ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಜಿಎಫ್ ಮಾಜಿ ಶಾಸಕ, ಜೆಡಿಎಸ್ ನಾಯಕ ಭಕ್ತವತ್ಸಲಂ ನಿಧನ

|
Google Oneindia Kannada News

ಕೋಲಾರ, ನವೆಂಬರ್ 29: ಕೆಜಿಎಫ್ ಮೀಸಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಂ. ಭಕ್ತವತ್ಸಲಂ (70) ಹೃದಯಾಘಾತದಿಂದ ಬುಧವಾರ ರಾತ್ರಿ ನಿಧನರಾದರು.

ಕೆಜಿಎಫ್‌ನ ರಾಬರ್ಟ್‌ಸನ್ ಪೇಟೆಯಲ್ಲಿ ನೆಲೆಸಿದ್ದ ಅವರಿಗೆ ರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಜಿಲ್ಲಾ ಕೇಂದ್ರದ ಆರ್ ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11 ಗಂಟೆ ಸುಮಾರಿಗೆ ಅವರು ಅಸುನೀಗಿದರು.

ಹಾಸನದ ಜೆಡಿಎಸ್ ಮಾಜಿ ಶಾಸಕ ಎಚ್‌ಎಸ್ ಪ್ರಕಾಶ್ ನಿಧನಹಾಸನದ ಜೆಡಿಎಸ್ ಮಾಜಿ ಶಾಸಕ ಎಚ್‌ಎಸ್ ಪ್ರಕಾಶ್ ನಿಧನ

1983ರಲ್ಲಿ ಎಐಎಡಿಎಂಕೆ ಪಕ್ಷದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

1985ರಲ್ಲಿ ನಡೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. 1989ರಲ್ಲಿ ಹಾಗೂ 1999ರಲ್ಲಿ ಎಐಡಿಎಂಕೆಯಿಂದಲೇ ಸ್ಪರ್ಧಿಸಿ ಮತ್ತೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು.

KGF AIADMK Ex MLA jds leader M. Bhaktavatsalam is no more

ಕ್ಷೇತ್ರ ಮರುವಿಂಗಣೆಯಾದ ಬಳಿಕ ಅವರು ಎಐಎಡಿಎಂಕೆ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದರು. ಆದರೆ, ಅಲ್ಲಿಂದ ಮತ್ತೆ ಗೆಲುವು ಕಂಡಿರಲಿಲ್ಲ. 2008, 2013 ಮತ್ತು 2018ರ ಚುನಾವಣೆಗಳಲ್ಲಿ ಸತತವಾಗಿ ಸೋಲು ಅನುಭವಿಸಿದ್ದರು.

ಕೆಜಿಎಫ್‌ನಲ್ಲಿ ಐದು ಬಾರಿ ನಗರಸಭೆ ಅಧ್ಯಕ್ಷರಾಗಿ ಮತ್ತು ಒಂದು ಬಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿ ಅವರು ಆಯ್ಕೆಯಾಗಿದ್ದರು.

ಸ್ವಯಂಘೋಷಿತ ದೇವ ಮಾನವ ಬಾಲ ಸಾಯಿಬಾಬಾ ಹೃದಯ ಸ್ತಂಭನದಿಂದ ನಿಧನಸ್ವಯಂಘೋಷಿತ ದೇವ ಮಾನವ ಬಾಲ ಸಾಯಿಬಾಬಾ ಹೃದಯ ಸ್ತಂಭನದಿಂದ ನಿಧನ

ಕುಮಾರಸ್ವಾಮಿ ಸಂತಾಪ

ಪಕ್ಷದ ಮುಖಂಡ ಭಕ್ತವತ್ಸಲಂ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೆಜಿಎಫ್ ಮಾಜಿ ಶಾಸಕ ಎಂ ಭಕ್ತವತ್ಸಲಂ ಅವರ ನಿಧನದ ಸುದ್ದಿ ತಿಳಿದು ತುಂಬಾ ದುಖವಾಗಿದೆ . ಕೋಲಾರ ಜಿಲ್ಲೆಯ ಕೆಜಿಎಫ್ ಕ್ಷೇತ್ರದಲ್ಲಿ ಮೂರು ಭಾರಿ ವಿಧಾನಸಭಾ ಸದಸ್ಯರಾಗಿದ್ದರು. ಎಂ ಭಕ್ತವತ್ಸಲಂ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿದೆ.

English summary
Ex MLA and JDS leader from KGF M. Bhaktavatsalam died on Wednesday Morning by heart attack. He was elected thrice to assembly from AIADMK. Later he joined JDS, but lost three time in a row.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X