ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ಸುದ್ದಿ: ಕುರುಡುಮಲೆ ಗ್ರಾಮದಲ್ಲಿ ಯುಗಾದಿ ಹಬ್ಬ ಬಂದ್ರೆ ಬೆಚ್ಚಿ ಬೀಳ್ತಾರೆ!

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಏಪ್ರಿಲ್ 14: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.. ಅನ್ನೋ ಮಾತು ಇದೆ. ಹಿಂದೂಗಳು ಯುಗಾದಿ ಹಬ್ಬಕ್ಕಾಗಿ ವರ್ಷಗಟ್ಟಲೇ ಕಾಯುತ್ತಿರುತ್ತಾರೆ. ಮಕ್ಕಳು, ಮಹಿಳೆಯರು ಹೊಸ ಬಟ್ಟೆ ಖರೀದಿ ಮಾಡೋದು, ಶಾಪಿಂಗ್ ಮಾಡುವುದರಲ್ಲಿ ಬ್ಯುಸಿ ಆಗಿರುತ್ತಾರೆ.

ಆದರೆ ಇಲ್ಲೊಂದು ಗ್ರಾಮದಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧ. ಯುಗಾದಿ ಹಬ್ಬ ಅಂದ್ರೆ ಸಾಕು ಭಯ ಪಡ್ತಾರೆ, ಬೇಡವೇ ಬೇಡಪ್ಪ ಯುಗಾದಿ ಹಬ್ಬ ಎಂದು ಕನಸಲ್ಲೂ ಬೆಚ್ಚಿ ಬೀಳ್ತಾರೆ. ಹೀಗಾಗಿ ಈ ಗ್ರಾಮದಲ್ಲಿ ಮಾತ್ರ ಯುಗಾದಿ ಹಬ್ಬದ ಆಚರಣೆಯಿಂದ ದೂರು ಉಳಿದಿದ್ದಾರೆ.

ಕೋಲಾರ ವಿಶೇಷ; ಉದ್ಘಾಟನೆ ಭಾಗ್ಯ ಕಂಡಿಲ್ಲ ಈ ರೈಲು ನಿಲ್ದಾಣ! ಕೋಲಾರ ವಿಶೇಷ; ಉದ್ಘಾಟನೆ ಭಾಗ್ಯ ಕಂಡಿಲ್ಲ ಈ ರೈಲು ನಿಲ್ದಾಣ!

ಮನೆಗಳಲ್ಲಿ ತಳಿರು-ತೋರಣಗಳಿಲ್ಲ

ಮನೆಗಳಲ್ಲಿ ತಳಿರು-ತೋರಣಗಳಿಲ್ಲ

ಹಿಂದುಗಳಿಗೆ ಯುಗಾದಿ ಹಬ್ಬ ಅಂದ್ರೆ ಹೊಸ ವರ್ಷ, ಹೊಸ ಸಂವತ್ಸರಕ್ಕೆ ಕಾಲಿಡುವ ಸಂಬ್ರಮದ ದಿನ. ಆದರೆ ಈ ಗ್ರಾಮದಲ್ಲಿ ಮಾತ್ರ ಜನರಿಗೆ ಯುಗಾದಿ ಹಬ್ಬ ಬಂತೆಂದರೆ ಸಾಕು ಒಂದು ರೀತಿಯ ಶೋಕಾಚರಣೆ ಮಾಡಿದಂತೆ. ಹಬ್ಬದ ಸಂಭ್ರಮದಿಂದಲೇ ದೂರ ಉಳಿಯುವ ಜನರಿಗೆ ಯುಗಾದಿ ಅಂದ್ರೆ ಒಂದು ರೀತಿಯ ಭಯದ ವಾತಾವರಣ.


ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕುರುಡುಮಲೆ ಗ್ರಾಮದಲ್ಲಿ ಹಲವು ದಶಕಗಳಿಂದ ಹಬ್ಬದ ಸಂಭ್ರಮವಿಲ್ಲ, ಸಡಗರವಿಲ್ಲ. ಮನೆಗಳಲ್ಲಿ ತಳಿರು ತೋರಣಗಳಿಲ್ಲ, ಮನೆಯವರ ಮುಖದಲ್ಲಿ ಹಬ್ಬದ ಕಳೆಯೂ ಇಲ್ಲ, ಮನೆಯ ಸುತ್ತಲೂ ಸಗಣಿಯ ಪಟ್ಟಿ ಮಾತ್ರ ಚಾಚು ತಪ್ಪದೆ ಹಾಕ್ತಾರೆ.

ಕುರುಡುಮಲೆ ಗಣೇಶ ದೇವಸ್ಥಾನವಿರುವ ಈ ಗ್ರಾಮ

ಕುರುಡುಮಲೆ ಗಣೇಶ ದೇವಸ್ಥಾನವಿರುವ ಈ ಗ್ರಾಮ

ಯುಗಾದಿ ಹಬ್ಬ ಬರುತ್ತೆ ಅಂದ್ರೆ ಸಾಮಾನ್ಯವಾಗಿ ಎಲ್ಲರೂ ಹೊಸ ಬಟ್ಟೆ ಖರೀದಿ, ಮನೆಯನ್ನು ಸಿಂಗಾರ ಮಾಡಿಕೊಳ್ಳುತ್ತಾರೆ. ಕುರುಡುಮಲೆ ಗ್ರಾಮದ ಈ ಕಾಲೊನಿಯಲ್ಲಿ ಮಾತ್ರ ಜನ ಯುಗಾದಿ ಹಬ್ಬಕ್ಕೆ ಮೂರು ದಿನಗಳ ಮುಂಚಿತವಾಗಿಯೇ ಶೋಕಾಚರಣೆ ರೀತಿಯಲ್ಲಿ ಸಿದ್ಧರಾಗಿ ಹಬ್ಬವಾದ ನಂತರ ಮೂರು ದಿನಗಳು ಕೂಡಾ ಅದೇ ರೀತಿ ಆಚರಣೆಯಲ್ಲಿ ತೊಡಗಿರುತ್ತಾರೆ.


ಕೇಳಿದ್ದೆಲ್ಲವನ್ನು ಕರುಣಿಸುವ ರಾಜ್ಯದ ಶಕ್ತಿ ಪೀಠ ಅಂತ ಹೆಸರುವಾಸಿ ಪಡೆದಿರುವ ಪ್ರಸಿದ್ಧ ಕುರುಡುಮಲೆ ಗಣೇಶ ದೇವಸ್ಥಾನವಿರುವ ಈ ಗ್ರಾಮದ ಜನ ಕಳೆದ ನೂರಾರು ವರ್ಷಗಳಿಂದ ಯುಗಾದಿ ಹಬ್ಬದ ಆಚರಣೆಯಿಂದ ದೂರ ಉಳಿದಿದ್ದಾರೆ. ನೂರಾರು ವರ್ಷಗಳ ಹಿಂದೆ ಗ್ರಾಮದಲ್ಲಿ ಯುಗಾದಿ ಹಬ್ಬದ ದಿನದಂದು ನಡೆದಿದ್ದ ಒಂದು ದುರ್ಘಟನೆಯೇ ಕಾರಣವಾಗಿದೆ.

ಹಬ್ಬದ ಆಚರಣೆಯಿಂದ ಗ್ರಾಮಸ್ಥರು ದೂರ

ಹಬ್ಬದ ಆಚರಣೆಯಿಂದ ಗ್ರಾಮಸ್ಥರು ದೂರ

ಅದೇನೆಂದರೆ ಹಬ್ಬದ ದಿನ ಈ ಗ್ರಾಮದ ಸೊಸೆಯರು ನೀರಿಗೆ ಹೋಗಿ ಬರುವಾಗ ಗೂಳಿಯೊಂದು ಸೊಸೆಯರ ಗುಂಪಿನಲ್ಲಿದ್ದ ಗರ್ಭವತಿಯಾಗಿದ್ದ ಮಹಿಳೆಯೊಬ್ಬಳನ್ನು ತನ್ನ ಕೊಂಬಿನಿಂದ ತಿವಿದು ಕೊಂದಿತ್ತು. ಆಕೆಯನ್ನು ಮತ್ತು ಗರ್ಭವನ್ನು ಸಿಕ್ಕಿಸಿಕೊಂಡು ಊರೆಲ್ಲಾ ಸುತ್ತು ಹೊಡೆದಿತ್ತಂತೆ. ನಂತರ ಗೂಳಿ ಊರ ಬಾಗಿಲ ಬಳಿ ಬಂದು ಸಾವನ್ನಪ್ಪಿತ್ತಂತೆ. ಅಂದು ನಡೆದ ಈ ಘಟನೆಯನ್ನು ಕಂಡಿದ್ದ ಜನರು ಬೆಚ್ಚಿ ಬಿದ್ದು ಅಂದಿನಿಂದ ಹಬ್ಬದ ಆಚರಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಅಂದಿನಿಂದ ಈ ಬಡಾವಣೆಯಲ್ಲಿ ಯುಗಾದಿ ಬಂತೆಂದರೆ ಏನು ತೊಂದರೆ ಆಗದಂತೆ ಹಸುವಿನ ಸಗಣಿಯಿಂದ ಎಲ್ಲಾ ಮನೆಗಳ ಸುತ್ತಾ ಪಟ್ಟಿಯನ್ನು ಬಳಿಯುತ್ತಾರೆ. ಯುಗಾದಿಗೆ ಮುನ್ನ ಮೂರು ದಿನ ಹಾಗೂ ಯುಗಾದಿಗೆ ನಂತರದ ಮೂರು ದಿನ, ಬಡಾವಣೆಯಲ್ಲಿ ಯಾವುದೇ ಜನರು ತಲೆಗೆ ಸ್ನಾನ ಮಾಡೋದಿಲ್ಲ, ಹೊಸ ಬಟ್ಟೆ ಹಾಕೋದಿಲ್ಲ, ತಲೆಗೆ ಎಣ್ಣೆ ಕೂಡಾ ಹಚ್ಚೋದಿಲ್ಲ, ಅಷ್ಟೆ ಯಾಕೆ ಮನೆಯಲ್ಲಿ ಒಗ್ಗರಣೆ ಹಾಕಲ್ಲ, ಸಿಹಿ ತಿಂಡಿ ಮಾಡೋಲ್ಲವಂತೆ. ಇದನ್ನ ಈ ಗ್ರಾಮದ ಜನ ಕಟ್ಟು ನಿಟ್ಟಾಗಿ ಅನುಸರಿಸುತ್ತಾರೆ.

Recommended Video

ಬಿಜೆಪಿ ಮಾಡಿದ ಕೆಲಸ ನೋಡಿ ರಾಹುಲ್ ಗಾಂಧಿಗೆ ಖುಷಿ | Oneindia Kannada
ಮೂಢನಂಬಿಕೆ ಆಂದುಕೊಂಡರೂ ಪರವಾಗಿಲ್ಲ

ಮೂಢನಂಬಿಕೆ ಆಂದುಕೊಂಡರೂ ಪರವಾಗಿಲ್ಲ

ಒಂದು ವೇಳೆ ಈ ಕಟ್ಟಲೆಯನ್ನು ಮುರಿದರೆ ಏನಾದರೂ ಅನಾಹುತ ಕಟ್ಟಿಟ್ಟ ಬುತ್ತಿ ಎಂದು ನೂರಾರು ವರ್ಷಗಳೇ ಕಳೆದರೂ ಈ ಕಾಲೋನಿಯ ಜನ ಈ ಹಬ್ಬದ ಆಚರಣೆಗೆ ಧೈರ್ಯ ಮಾಡಿಲ್ಲ, ಮಾಡೋದು ಇಲ್ಲ. ಕೆಲವರು ಜ್ಯೋತಿಷಿಗಳ ಬಳಿ ಹೋಗಿ ಬಂದು ಹಬ್ಬ ಆಚರಣೆಗೆ ಮುಂದಾದಾಗಲೂ ಕೆಲವೊಂದು ದುರ್ಘಟನೆಗಳು ನಡೆದಿತ್ತಂತೆ. ಹೀಗಾಗಿ ಈಗಿನ ಯುವ ಪೀಳಿಗೆ ಕೂಡಾ ಹಿರಿಯರ

ಸಂಪ್ರದಾಯವನ್ನು ಮುರಿಯಲು ಪ್ರಯತ್ನ ಮಾಡುವುದಿಲ್ಲ.
ಎಂದೋ ನಡೆದ ದುರ್ಘಟನೆ ಇಂದಿಗೂ ಈ ಗ್ರಾಮದ ಜನರನ್ನು ಈಗಲೂ ಸಹ ಬಾಧಿಸುತ್ತಲೇ ಇದೆ. ಅಷ್ಟೇ ಯಾಕೆ ಅದನ್ನು ಮೂಢನಂಬಿಕೆ ಎಂದು ಭಾವಿಸಿ ಹಬ್ಬ ಆಚರಣೆ ಮಾಡಲು ಮುಂದಾದರೂ ಏನೋ ಒಂದು ದುರ್ಘಟನೆ ಮರುಕಳಿಸಿ ಅವರನ್ನು ಕಟ್ಟಿ ಹಾಕುತ್ತಿದೆ. ಹಾಗಾಗಿ ಇಲ್ಲಿನ ಜನ ಮೂಢನಂಬಿಕೆ ಆಂದುಕೊಂಡರೂ ಪರವಾಗಿಲ್ಲ, ನಾವು ಹಬ್ಬ ಮಾಡುವುದಿಲ್ಲ ಎನ್ನುತ್ತಿದ್ದಾರೆ.

English summary
The Ugadi festival has not been celebrating from many decades in the Kurudumale village of Mulubagilu Taluk, Kolar district. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X