ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸರಗೊಂಡು ಕ್ಯಾಪ್ಸಿಕಂ ತೋಟಕ್ಕೆ ಮೇಕೆಗಳನ್ನು ಮೇಯಲು ಬಿಟ್ಟ ಕೋಲಾರದ ರೈತ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಏಪ್ರಿಲ್ 14: ಕೊರೊನಾ ಕರಿನೆರಳು ರೈತರನ್ನು ಬಿಡದೇ ಕಾಡುತ್ತಿದೆ. ತಾವು ಬೆವರು ಸುರಿಸಿ ಬೆಳೆದ ಬೆಳೆಗಳನ್ನು ಮಾರಲಾಗದೇ, ನಷ್ಟಕ್ಕೆ ಬಿದ್ದಿರುವ ರೈತರ ಅಸಹಾಯಕತೆ ಹೇಳಲು ಅಸಾಧ್ಯ.

ಲಕ್ಷಗಟ್ಟಲೆ ಹಣ ಸುರಿದು ಬೆಳೆದ ಬೆಳೆಯು ಕೈಗೆ ಬಂದರೂ ಅದನ್ನು ಮಾರಾಟ ಮಾಡಲಾಗದೇ ನಷ್ಟ ಅನುಭವಿಸುತ್ತಿರುವ ಸಾವಿರಾರು ರೈತರು ರಾಜ್ಯದಲ್ಲಿದ್ದಾರೆ. ಅವರಲ್ಲಿ ಕೆಲವರು ಬೆಳೆಗಳನ್ನು ಕಿತ್ತು ಹಾಕಿದರೆ, ಇನ್ನೂ ಕೆಲವರು, ಪ್ರಾಣಿಗಳಿಗೆ ಅವುಗಳನ್ನು ಮೇಯಲು ಬಿಟ್ಟು ಸುಮ್ಮನಾಗಿದ್ದಾರೆ.

ಎಕರೆಗಟ್ಟಲೆ ಕಲ್ಲಂಗಡಿ ಕಿತ್ತು ಬೇರೆ ಬೆಳೆಯತ್ತ ಚಿತ್ತ ಹರಿಸಿದ ಗುಂಡ್ಲುಪೇಟೆ ರೈತ
ಕೋಲಾರದ ರೈತರೊಬ್ಬರೂ ಅದೇ ಕೆಲಸ ಮಾಡಿದ್ದಾರೆ. ಲಕ್ಷ ಲಕ್ಷ ಖರ್ಚು ಮಾಡಿ ಬೆಳೆದ ಕ್ಯಾಪ್ಸಿಕಂ ಬೆಳೆಯನ್ನು ಮೇಕೆಗಳಿಗೆ ಆಹಾರವಾಗಿ ಮೇಯಲು ಬಿಟ್ಟಿದ್ದಾರೆ. ಕೋಲಾರದ ಕಾಕಿನೆತ್ತ ಗ್ರಾಮದ ರೈತ ಆಂಜಿನಪ್ಪ ಸುಮಾರು 5 ಲಕ್ಷ ಖರ್ಚು ಮಾಡಿ 3 ಎಕರೆಯಲ್ಲಿ ಕ್ಯಾಪ್ಸಿಕಂ ಬೆಳೆದಿದ್ದರು.

Farmer Let Goats To Eat Capsicum Crops In Kakinetta Village

ಆದರೆ ಲಾಕ್ ಡೌನ್ ನಿಂದ ಬೆಲೆ ತಗ್ಗಿದೆ. ಕ್ಯಾಪ್ಸಿಕಂ ಅನ್ನು ಕೆ.ಜಿ.ಗೆ ಕೇವಲ 3 ರೂಪಾಯಿಗೆ ದಲ್ಲಾಳಿಗಳು ಕೇಳುತ್ತಿದ್ದು, ಇದರಿಂದ ಬೇಸರಗೊಂಡ ಆಂಜಿನಪ್ಪ ಕ್ಯಾಪ್ಸಿಕಂ ಬೆಳೆಗಳನ್ನು ಮೇಕೆಗಳಿಗೆ ಆಹಾರವಾಗಿ ಬಿಟ್ಟಿದ್ದಾರೆ. 50 ಮೇಕೆಗಳನ್ನು ಫಸಲು ಬಂದ ಕ್ಯಾಪ್ಸಿಕಂ ತೋಟದಲ್ಲಿ ಬಿಟ್ಟು ಮೇಯಿಸುತ್ತಿದ್ದಾರೆ.

English summary
Due to coronavirus lockdown, farmers are facing problems to sell their crops. A farmer from Kolar has let goats eat capsicum
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X