ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬರಡಾಗಿದ್ದ ಕೋಲಾರದ ಬೆಟ್ಟಕ್ಕೆ ಈಗ ರಿಯಲ್ ಎಸ್ಟೇಟ್ ಕರಿನೆರಳು

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಮಾರ್ಚ್ 12: ಅದು ಸುಂದರವಾದ ಬೆಟ್ಟ, ಕಣ್ಮನ ತಣಿಸುವಂತಹ ಪ್ರಕೃತಿ ಸೌಂದರ್ಯ ಹೊಂದಿದೆ. ಕೋಲಾರ ನಗರದಿಂದ ಕೂಗಳತೆ ದೂರದಲ್ಲಿರೋ ಈ ಜಾಗದ ಸುತ್ತಮುತ್ತಲಿನ ನಿವೇಶನಗಳ ಬೆಲೆ ಆಕಾಶದತ್ತ ಬೆಳೆದು ನಿಂತಿದೆ. ಹೀಗಿರುವಾಗ ರಿಯಲ್ ಎಸ್ಟೇಟ್ ಉದ್ಯಮಿಗಳು ಕಮೀಷನ್ ಆಸೆಗೆ ಬಿದ್ದು ಅಲ್ಲಿರುವ ಪ್ರಾಣಿ ಸಂಕುಲಕ್ಕೆ ಸಂಚಕಾರ ತರುತ್ತಿದ್ದಾರೆ.

ಕಣ್ಣು ಹಾಯಿಸಿದಷ್ಟೂ ಬೆಟ್ಟ ಗುಡ್ಡಗಳ ಸಾಲುಗಳಿದ್ದು, ಭೀಕರ ಬರಗಾಲದಲ್ಲೂ ನಯನ ಮನೋಹರ ದೃಶ್ಯಗಳು ಕಾಣಸಿಗುತ್ತವೆ. ಅದರ ಪಕ್ಕದಲ್ಲೇ ಸಣ್ಣ ಪುಟ್ಟ ಹಳ್ಳಿಗಳಿವೆ. ಹಾಗಂತ ಇದು ಮಲೆನಾಡು ಅಲ್ಲ, ಬದಲಿಗೆ ಬರದ ನಾಡು ಕೋಲಾರ ನಗರದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ತೇರಹಳ್ಳಿ ಬೆಟ್ಟ.

ಕೋಲಾರಕ್ಕೆ ನೀರು ಹರಿಸಲು ಅಟಲ್ ಭೂಜಲ್ ಯೋಜನೆ ಜಾರಿ ಕೋಲಾರಕ್ಕೆ ನೀರು ಹರಿಸಲು ಅಟಲ್ ಭೂಜಲ್ ಯೋಜನೆ ಜಾರಿ

ಹೊಸ ರೆಸಾರ್ಟ್ ಗಳ ನಿರ್ಮಾಣ

ಹೊಸ ರೆಸಾರ್ಟ್ ಗಳ ನಿರ್ಮಾಣ

ಈ ಬೆಟ್ಟದ ಸುತ್ತಮುತ್ತ ಬರೋಬ್ಬರಿ ಏಳು ಹಳ್ಳಿಗಳಿವೆ. ಒಂದು ಕಾಲದಲ್ಲಿ ಬೆಟ್ಟದ ಮೇಲಿರುವ ಗ್ರಾಮಗಳಿಗೆ ನಡೆದಾಡಲು ರಸ್ತೆಯೂ ಇರಲಿಲ್ಲ, ಆದರೆ ಈಗ ಓಡಾಡಲು ರಸ್ತೆ ಮಾಡಿ ಅಲ್ಲಿಗೆ ಜನ ಸಂಚಾರ ಆರಂಭವಾಗಿದ್ದೇ ತಡ, ರಿಯಲ್ ಎಸ್ಟೇಟ್ ನವರು ಆಕ್ರಮಿಸಿ ಬಿಟ್ಟಿದ್ದಾರೆ.

ಗೆಸ್ಟ್ ಹೌಸ್, ಫಾರ್ಮ್ ಹೌಸ್, ಎಸ್ಟೇಟ್ ನಿಂದ ಬೆಟ್ಟ ಈಗ ಹೊಸ ರೂಪ ಪಡೆಯುತ್ತಿದ್ದು, ಸದ್ಯ ಹೊಸ ರೆಸಾರ್ಟ್ ಗಳು ನಿರ್ಮಾಣವಾಗುತ್ತಿವೆ. ಇದರ ಪರಿಣಾಮ ಬೆಟ್ಟದ ಮೇಲೆ ಅಂಗೈ ಅಗಲ ಜಾಗ ಕೂಡಾ ಸಿಗುತ್ತಿಲ್ಲ.

ರಾಜಧಾನಿಯಿಂದ 60 ಕಿ.ಮೀ ದೂರ

ರಾಜಧಾನಿಯಿಂದ 60 ಕಿ.ಮೀ ದೂರ

ಅಲ್ಲದೆ ವೀಕೆಂಡ್ ನಲ್ಲಿ ಮಸ್ತಿ ಮಾಡಬೇಕೆಂದೇ ಬರುವ ಜನ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಅಲ್ಪ ಸ್ವಲ್ಪ ಇರೋ ಅರಣ್ಯ ಇಲಾಖೆಯ ಭೂಮಿಗಳನ್ನು ಕಬಳಿಸುತ್ತಿರುವ ಆರೋಪ ಕೇಳಿಬರುತ್ತಿದೆ

ತಿರುಪತಿಗೆ ಹೋಗುವ ಮಾರ್ಗದಲ್ಲಿ ಕೋಲಾರದ ಈ ತೇರಹಳ್ಳಿ ಬೆಟ್ಟ ನೂರಾರು ಉದ್ಯಮಿಗಳನ್ನು ಆಕಷಿ೯ಸುತ್ತಿದೆ. ಅಲ್ಲದೆ ರಾಜ್ಯ ರಾಜಧಾನಿಗೆ ಕೇವಲ 60 ಕಿ.ಮೀ ದೂರದಲ್ಲಿರುವ ಈ ಬೆಟ್ಟದ ಮೇಲೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳಿವೆ.

ಜೀವ ವೈವಿಧ್ಯತೆ ಇರುವ ಸ್ಥಳ

ಜೀವ ವೈವಿಧ್ಯತೆ ಇರುವ ಸ್ಥಳ

ಪುರಾತನ ದೇವಾಲಯಗಳಿವೆ, ಸಿನಿಮಾ ಶೂಟಿಂಗ್ ಸ್ಪಾಟ್ ಗಳಿವೆ. ಈಗಾಗಲೇ ಅಣ್ಣಾಬಾಂಡ್, ಜಂಗ್ಲಿ, ಮನಸಾರೆ, ಕೆಂಡಸಂಪಿಗೆ, ಸೇರಿದಂತೆ ಹಲವು ಸಿನಿಮಾಗಳ ಶೂಟಿಂಗ್ ಮಾಡಲಾಗಿದೆ. ಹಾಗಾಗಿ ತೇರಹಳ್ಳಿ ಬೆಟ್ಟ ಸದ್ಯ ಒಂದು ರೀತಿಯ ಹಾಟ್ ಸ್ಪಾಟ್ಆಗಿದೆ.

ಈ ರೀತಿ ಬೆಳವಳಿಣಿಗೆಯಾಗಿದ್ದೇ ಆದರೆ ಇಲ್ಲಿರುವ ಜೀವ ವೈವಿಧ್ಯತೆ ಹಾಳಾಗುವ ಜೊತೆಗೆ ಈಗಾಗಲೇ ನೂರಾರು ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿ ಇಡೀ ಪ್ರದೇಶ ಹಾಳಾಗುತ್ತದೆ ಅನ್ನೋದು ಪರಿಸರ ಪ್ರೇಮಿಗಳ ವಾದ.

ರಿಯಲ್ ಎಸ್ಟೇಟ್ ನಿಂದ ಚಿನ್ನದ ಬೆಲೆ

ರಿಯಲ್ ಎಸ್ಟೇಟ್ ನಿಂದ ಚಿನ್ನದ ಬೆಲೆ

ಅರಣ್ಯ ಇಲಾಖೆಯು ಇಲ್ಲಿರುವ ಜೀವ ವೈವಿಧ್ಯತೆ ಹಾಗೂ ಅರಣ್ಯ ಪ್ರದೇಶವನ್ನು ಬೆಟ್ಟ ಗುಡ್ಡಗಳನ್ನು ಉಳಿಸುವತ್ತ ಕ್ರಮ ಕೈಗೊಳ್ಳಬೇಕು.

ಒಂದು ಕಾಲದಲ್ಲಿ ಜನ ವಾಸ ಮಾಡಲು ಯೋಗ್ಯವಲ್ಲದಂತಿದ್ದ ಬೆಟ್ಟದಲ್ಲಿ ಸದ್ಯ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಸದಾ ಒಂದಲ್ಲಾ ಒಂದು ಕೆಲಸಗಳಲ್ಲಿ ಬ್ಯುಸಿಯಾಗಿರುವ ಹಣವಂತರಿಗೆ ಇದೊಂದು ನೆಮ್ಮದಿ ನೀಡುವ ಸ್ವರ್ಗದಂತಾಗಿದ್ದು, ಬೆಟ್ಟದ ಮೇಲೊಂದು ಮನೆಯ ಮಾಡಿ ಅನ್ನೋ ಮಾತು ಸದ್ಯ ತೇರಹಳ್ಳಿ ಬೆಟ್ಟಕ್ಕೆ ಹೇಳಿ ಮಾಡಿಸಿದಂತಿದೆ.

English summary
The Terahalli Hill of Kolar is Attracted by hundreds of businessmen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X