ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಸ್ಟ್ರಾನ್ ಕಾರ್ಖಾನೆಯಲ್ಲಿ ಕಾರ್ಮಿಕರ ಹಕ್ಕುಗಳ ಉಲ್ಲಂಘನೆಯಾಗಿದೆ: ಕರ್ನಾಟಕ ಕಾರ್ಮಿಕ ಇಲಾಖೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 16: ಬೆಂಗಳೂರು ಸಮೀಪದ, ಕೋಲಾರ ಜಿಲ್ಲೆಯ ನರಸಾಪುರದಲ್ಲಿ ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರ ದಾಳಿ ಕುರಿತಾಗಿ ಕರ್ನಾಟಕ ಕಾರ್ಮಿಕ ಇಲಾಖೆ ಪ್ರತಿಕ್ರಿಯಿಸಿದ್ದು, ಕಂಪನಿಯಲ್ಲಿ ಕಾರ್ಮಿಕರ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ಕಾರ್ಮಿಕ ಅಧಿಕಾರಿಗಳ ತಂಡವು ಉದ್ಯೋಗಿಗಳನ್ನು ಒದಗಿಸುವ ಏಜೆನ್ಸಿಗಳು ಮತ್ತು ಉದ್ಯೋಗಿಗಳೊಂದಿಗೆ ಸಂವಹನ ನಡೆಸಿದ ಬಳಿಕ ಕಾರ್ಮಿಕರು ಕೆಲಸ ಮಾಡಿದ ದಿನಗಳ ಸಂಖ್ಯೆಗೆ ಹೋಲಿಸಿದರೆ ಪಾವತಿ ಮಾಡಿರುವ ಅಂಕಿ-ಅಂಶಗಳ ನಡುವೆ ವ್ಯತ್ಯಾಸವಿದೆ ಎಂದು ಬಹಿರಂಗಪಡಿಸಿದೆ.

ಐಫೋನ್ ಕಾರ್ಖಾನೆಯಲ್ಲಿ ದಾಳಿ, 437 ಕೋಟಿ ರೂ. ನಷ್ಟ: ಆ್ಯಪಲ್ ಕಂಪನಿ ಹೇಳಿದ್ದೇನು?ಐಫೋನ್ ಕಾರ್ಖಾನೆಯಲ್ಲಿ ದಾಳಿ, 437 ಕೋಟಿ ರೂ. ನಷ್ಟ: ಆ್ಯಪಲ್ ಕಂಪನಿ ಹೇಳಿದ್ದೇನು?

ಕಾರ್ಖಾನೆಯ ನಿರ್ವಹಣೆಯನ್ನು ಪರಿಶೀಲಿಸಿದ ನಂತರ ಕಾರ್ಮಿಕರ ಸಮಸ್ಯೆಗಳನ್ನು ಕಂಪನಿಯು ಬಗೆಹರಿಸಿಲ್ಲ ಎಂಬುದು ಸಾಭೀತಾಗಿದೆ. ಕಾರ್ಮಿಕರು ವೇತನ ವಿಳಂಬದ ಕುರಿತು ಮಾನವ ಸಂಪನ್ಮೂಲದ ಗಮನಕ್ಕೆ ತಂದರೂ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಹೇಳಿದೆ.

Karnataka Labour Department Says Workers rights violated at Wistron factory in Narasapura

ರಾಜ್ಯ ಕಾರ್ಮಿಕ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆಯ ನಿರ್ದೇಶಕರು ಸಿದ್ಧಪಡಿಸಿದ ಪ್ರಾಥಮಿಕ ವರದಿಯು, ಗುತ್ತಿಗೆ ಕಾರ್ಮಿಕರಿಗೆ ಸಂಬಳ ಪಾವತಿಸುವಲ್ಲಿನ ವ್ಯತ್ಯಾಸಗಳನ್ನು ಗಮನಸೆಳೆದಿದೆ,. ಹೆಚ್ಚುವರಿ ಕೆಲಸ ಮಾಡಿಸಿಕೊಂಡು ಗುತ್ತಿಗೆ ಸಿಬ್ಬಂದಿಗೆ ಪಾವತಿಸದಿರುವುದು, ಇಲಾಖೆಯ ಅನುಮತಿಯಿಲ್ಲದೆ ಕೆಲಸ ಮಾಡುವುದು ಮತ್ತು ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿ ಮಹಿಳಾ ಕಾರ್ಮಿಕರನ್ನು ಅಧಿಕಾವಧಿ ಕೆಲಸದಲ್ಲಿ ತೊಡಗಿಸುವುದು ನಡೆದಿದೆ.

"ನವೆಂಬರ್ 2020ರ ವೇತನದೊಂದಿಗೆ ವ್ಯತ್ಯಾಸವನ್ನು ಪಾವತಿಸಲಾಗಿಲ್ಲ. ಮನೆಗೆಲಸದ ಸಿಬ್ಬಂದಿಯ ವೇತನವನ್ನು (ಅಧಿಕಾವಧಿ) ಇಲ್ಲಿಯವರೆಗೆ ಪಾವತಿಸಲಾಗಿಲ್ಲ ಮತ್ತು ವಾರದಲ್ಲಿ ಆರು ದಿನಗಳವರೆಗೆ ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ" ಎಂದು ವರದಿಯಲ್ಲಿ ಉಲ್ಲೇಖಿಸಿದೆ.

Recommended Video

ಭಾರತೀಯ ಸೈನಿಕರು ಪಾಕಿಸ್ತಾನವನ್ನು ಬಗ್ಗುಬಡಿದು ಇಂದಿಗೆ 50ವರ್ಷ-ಅವಿಸ್ಮರಣೀಯ ವಿಡಿಯೋ ಶೇರ್ ಮಾಡಿದ ಸೇನೆ | Oneindia Kannada

'' ಅಗತ್ಯ ಅನುಮತಿಗಳನ್ನು ತೆಗೆದುಕೊಳ್ಳದೆ ಕಂಪನಿಯು 13,500 ಕಾರ್ಮಿಕರನ್ನು ನೇಮಿಸಿಕೊಂಡಿದೆ. ಬೃಹತ್ ಕಟ್ಟಡಗಳು ಮತ್ತು ಇತರ ಸೌಲಭ್ಯಗಳ ಹೆಚ್ಚುವರಿ ನಿರ್ಮಾಣವನ್ನು ಪ್ರಾರಂಭಿಸಲಾಗಿದೆ ಮತ್ತು ಕಾರ್ಖಾನೆ ಕಟ್ಟಡವನ್ನು ವಿಸ್ತರಿಸಲು ಇಲಾಖೆಯ ಹಿಂದಿನ ಅನುಮತಿಯನ್ನು ಪಡೆಯದೆ ಕೆಲಸ ಪ್ರಗತಿಯಲ್ಲಿದೆ ಎಂದು ಕಾರ್ಮಿಕ ಇಲಾಖೆ ಹೇಳಿದೆ.

English summary
The Karnataka government has found several violations of labour rights at the Wistron’s iPhone manufacturing facility in Narasapura, 70-km from Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X