ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುನಿಯಪ್ಪಗೆ ಬಂಡಾಯದ ರುಚಿ: ಕೈ-ಜೆಡಿಎಸ್ ನಾಯಕರಿಂದಲೇ ವಿರೋಧ

|
Google Oneindia Kannada News

ಕೋಲಾರ, ಏಪ್ರಿಲ್ 2: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೋಲಾರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಅವರ ಸಂಕಷ್ಟ ಹೆಚ್ಚುತ್ತಿದೆ. ತಮ್ಮದೇ ಪಕ್ಷದ ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಮುನಿಯಪ್ಪ ಅವರ ವಿರುದ್ಧ ಸೆಟೆದು ನಿಂತು, ಅವರಿಗೆ ಮತ ಹಾಕದಂತೆ ಪ್ರಚಾರ ಮಾಡುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಶಾಸಕ ಕೆ. ಶ್ರೀನಿವಾಸ್ ಗೌಡ ಕೂಡ ಮುನಿಯಪ್ಪ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

7 ಬಾರಿ ಸಂಸದ ಕೆ.ಎಚ್.ಮುನಿಯಪ್ಪ ಗಿಂತಲೂ ಪತ್ನಿ 64 ಪಟ್ಟು ಸಿರಿವಂತೆ! 7 ಬಾರಿ ಸಂಸದ ಕೆ.ಎಚ್.ಮುನಿಯಪ್ಪ ಗಿಂತಲೂ ಪತ್ನಿ 64 ಪಟ್ಟು ಸಿರಿವಂತೆ!

ಮುನಿಯಪ್ಪ ಅವರನ್ನು ಸೋಲಿಸಿಯೇ ತೀರುವುದಾಗಿ ಕೊತ್ತೂರು ಮಂಜುನಾಥ್ ಹೇಳಿದ್ದಾರೆ. ಜತೆಗೆ ಮುನಿಯಪ್ಪ ಅವರಿಗೆ ಶನಿ ಹೆಗಲೇರಿದ್ದಾನೆ. ಅವರ ಸೋಲು ಖಚಿತ ಎಂದಿದ್ದಾರೆ.

jds and congress leaders campaigning against KH Muniyappa in Kolar

ಮುಳಬಾಗಿಲು ತಾಲ್ಲೂಕಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಂಜುನಾಥ್, ಇಷ್ಟು ದಿನ ಮುನಿಯಪ್ಪ ಅವರಿಗೆ ಶುಕ್ರದೆಸೆ ಇತ್ತು. ಈಗ ಶನಿ ಹೆಗಲೇರಿದ್ದಾನೆ. ಅವರು ಕ್ಲೀನ್ ಕೃಷ್ಣಪ್ಪ ಆಗಲಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಕೆಎಚ್ ಮುನಿಯಪ್ಪ ವಿರುದ್ಧ ಸ್ಪೀಕರ್ ರಮೇಶ್ ಕುಮಾರ್ ರಿಂದ ಎಂಥ ಮಾತು!ಕೆಎಚ್ ಮುನಿಯಪ್ಪ ವಿರುದ್ಧ ಸ್ಪೀಕರ್ ರಮೇಶ್ ಕುಮಾರ್ ರಿಂದ ಎಂಥ ಮಾತು!

ಕಳೆದ ವಿಧಾನಸಭೆ ಚುನಾವಣೆ ವೇಳೆ ಆಪ್ತರೊಂದಿಗೆ ಹರಟುವಾಗ ಮುನಿಯಪ್ಪ ಅವರು ಕೊತ್ತೂರು ಮಂಜುನಾಥ್ ಅವರ ವಿರುದ್ಧ ಮಾತನಾಡಿದ್ದರು. ಇದರ ವಿಡಿಯೋವನ್ನು ಅವರು ಬಿಡುಗಡೆ ಮಾಡಿ ಮುನಿಯಪ್ಪ ವಿರುದ್ಧ ಹರಿಹಾಯ್ದಿದ್ದರು. ಮುನಿಯಪ್ಪ ಅವರ ವಿರುದ್ಧ ಬಹಿರಂಗವಾಗಿ ಪ್ರಚಾರ ಮಾಡುವುದಾಗಿ ಹೇಳಿದ್ದರು.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಮುನಿಯಪ್ಪ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿರುವ ಜೆಡಿಎಸ್ ಶಾಸಕ ಕೆ. ಶ್ರೀನಿವಾಸ್ ಗೌಡ, 'ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕಿಸಿದ ವ್ಯಕ್ತಿಗೆ ಮತ ಹಾಕಲು ಸಾಧ್ಯವಿದೆಯೇ? ರಾಜಕೀಯವಾಗಿ ಬೆನ್ನಿಗೆ ಚೂರಿ ಹಾಕುವ ಜನದ್ರೋಹಿಗೆ ಬೆಂಬಲ ನೀಡಬೇಕೇ? ಎಂದು ಆಕ್ರೋಶದಿಂದ ಹೇಳಿದ್ದಾರೆ.

ಮುನಿಯಪ್ಪಗೆ ಮತ ಹಾಕದೆ ಇದ್ದರೆ ಸಮ್ಮಿಶ್ರ ಸರ್ಕಾರ ಬಿದ್ದುಹೋಗುವುದಿಲ್ಲ. ಮುನಿಯಪ್ಪ ಅವರಿಂದ ಸರ್ಕಾರ ನಡೆಯುತ್ತಿಲ್ಲ. 2018 ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಪಾಷಾ ಅವರಿಗೆ ಹಾಕಿಸಿದ ವರ್ತೂರು ಪ್ರಕಾಶ್ ಅವರನ್ನು ಗೆಲ್ಲಿಸಲು ಮುನಿಯಪ್ಪ ಕುತಂತ್ರ ಮಾಡಿದ್ದರು. ಆದರೆ, ಮತದಾರರು ನನ್ನ ಕೈಬಿಡಲಿಲ್ಲ ಎಂದಿದ್ದಾರೆ.

English summary
Lok Sabha elections 2019: Congress and JDS leaders in Kolar are campaigning against Congress Lok Sabha candidate KH Muniyappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X