ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ: ಕೊನೇ ಕ್ಷಣದಲ್ಲಿ ಕೆ ಎಚ್ ಮುನಿಯಪ್ಪಗೆ ಭಾರೀ ಹಿನ್ನಡೆ

|
Google Oneindia Kannada News

Recommended Video

Lok Sabha Elections 2019 : ಕಠಿಣ ಸ್ಪರ್ಧೆ ಎದುರಿಸಬೇಕಾಗಿ ಬಂದಿದೆ ಮುನಿಯಪ್ಪಗೆ | Oneindia Kannada

ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಕೆ ಎಚ್ ಮುನಿಯಪ್ಪ ವಿರುದ್ದ ಬಿಜೆಪಿ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದಾಗ, ಮುನಿಯಪ್ಪಗೆ ಗೆಲುವು ಕಟ್ಟಿಟ್ಟಬುತ್ತಿ ಎಂದೇ ಹೇಳಲಾಗುತ್ತಿತ್ತು.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಆದರೆ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಜೆಪಿ ಪ್ರಾಬಲ್ಯ, ಮೋದಿ ಅಲೆ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಮೈತ್ರಿ ಪಕ್ಷದಲ್ಲಿನ ಸಮನ್ವಯದ ಕೊರತೆಯಿಂದಾಗಿ, ಮುನಿಯಪ್ಪಗೆ ಈ ಬಾರಿ ಗೆಲುವು ಸುಲುಭದ ತುತ್ತಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಚುನಾವಣಾ ಕಾಲೇ ಬಹುಕೃತ ವೇಷಂ: 'ಕೇಸರಿ' ಮೊರೆಹೋದ ಕಾಂಗ್ರೆಸ್ಚುನಾವಣಾ ಕಾಲೇ ಬಹುಕೃತ ವೇಷಂ: 'ಕೇಸರಿ' ಮೊರೆಹೋದ ಕಾಂಗ್ರೆಸ್

1991-2014ರ ಅವಧಿಯಲ್ಲಿ ಅಂದರೆ ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ಮುನಿಯಪ್ಪ, ಎಂಟನೇ ಬಾರಿ ಸಂಸತ್ ಪ್ರವೇಶಿಸಲು ಕಣದಲ್ಲಿದ್ದಾರೆ. ಚುನಾವಣೆಯ ವೇಳೆ ಅಪ್ರತಿಮ ರಾಜಕೀಯ ತಂತ್ರಗಾರಿಕೆ ಹಣೆಯುವ ಮುನಿಯಪ್ಪ, ವಿರೋಧಿಗಳು ಯಾರೇ ಇದ್ದರೂ ಅವರನ್ನು ಸೋಲಿಸುವ ಜಾಣ್ಮೆ ಪ್ರದರ್ಶಿಸುತ್ತಿದ್ದವರು.

ಅದ್ಯಾಕೆ ದೇವೇಗೌಡ್ರು 'ದಯಮಾಡಿ' ಮತಯಾಚಿಸುತ್ತಿದ್ದಾರೆ? ಸೋಲಿನ ಮುನ್ಸೂಚನೆಯೇ?ಅದ್ಯಾಕೆ ದೇವೇಗೌಡ್ರು 'ದಯಮಾಡಿ' ಮತಯಾಚಿಸುತ್ತಿದ್ದಾರೆ? ಸೋಲಿನ ಮುನ್ಸೂಚನೆಯೇ?

ಆದರೆ, ಈಗ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಲವು ಅಸೆಂಬ್ಲಿ ಕ್ಷೇತ್ರಗಳಲ್ಲಿ ಮುನಿಯಪ್ಪ ವಿರುದ್ದ ಭಾರೀ ಅಸಮಾಧಾನ ವ್ಯಕ್ತವಾಗುತ್ತಿದೆ. ಇವೆಲ್ಲದರ ನಡುವೆ, ಕೊನೆಯ ಕ್ಷಣದಲ್ಲಿ ಹಾಲೀ ಜೆಡಿಎಸ್ ಶಾಸಕರೊಬ್ಬರು, ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಪರ ಬೆಂಬಲ ಸೂಚಿಸಿದ್ದು, ಮುನಿಯಪ್ಪಗೆ ಭಾರೀ ಹಿನ್ನಡೆಯೆಂದು ಹೇಳಲಾಗುತ್ತಿದೆ. ಯಾವಯಾವ ಅಸೆಂಬ್ಲಿ ಕ್ಷೇತ್ರದಲ್ಲಿ ಮುನಿಯಪ್ಪಗೆ ಹಿನ್ನಡೆಯಾಗಬಹುದು ಎನ್ನುವುದನ್ನು ಮುಂದೆ ವಿವರಿಸಲಾಗಿದೆ

ಬೆಂಗಳೂರು ಕಾಡುಗೋಡಿ ಪಾಲಿಕೆ ಸದಸ್ಯ, ಭಾರೀ ಕುಳ ಮುನಿಸ್ವಾಮಿಗೆ ಬಿಜೆಪಿ ಟಿಕೆಟ್

ಬೆಂಗಳೂರು ಕಾಡುಗೋಡಿ ಪಾಲಿಕೆ ಸದಸ್ಯ, ಭಾರೀ ಕುಳ ಮುನಿಸ್ವಾಮಿಗೆ ಬಿಜೆಪಿ ಟಿಕೆಟ್

ಕೋಲಾರದಲ್ಲಿ ಯಡಿಯೂರಪ್ಪನವರ ಆಪ್ತ ಡಿ ಎಸ್ ವೀರಯ್ಯ ಅಥವಾ ಇನ್ನೋರ್ವ ಕ್ಷೇತ್ರದ ಪ್ರಭಾವಿ ಮುಖಂಡ ಛಲವಾದಿ ನಾರಾಯಣಸ್ವಾಮಿಗೆ ಟಿಕೆಟ್ ಸಿಗಬಹುದೆಂದು ಹೇಳಲಾಗುತ್ತಿತ್ತು. ಆದರೆ, ಕ್ಷೇತ್ರಕ್ಕೆ ಅಷ್ಟೇನೂ ಪರಿಚಯವಿಲ್ಲದ, ಬೆಂಗಳೂರು ಕಾಡುಗೋಡಿಯ ಪಾಲಿಕೆ ಸದಸ್ಯ, ಭಾರೀ ಕುಳ ಎಸ್ ಮುನಿಸ್ವಾಮಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಮೊದಮೊದಲು ಮುನಿಯಪ್ಪಗೆ ಇವರು ಎದುರಾಳಿಯೇ ಅಲ್ಲ ಎನ್ನುವ ಮಾತಿತ್ತು. ಆದರೆ, ಬದಲಾದ ರಾಜಕೀಯ ಲೆಕ್ಕಾಚಾರದ ಪ್ರಕಾರ, ಮುನಿಯಪ್ಪಗೆ ಕ್ಷೇತ್ರ ಉಳಿಸಿಕೊಳ್ಳಲು ಪ್ರಯಾಸಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮುನಿಯಪ್ಪ ಅವರನ್ನು ಸೋಲಿಸಲಿದ್ದೇವೆ

ಮುನಿಯಪ್ಪ ಅವರನ್ನು ಸೋಲಿಸಲಿದ್ದೇವೆ

ಕೋಲಾರ ವ್ಯಾಪ್ತಿಯ ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಐದರಲ್ಲಿ, ಎರಡರಲ್ಲಿ ಜೆಡಿಎಸ್ ಮತ್ತು ಒಂದರಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ. ಇಲ್ಲಿ, ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ನೇರ ಫೈಟ್. ಹಾಗಾಗಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ, ಕ್ಷೇತ್ರದ ಕಾರ್ಯಕರ್ತರು ಮತ್ತು ಮುಖಂಡರಿಗೆ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದುವೇ ಬಿಜೆಪಿಗೆ ಇಲ್ಲಿ ಲಾಭವಾಗಿ ಪರಿಣಮಿಸುವ ಸಾಧ್ಯತೆಯಿದೆ. ಅದಕ್ಕೋ ಏನೋ, ನಾವು ಈ ಬಾರಿ ಮುನಿಯಪ್ಪ ಅವರನ್ನು ಸೋಲಿಸಲಿದ್ದೇವೆ ಎನ್ನುವ ವಿಶ್ವಾಸದ ಮಾತನ್ನು ಮುನಿಸ್ವಾಮಿ ಆಡುತ್ತಿದ್ದಾರೆ.

7 ಬಾರಿ ಸಂಸದ ಕೆ.ಎಚ್.ಮುನಿಯಪ್ಪ ಗಿಂತಲೂ ಪತ್ನಿ 64 ಪಟ್ಟು ಸಿರಿವಂತೆ!7 ಬಾರಿ ಸಂಸದ ಕೆ.ಎಚ್.ಮುನಿಯಪ್ಪ ಗಿಂತಲೂ ಪತ್ನಿ 64 ಪಟ್ಟು ಸಿರಿವಂತೆ!

ಕೋಲಾರ ಶಾಸಕ, ಜೆಡಿಎಸ್ ಪಕ್ಷದ ಶ್ರೀನಿವಾಸ ಗೌಡ, ಬಿಜೆಪಿ ಅಭ್ಯರ್ಥಿ ಪರ

ಕೋಲಾರ ಶಾಸಕ, ಜೆಡಿಎಸ್ ಪಕ್ಷದ ಶ್ರೀನಿವಾಸ ಗೌಡ, ಬಿಜೆಪಿ ಅಭ್ಯರ್ಥಿ ಪರ

ಮುನಿಯಪ್ಪ ಭಾರೀ ಹೊಡೆತಬೀಳಬಹುದಾದ ವಿದ್ಯಮಾನವೊಂದರಲ್ಲಿ ಕೋಲಾರ ಶಾಸಕ, ಜೆಡಿಎಸ್ ಪಕ್ಷದ ಶ್ರೀನಿವಾಸ ಗೌಡ, ಬಿಜೆಪಿ ಅಭ್ಯರ್ಥಿ ಪರ ಕೊನೆಯ ಹಂತದಲ್ಲಿ ಪ್ರಚಾರಕ್ಕೆ ಇಳಿದಿದ್ದಾರೆ. ಜೊತೆಗೆ, ಬಿಜೆಪಿ ಅಭ್ಯರ್ಥಿಗೆ ಮತಚಲಾಯಿಸುವಂತೆ ಫರ್ಮಾನೂ ಹೊರಡಿಸಿದ್ದಾರೆ. ಶ್ರೀನಿವಾಸ ಗೌಡ್ರು ನಡೆಯನ್ನು ಮೊದಲೇ ಅರಿತಂತಿದ್ದ ಮುನಿಯಪ್ಪ, ಕ್ಷೇತ್ರದ ಮತ್ತೋರ್ವ ಪ್ರಭಾವಿ ಮುಖಂಡ ವರ್ತೂರು ಪ್ರಕಾಶ್ ಅವರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಮೇಶ್ ಕುಮಾರ್ ಮತ್ತು ಮುನಿಯಪ್ಪಗೂ ಆಗಿಬರುವುದಿಲ್ಲ

ರಮೇಶ್ ಕುಮಾರ್ ಮತ್ತು ಮುನಿಯಪ್ಪಗೂ ಆಗಿಬರುವುದಿಲ್ಲ

ಇನ್ನು ಶ್ರೀನಿವಾಸಪುರದ ಶಾಸಕ, ಸ್ಪೀಕರ್ ರಮೇಶ್ ಕುಮಾರ್ ಮತ್ತು ಮುನಿಯಪ್ಪಗೂ ಆಗಿಬರುವುದಿಲ್ಲ ಎನ್ನುವುದು ಊರಿಗೆಲ್ಲಾ ಗೊತ್ತಿರುವ ವಿಚಾರ. ಮುನಿಯಪ್ಪಗೆ ಟಿಕೆಟ್ ನೀಡಬಾರೆದೆಂದು ಆಯೋಗದೊಂದಿಗೆ ದೆಹಲಿಗೆ ರಮೇಶ್ ಕುಮಾರ್ ಹೋಗಿದ್ದರು ಎನ್ನುವುದೂ ಗೌಪ್ಯವಾಗಿ ಉಳಿದಿಲ್ಲ. ಆದರೆ, ಇಲ್ಲಿ ಜೆಡಿಎಸ್ ಪರಾಜಿತ ಅಭ್ಯರ್ಥಿ ವೆಂಕಟಶಿವರೆಡ್ಡಿ, ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿರುವುದು ಮುನಿಯಪ್ಪಗೆ ವರದಾನವಾಗಿದೆ.

ಕೋಲಾರ ಲೋಕಸಭಾ ಕ್ಷೇತ್ರ ಪರಿಚಯ: ಚಿನ್ನದ ಜಿಲ್ಲೆಯ ಮುಕುಟ ಯಾರಿಗೆ?ಕೋಲಾರ ಲೋಕಸಭಾ ಕ್ಷೇತ್ರ ಪರಿಚಯ: ಚಿನ್ನದ ಜಿಲ್ಲೆಯ ಮುಕುಟ ಯಾರಿಗೆ?

ಕ್ಷೇತ್ರದ ಪ್ರಭಾವಿ ಮುಖಂಡ ಕೊತ್ತೂರು ಮಂಜುನಾಥ್

ಕ್ಷೇತ್ರದ ಪ್ರಭಾವಿ ಮುಖಂಡ ಕೊತ್ತೂರು ಮಂಜುನಾಥ್

ಮುಳಬಾಗಿಲು ಕ್ಷೇತ್ರದ ಪ್ರಭಾವಿ ಮುಖಂಡ ಕೊತ್ತೂರು ಮಂಜುನಾಥ್, ಮುನಿಯಪ್ಪ ವಿರುದ್ದ ತಿರುಗಿಬಿದ್ದಿದ್ದಾರೆ. ಕಳೆದ ಚುನಾವಣೆಯಲ್ಲಿ ತನ್ನನ್ನು ಸ್ಪರ್ಧಿಸದಂತೆ ಮಾಡಿದ್ದು ಮುನಿಯಪ್ಪ ಎನ್ನುವ ಆಕ್ರೋಶ ಮಂಜುನಾಥ್ ಗೆ ಇನ್ನೂ ಕಮ್ಮಿಯಾಗಿಲ್ಲ. ಕ್ಷೇತ್ರದ ಪಕ್ಷೇತರ ಶಾಸಕ ಎಚ್ ನಾಗೇಶ್ ಕೂಡಾ ಮುನಿಯಪ್ಪ ಪರ ಇಲ್ಲದೇ ಇರುವುದರಿಂದ, ಈ ಕ್ಷೇತ್ರದಿಂದಲೂ ಮುನಿಯಪ್ಪಗೆ ಹೊಡೆತ ಬೀಳಬಹುದು.

ರಾಜಕೀಯ ಸಮೀಕರಣಗಳ ಪ್ರಕಾರ, ಮುನಿಯಪ್ಪ ಸೋತರೂ ಆಶ್ಚರ್ಯವಿಲ್ಲ

ರಾಜಕೀಯ ಸಮೀಕರಣಗಳ ಪ್ರಕಾರ, ಮುನಿಯಪ್ಪ ಸೋತರೂ ಆಶ್ಚರ್ಯವಿಲ್ಲ

ಇನ್ನು ಚಿಂತಾಮಣಿಯಲ್ಲೂ ಮುನಿಯಪ್ಪಗೆ ಪೂರಕವಾದ ವಾತಾವರಣವಿಲ್ಲ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದ ಡಾ. ಸುಧಾಕರ್ ರೆಡ್ಡಿ, ಬಿಜೆಪಿ ಪರ ಪ್ರಚಾರವನ್ನು ಈಗಾಗಲೇ ನಡೆಸುತ್ತಿದ್ದಾರೆ. ಕೆಜಿಎಫ್ ನಲ್ಲೂ ಬಿಜೆಪಿ ಶಕ್ತಿಯುತವಾಗಿದೆ, ಸಂಪಂಗಿ ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಮಾಲೂರಿನಲ್ಲೂ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ, ಜೆಡಿಎಸ್ ಪಕ್ಷದ ಮಂಜುನಾಥ ಗೌಡ, ಮುನಿಯಪ್ಪ ಪರವಾಗಿ ನಿಂತಿಲ್ಲ. ಈ ಎಲ್ಲಾ ರಾಜಕೀಯ ಸಮೀಕರಣಗಳ ಪ್ರಕಾರ, ಮುನಿಯಪ್ಪ ಸೋತರೂ ಆಶ್ಚರ್ಯ ಪಡಬೇಕಾಗಿಲ್ಲ.

English summary
Kolar Congress candidate KH Muniyappa facing very tough competition from BJP candidate Muniswamy, as Kolar JDS MLA Srinivas Gowda openly supports BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X