ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಬಕಾರಿ ಸಚಿವರ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಏಪ್ರಿಲ್ 20: ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆದಿದ್ದರೂ ಕೋಲಾರ ಜಿಲ್ಲೆಯ ಕಾಳಸಂತೆಯಲ್ಲಿ ಮದ್ಯ ಮಾರಾಟ ಎಗ್ಗಿಲ್ಲದೇ ಸಾಗಿದೆ. ಬಹುತೇಕ ಬಾರ್ ಗಳಲ್ಲಿನ ಮದ್ಯ ಖಾಲಿಯಾಗಿದೆ.

ಅಬಕಾರಿ ಸಚಿವ ಎಚ್.ನಾಗೇಶ್ ಅವರ ತವರು ಜಿಲ್ಲೆಯಲ್ಲಿಯೇ ಮುಂದಿನ ಬಾಗಿಲು ಮುಚ್ಚಿ, ಹಿಂದಿನ ಬಾಗಿಲ ಮೂಲಕ ಮದ್ಯವನ್ನು ಬಾರ್ ಮಾಲೀಕರು ಅಕ್ರಮವಾಗಿ ಖಾಲಿ ಮಾಡುತ್ತಿದ್ದಾರೆ. ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದಾರೆ.

ಕೋಲಾರ ಜಿಲ್ಲೆಯಾದ್ಯಂತ ಅಕ್ರಮವಾಗಿ ಅಧಿಕ ಬೆಲೆಗೆ ಮದ್ಯ ಮಾರಾಟವಾಗುತ್ತಿದ್ದರೂ ಅಬಕಾರಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ.

Illegal Liquor Sales In Excise Minister District

ಬಾರ್ ಮಾಲೀಕರಿಂದ ಮಾಮೂಲಿ ಪಡೆದು ಸುಮ್ಮನಾಗುತ್ತಿದ್ದಾರೆ ಅನ್ನೋದು ಸಾರ್ವಜನಿಕರ ಆರೋಪವಾಗಿದೆ.

ಕೋಲಾರ ಹೊರವಲಯದ ಟಮಕದ ಕಾಲೋನಿಯಲ್ಲಿ, 70 ರುಪಾಯಿ ಬೆಲೆಯ ಕ್ವಾರ್ಟರ್ ಮದ್ಯಕ್ಕೆ 650 ರುಪಾಯಗೆ ಮಾರಾಟ ಮಾಡಿರುವ ವಿಡಿಯೋ ವೈರಲ್ ಆಗಿದೆ.

Illegal Liquor Sales In Excise Minister District

ಓಟಿ ಕ್ವಾರ್ಟರ್ ಗೆ 85 ರುಪಾಯಿ ಇತ್ತು, ಇದೀಗ 800 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಬಿಯರ್ 130 ರುಪಾಯಿ ಇದ್ದ ಬೆಲೆ ಇದೀಗ 1000 ರುಪಾಯಿಗೆ ಮಾರಾಟವಾಗುತ್ತಿದೆ.

ವಿಧಿ ಇಲ್ಲದೆ ಅಧಿಕ ಬೆಲೆ ಕೊಟ್ಟು ಮದ್ಯ ವ್ಯಸನಿಗಳು ಕುಡಿಯುತ್ತಿದ್ದು, ಲಾಕ್ ಡೌನ್ ವೇಳೆ ಎಂಎಸ್ಐಎಲ್ ಮಳಿಗೆಗಳನ್ನು ತೆರೆಯುವಂತೆ ಮದ್ಯ ವ್ಯಸನಿಗಳು ಪಟ್ಟು ಹಿಡಿದಿದ್ದಾರೆ.

English summary
Despite the lockdown in the state, Illegal sale of liquor in the Kolar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X