ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಚಾಯಿತಿ ಫೈಟ್; ಅಧ್ಯಕ್ಷ ಚುನಾವಣೆ ಭದ್ರತೆಗೆ ಬೌನ್ಸರ್‌ಗಳು!

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಫೆಬ್ರವರಿ 09; ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸದಸ್ಯರೊಬ್ಬರು ಬೌನ್ಸರ್‌ಗಳ ಭದ್ರತೆಯಲ್ಲಿ ಆಗಮಿಸಿದರು. ಮಾಜಿ ಸಚಿವ ವರ್ತೂರು ಪ್ರಕಾಶ್ ಬಣಕ್ಕೆ ಬೆಂಬಲ ಸೂಚಿಸಿದ್ದ ಸದಸ್ಯರನ್ನು ಬೌನ್ಸರ್‌ಗಳು ಚುನಾವಣೆ ಕೇಂದ್ರಕ್ಕೆ ಕರೆತಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಗೆ ಬೌನ್ಸರ್‌ಗಳನ್ನು ಕರೆತಂದ ಘಟನೆ ಕೋಲಾರ ತಾಲೂಕಿನ ನರಸಾಪುರದಲ್ಲಿ ನಡೆದಿದೆ. ಸೋಮವಾರ ನರಸಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಯಿತು.

ಬಿ. ಟೆಕ್ ಪದವೀಧರ ಈಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ಟೆಕ್ ಪದವೀಧರ ಈಗ ಗ್ರಾಮ ಪಂಚಾಯಿತಿ ಅಧ್ಯಕ್ಷ

ಅಧ್ಯಕ್ಷ ಸ್ಥಾನವನ್ನು ಪಡೆಯಲು ಜೆಡಿಎಸ್ ಹಾಗೂ ಮಾಜಿ ಶಾಸಕ ವರ್ತೂರು ಪ್ರಕಾಶ್ ಬೆಂಬಲಿಗರ ನಡುವೆ ಪ್ರಬಲ ಪೈಪೋಟಿ ಇತ್ತು. ವರ್ತೂರು ಪ್ರಕಾಶ್ ಬಣಕ್ಕೆ ಬೆಂಬಲ ಸೂಚಿಸಿದ್ದ ಸದಸ್ಯರನ್ನು ಸೆಳೆಯಲು ವಿರೋಧಿ ತಂಡದ ಹತ್ತಾರು ಜನರು ಸೇರಿದ್ದರು.

ಗ್ರಾ. ಪಂಚಾಯತ್; ಪತ್ನಿ ಅಧ್ಯಕ್ಷೆ, ಪತಿ ಉಪಾಧ್ಯಕ್ಷ! ಗ್ರಾ. ಪಂಚಾಯತ್; ಪತ್ನಿ ಅಧ್ಯಕ್ಷೆ, ಪತಿ ಉಪಾಧ್ಯಕ್ಷ!

Kolar Bouncers Security For Gram Panchayat President Vice President Election

ಈ ಹಿನ್ನಲೆಯಲ್ಲಿ ಬೌನ್ಸರ್‌ಗಳು ಸದಸ್ಯರನ್ನು ಚುನಾವಣಾ ಕೇಂದ್ರಕ್ಕೆ ವಾಹನದಲ್ಲಿ ಭದ್ರತೆಯಲ್ಲಿ ಕರೆತಂದರು. ಬೌನ್ಸರ್‌ಗಳು ಚುನಾವಣೆ ಕೇಂದ್ರಕ್ಕೆ ಹೋಗಲು ಪ್ರಯತ್ನ ನಡೆಸಿದರು. ಆದರೆ, ಪೊಲೀಸರು ಅನುಮತಿ ನೀಡಲಿಲ್ಲ.

ಪಂಚಾಯಿತಿ ಫೈಟ್; ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಅಪಹರಣ! ಪಂಚಾಯಿತಿ ಫೈಟ್; ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಅಪಹರಣ!

ಈ ಸಮಯದಲ್ಲಿ ಗ್ರಾಮ ಪಂಚಾಯಿತಿ ಮುಂದೆ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಆಗ ಪೋಲಿಸರು ಬೌನ್ಸರ್‌ಗಳ ಮೇಲೆ ಲಾಠಿ ಬೀಸಲು ಮುಂದಾದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ವರ್ತೂರು ಪ್ರಕಾಶ್ ಬೆಂಬಲಿಗರಾದ ಸುಮಿತ್ರಮ್ಮ ಆಧ್ಯಕ್ಷರಾಗಿ ಮತ್ತು ಸುಮನ್ ಚಂದ್ರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

Recommended Video

ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಉದಯ-ವಿರೂಪಾಕ್ಷೇಶ್ವರನ ದರ್ಶನ ಪಡೆದ ಆನಂದ್ ಸಿಂಗ್ | Oneindia Kannada

ಬೌನ್ಸರ್‌ಗಳು, ಪೊಲೀಸರು ಹೀಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಗೆ ನಡೆದ ಕಸರತ್ತನ್ನು ನೋಡಿ ಗ್ರಾಮದ ಜನರು ಸಂತಸಗೊಂಡರು.

English summary
Gram panchayat member of Kolar taluk Narasapura come to president and vice president election with bouncers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X