 29.31 ಲಕ್ಷ ಮೌಲ್ಯದ ಚಿನ್ನಾಭರಣ ಇದೆ. 45.89 ಲಕ್ಷ ಹಣವನ್ನು ಕಚೇರಿ ಮತ್ತು ಪೀಠೋಪಕರಣ ಇನ್ನಿತರೆ ವಸ್ತುಗಳಿಗೆ ಬಳಸಿದ್ದಾರೆ. ಸಾಲ ಹಾಗೂ ಮುಂಗಡವಾಗಿ ಮುನಿಯಪ್ಪ ಅವರ ಪತ್ನಿ 1.80 ಕೋಟಿ ರೂಪಾಯಿ ನೀಡಿದ್ದಾರೆ.

ಲಕ್ಷ್ಮೀ ಪುತ್ರ ಡಿ.ಕೆ.ಸುರೇಶ್ ಅವರ ಒಟ್ಟು ಆಸ್ತಿ ಎಷ್ಟು? ಲಕ್ಷ್ಮೀ ಪುತ್ರ ಡಿ.ಕೆ.ಸುರೇಶ್ ಅವರ ಒಟ್ಟು ಆಸ್ತಿ ಎಷ್ಟು?

ಕೆ.ಎಚ್.ಮುನಿಯಪ್ಪ ಅವರ ಜಮೀನೆಷ್ಟಿದೆ?

ಕೆ.ಎಚ್.ಮುನಿಯಪ್ಪ ಅವರ ಜಮೀನೆಷ್ಟಿದೆ?

ಕೆ.ಎಚ್.ಮುನಿಯಪ್ಪ ಅವರ ಬಳಿ 8 ಎಕರೆ 18 ಗುಂಟೆ ಕೃಷಿ ಜಮೀನಿದೆ. ಇದರಲ್ಲಿ ನಾಲ್ಕು ಎಕರೆ ಸರ್ಕಾರ ಕೊಟ್ಟಿದ್ದರೆ ಇನ್ನುಳಿದದದ್ದು ಪಿತ್ರಾರ್ಜಿತ, ಇದರ ಅಭಿವೃದ್ಧಿಗೆ ಮುನಿಯಪ್ಪನವರು 50 ಲಕ್ಷ ಖರ್ಚು ಮಾಡಿದ್ದಾರೆ, ಆದರೆ ಇದರ ಈಗಿನ ಮಾರುಕಟ್ಟೆ ಮೌಲ್ಯವನ್ನು ಅವರು ಹೇಳಿಲ್ಲ.

ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹೊಂದಿರುವ ಆಸ್ತಿ ಎಷ್ಟು?ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹೊಂದಿರುವ ಆಸ್ತಿ ಎಷ್ಟು?

ಮುನಿಯಪ್ಪ ಪತ್ನಿ ಭಾರಿ ಸಿರಿವಂತೆ

ಮುನಿಯಪ್ಪ ಪತ್ನಿ ಭಾರಿ ಸಿರಿವಂತೆ

ಕೆ.ಎಚ್.ಮುನಿಯಪ್ಪ ಅವರ ಪತ್ನಿ ಬಳಿ ಬರೋಬ್ಬರಿ 243.2 ಎಕರೆ ಕೃಷಿ ಜಮೀನಿದೆ. ಇದರ ಈಗಿನ ಮಾರುಕಟ್ಟೆ ಮೌಲ್ಯ 637.72 ಕೋಟಿ ರೂಪಾಯಿಗಳು. ಇತ್ತೀಚೆಗೆ ಕೆ.ಎಚ್.ಮುನಿಯಪ್ಪ ಅವರ ಜಮೀನಿನ ಸಂಬಂಧ ವಿವಾದವೊಂದು ಎದ್ದಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಡದಿ ಹೆಸರಲ್ಲಿ ಭಾರಿ ಮೊತ್ತದ ಸ್ಥಿರಾಸ್ತಿ

ಮಡದಿ ಹೆಸರಲ್ಲಿ ಭಾರಿ ಮೊತ್ತದ ಸ್ಥಿರಾಸ್ತಿ

ಕೆ.ಎಚ್.ಮುನಿಯಪ್ಪ ಅವರ ಹೆಸರಿನಲ್ಲಿ 8 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡವೊಂದು ಇದೆ. ಪತ್ನಿ ಹೆಸರಲ್ಲಿ ಯಾವುದೇ ವಾಣಿಜ್ಯ ಕಟ್ಟಡ ಇಲ್ಲ. ಪತ್ನಿ ಹೆಸರಲ್ಲಿ ಐದು ವಸತಿ ಕಟ್ಟಡಗಳಿವೆ ಇವುಗಳ ಒಟ್ಟು ಮಾರುಕಟ್ಟೆ ಮೌಲ್ಯ 14.11 ಕೋಟಿ. ಕೆ.ಎಚ್.ಮುನಿಯಪ್ಪ ಅವರ ಒಟ್ಟು ಸ್ಥಿರಾಸ್ತಿ ಮೌಲ್ಯ 8.50 ಕೋಟಿ ರೂಪಾಯಿ, ಮುನಿಯಪ್ಪ ಪತ್ನಿಯ ಒಟ್ಟು ಸ್ಥಿರಾಸ್ತಿ ಮೌಲ್ಯ 641.83 ಕೋಟಿ.

ಮುನಿಯಪ್ಪ ಮೇಲಿನ ಸಾಲವೆಷ್ಟು?

ಮುನಿಯಪ್ಪ ಮೇಲಿನ ಸಾಲವೆಷ್ಟು?

ಕೆ.ಎಚ್.ಮುನಿಯಪ್ಪ ಅವರ ಮೇಲೆ 4.53 ಕೋಟಿ ಸಾಲವಿದೆ. ಅವರ ಪತ್ನಿ ಅವರ ಮೇಲೆ 9.84 ಕೋಟಿ ಸಾಲವಿದೆ. ಕೆ.ಎಚ್.ಮುನಿಯಪ್ಪ ಅವರು 4.31 ಲಕ್ಷ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ, ಪತ್ನಿ ಅವರು ಯಾವುದೇ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ.

ಕೆ.ಎಚ್.ಮುನಿಯಪ್ಪ ಒಟ್ಟು ಆಸ್ತಿ ಎಷ್ಟು?

ಕೆ.ಎಚ್.ಮುನಿಯಪ್ಪ ಒಟ್ಟು ಆಸ್ತಿ ಎಷ್ಟು?

ಕೆ.ಎಚ್.ಮುನಿಯಪ್ಪ ಅವರ ಒಟ್ಟು ಆಸ್ತಿ, 10 ಕೋಟಿ ಇದೆ. ಅದೇ ಅವರ ಪತ್ನಿ ಅವರ ಒಟ್ಟು ಆಸ್ತಿ 645.28 ಕೊಟಿ ರೂಪಾಯಿಗಳು, ಕೆ.ಎಚ್.ಮುನಿಯಪ್ಪ ಅವರಿಂಗಲೂ ಅವರ ಮಡದಿ 64 ಪಟ್ಟು ಹೆಚ್ಚು ಶ್ರೀಮಂತರು.

English summary
Kolar Lok sabha constituency candidate and past 7 times MP and former minister KH Muniyappa asset details. His wife is more richer than him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X