ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಜಿಎಫ್ ನಲ್ಲಿ ಬೀದಿ ನಾಯಿಗಳಿಗಾಗಿ ಆಹಾರ ಸಂಗ್ರಹಿಸುವ ಶ್ವಾನಪ್ರಿಯ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಫೆಬ್ರವರಿ 17: ಕೆಲವರಿಗೆ ಪ್ರಾಣಿ-ಪಕ್ಷಿಗಳೆಂದರೆ ಅತೀವ ಪ್ರೀತಿ, ಅದರಲ್ಲೂ ನಾಯಿ ಕೋತಿಗಳೆಂದರೆ ಸಾಕು ಎಲ್ಲಿಲ್ಲದ ಕಾಳಜಿ, ತನಗೆ ತಿನ್ನಲು ಅನ್ನವಿಲ್ಲದಿದ್ದರೂ ಪರವಾಗಿಲ್ಲ, ಬೇರೊಬ್ಬರ ಹತ್ತಿರ ಕೇಳಿ ತಂದು ಪ್ರಾಣಿಗಳಿಗೆ ನಿತ್ಯ ಹಾಲು ಅನ್ನ ಹಾಕುತ್ತಾರೆ.

ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆಯ ಮನೋಹರ್ ಲಾಲ್ ಎಂಬುವವರು ಕಳೆದ 30 ವರ್ಷಗಳಿಂದ ಇಲ್ಲಿನ ನೂರಾರು ಬೀದಿ ನಾಯಿಗಳಿಗೆ ಮತ್ತು ಕೋತಿಗಳಿಗೆ ಆಸರೆಯಾಗಿದ್ದಾರೆ. ರ ಕೇಳಿ ತಂದು ಪ್ರಾಣಿಗಳಿಗೆ ನಿತ್ಯ ಹಾಲು ಅನ್ನ ಹಾಕುತ್ತಾರೆ.

ಅತ್ಯಾಚಾರಿಗಳ ಪಾಲಿನ ಸಿಂಹಸ್ವಪ್ನ ಕೋಲಾರದ ಈ ನ್ಯಾಯಾಧೀಶೆ...ಅತ್ಯಾಚಾರಿಗಳ ಪಾಲಿನ ಸಿಂಹಸ್ವಪ್ನ ಕೋಲಾರದ ಈ ನ್ಯಾಯಾಧೀಶೆ...

ಆಟೋದಲ್ಲಿ ಹಾಲು ಹಣ್ಣುಗಳನ್ನು ತುಂಬಿಕೊಂಡು ನಾಯಿ-ಕೋತಿಗಳಿಗೆ ಉಣಬಡಿಸುತ್ತಾನೆ ಈ ಪ್ರಾಣಿ ಪ್ರಿಯ. ಆತನನ್ನು ನಾಯಿಗಳ ಹಿಂಡು ಹಿಂಬಾಲಿಸುತ್ತಿವೆ, ಇದೆಲ್ಲಾ ಕಂಡು ಬರುವುದು ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ.

ಬೆಳಿಗ್ಗೆಯೇ ಬೀದಿ ನಾಯಿಗಳಿಗೆ ಆಹಾರ ಒದಗಿಸುತ್ತಾರೆ

ಬೆಳಿಗ್ಗೆಯೇ ಬೀದಿ ನಾಯಿಗಳಿಗೆ ಆಹಾರ ಒದಗಿಸುತ್ತಾರೆ

ತನ್ನ ಜೊತೆ ಯಾರಿಲ್ಲದಿದ್ದರೂ, ತಾನೇ ಬದುಕು ನಡೆಸಲು ಕಷ್ಟವಾಗಿರುವ ಪರಿಸ್ಥಿತಿಯಲ್ಲಿರುವ ಮನೋಹರ್ ಲಾಲ್ ಪ್ರತಿ ದಿನ ಹತ್ತಾರು ಜನರಿಂದ ಹಾಲು ಹಣ್ಣನ್ನು ಸಂಗ್ರಹಿಸಿಕೊಂಡು ಬರುತ್ತಾರೆ.

ಬೆಳಿಗ್ಗೆ ಒಂದು ಆಟೋದಲ್ಲಿ ಹಾಲು, ಬ್ರೆಡ್ ಮತ್ತು ಬಾಳೆಹಣ್ಣುಗಳನ್ನು ತುಂಬಿಕೊಂಡು ಮನೆ ಬಿಟ್ಟರೆ ನಗರದಲ್ಲಿರುವ ವಿವಿಧ ಬಡಾವಣೆಗಳ ನಾಯಿಗಳಿಗೆ ಊಟ ನೀಡಿದ ನಂತರವೇ ವಾಪಸ್ಸಾಗುತ್ತಾರೆ.

ಮಕ್ಕಳಂತೆ ಬೀದಿನಾಯಿಗಳ ಪಾಲನೆ

ಮಕ್ಕಳಂತೆ ಬೀದಿನಾಯಿಗಳ ಪಾಲನೆ

ಅಲ್ಲದೆ ವಿವಿಧ ಕಾಯಿಲೆಗಳಿಂದ ನರಳುತ್ತಿರುವ ನಾಯಿಗಳಿಗೆ ಔಷಧಿ ಉಪಚಾರಗಳನ್ನು ಮಾಡುವ ಜೊತೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸುತ್ತಾರೆ. ಹೀಗೆ ಮನುಷ್ಯರಲ್ಲಿ ಕಾಣದ ಪ್ರೀತಿಯನ್ನು ನಾವು ಪ್ರಾಣಿಗಳಲ್ಲಿ ಕಾಣಬಹುದು ಅನ್ನೋದು ಮನೋಹರಲಾಲ್ ರ ಅಭಿಪ್ರಾಯ.

ಕೋಲಾರದಲ್ಲಿ ಇಂದು ಮತ್ತು ನಾಳೆ ಉದ್ಯೋಗ ಮೇಳಕೋಲಾರದಲ್ಲಿ ಇಂದು ಮತ್ತು ನಾಳೆ ಉದ್ಯೋಗ ಮೇಳ

ಇನ್ನೂ ಯಾವುದೇ ಸ್ವಾರ್ಥವಿಲ್ಲದೆ ಬೀದಿನಾಯಿ ಮತ್ತು ಕೋತಿಗಳನ್ನು ತನ್ನ ಮಕ್ಕಳಂತೆ ಪಾಲನೆ ಮಾಡುವ ಮನೋಹರ ಲಾಲ್ ಕೆಲಸಕ್ಕೆ ಕೆಜಿಎಫ್ ನಗರದ ಜನ ಪ್ರಶಂಸೆ ವ್ಯಕ್ತಪಡಿಸುವುದರ ಜೊತೆಗೆ ಇವರ ನೆರವಿಗೆ ನಿಂತಿದ್ದಾರೆ.

ಕೆಜಿಎಫ್ ಜನರಿಂದ ಶ್ಲಾಘನೆ

ಕೆಜಿಎಫ್ ಜನರಿಂದ ಶ್ಲಾಘನೆ

ಪ್ರತಿನಿತ್ಯ ಮನೋಹರ್ ಲಾಲ್ ನಗರದ ಮಾರುಕಟ್ಟೆಯ ಜನರ ಬಳಿಗೆ ಹೋಗಿ ಅವರು ಕೊಡುವ ಅಷ್ಟೋ ಇಷ್ಟು ಹಾಲು, ಹಣ್ಣು ಆಹಾರವನ್ನು ಸಂಗ್ರಹಿಸಿಟ್ಟಿಕೊಂಡು, ಬೆಳಿಗ್ಗೆ ಆರು ಗಂಟೆಗೆ ಆಟೋ ಒಂದರಲ್ಲಿ ತುಂಬಿಸಿಕೊಂಡು ಹೋಗಿ ನಗರದ ವಿವಿದೆಡೆ ನಾಯಿಗಳಿಗೆ ನೀಡುತ್ತಾರೆ.

ಹೀಗೆ ಹತ್ತಾರು ವರ್ಷಗಳಿಂದ ಮನೋಹರ್ ಲಾಲ್ ಮಾಡಿಕೊಂಡು ಬಂದಿರುವ ಕೆಲಸಕ್ಕೆ ಕೆಜಿಎಫ್ ನಗರದ ಜನರು ಶ್ಲಾಘನೆ ವ್ಯಕ್ತಪಡಿಸುತ್ತಾರೆ.

ತನಗಿಲ್ಲದಿದ್ದರೂ ಪ್ರಾಣಿಗಳಿಗೆ ಆಹಾರ ನೀಡುತ್ತಾನೆ

ತನಗಿಲ್ಲದಿದ್ದರೂ ಪ್ರಾಣಿಗಳಿಗೆ ಆಹಾರ ನೀಡುತ್ತಾನೆ

ಇನ್ನು ನಗರದಲ್ಲಿ ಬೀದಿ ನಾಯಿಗಳನ್ನು ಕೊಲ್ಲುವುದಕ್ಕೆ ಹಾಗೂ ಪ್ರಾಣಿಗಳಿಗೆ ಹಿಂಸೆ ನೀಡುವುದನ್ನು ಸಹಿಸದ ಇವರು ಬೀದಿ ನಾಯಿಗಳಿಗಾಗಿ ಅದೆಷ್ಟೋ ಹೋರಾಟಗಳನ್ನು ಮಾಡಿದ್ದಾರೆ.

ಬೀದಿ ನಾಯಿಗಳಿಗೆ ಅನ್ನ ಹಾಕುವವರಿಗಿಂತ ಕಲ್ಲು ಹೊಡೆಯುವ ಜನರೇ ಹೆಚ್ಚಿರುವ ಈ ಕಾಲ ದಲ್ಲಿ ನಾಯಿ ಕೋತಿಗಳಿಗೆ ನಿತ್ಯ ಅನ್ನ ಹಾಲು ಹಾಕುವ ಮೂಲಕ ತನ್ನ ಪ್ರಾಣಿ ಪ್ರೀತಿ ತೋರಿಸಿ ಮಾನವೀಯತೆ ಮೆರೆಯುತ್ತಿರುವ ಮನೋಹರ್ ಲಾಲ್ ರವರ ಕೆಲಸ ನಿಜಕ್ಕೂ ಎಲ್ಲರ ಮನಸ್ಸು ಮುಟ್ಟುವಂತದ್ದು.

English summary
Manohar Lal from KGF, Kolar loves animals unconditionally. He used to collect food from houses and feed stray dogs here story ogf his animal love.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X