• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಲಾರದಲ್ಲೂ ಕಾಶ್ಮೀರದ ರೀತಿ ಕಲ್ಲೆಸೆತಕ್ಕೆ ಪ್ಲ್ಯಾನ್ ಮಾಡಿದ್ರು

|
Google Oneindia Kannada News

ಕೋಲಾರ,ಜನವರಿ 10: ಕಾಶ್ಮೀರದ ಮಾದರಿಯಲ್ಲಿ ಕೋಲಾರದಲ್ಲೂ ಕೂಡ ಕಲ್ಲೆಸತಕ್ಕೆ ಪ್ಲ್ಯಾನ್ ಮಾಡಿದ್ದರು ಎನ್ನುವ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಸಾಮಾನ್ಯವಾಗಿದ್ದ, ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ರೀತಿಯದೇ ಕಲ್ಲು ತೂರಾಟ ಅನಾಹುತವೊಂದು ಕೋಲಾರದಲ್ಲಿ ಸುದೈವವಶಾತ್ ತಪ್ಪಿದೆ.

ಕೋಲಾರ: ಸಿಎಎ-ಎನ್‌ಆರ್‌ಸಿ ಪರ ಮೆರವಣಿಗೆ ಮಾಡುತ್ತಿದವರಿಗೆ ಲಾಠಿ ಏಟುಕೋಲಾರ: ಸಿಎಎ-ಎನ್‌ಆರ್‌ಸಿ ಪರ ಮೆರವಣಿಗೆ ಮಾಡುತ್ತಿದವರಿಗೆ ಲಾಠಿ ಏಟು

ಪೌರತ್ವ ಕಾಯ್ದೆ ಪರವಾಗಿ ಮೇಲೆ ಕಲ್ಲು ತೂರಾಟ ನಡೆಸಲು ಹೂಡಿದ ಸಂಚೊಂದು ವಿಫಲವಾಗಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಇಬ್ಬರು ಸೇರಿ ಒಟ್ಟು ಐವರಿದ್ದ ತಂಡ ಜನವರಿ 4ರಂದು ಪೌರತ್ವ ಕಾಯ್ದೆ ಬೆಂಬಲಿಸಿ ಬಿಜೆಪಿ ಆಯೋಜಿಸಿದ್ದ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲು ನಗರದ ರೈಲು ಹಳಿಯ ಪಕ್ಕದಲ್ಲಿದ್ದ ಕಲ್ಲುಗಳನ್ನು ಮೂಟೆಯಲ್ಲಿ ಶೇಖರಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಜನವರಿ 4ರಂದು ನಡೆದ ಬಿಜೆಪಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಲು ರೈಲು ಹಳಿ ಬಳಿ ಕಲ್ಲುಗಳನ್ನು ಜ.3ರಂದು ಸಂಗ್ರಹಿಸುತ್ತಿದ್ದರು ಎನ್ನಲಾದ ಐವರ ಪೈಕಿ ಇಬ್ಬರನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ನಗರದ ಬಿಡಿ ಕಾಲೊನಿಯ ಶಫೀವುಲ್ಲಾಖಾನ್ ಮತ್ತಿ ಮಿಲತ್ ನಗರದ ಜಾವೀದ್ ಖಾನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

English summary
Some Misreants Plan To Stonepelting On BJP Rally In Kolar Arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X