ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಷತ್ ಚುನಾವಣೆ, ಒಂದು ವೋಟಿಗೆ ಒಂದು ಲಕ್ಷ? ಜೈ ಧರ್ಮಸ್ಥಳ ಮಂಜುನಾಥ!

|
Google Oneindia Kannada News

ವಿಧಾನ ಪರಿಷತ್ತಿನ ಚುನಾವಣೆಯ ಪ್ರಚಾರದ ಆಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಮೂರು ಪಕ್ಷಗಳು ಮತದಾರರ ಓಲೈಕೆಗೆ ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತಿವೆ. ಮತದಾರರಿಗೆ ಭರ್ಜರಿ ಆಮಿಷವೊಡ್ಡುತ್ತಿರುವ ವಿಚಾರಗಳೂ ಕೇಳಿ ಬರುತ್ತಿವೆ.

ಬೀದರ್ 1 , ಕಲಬುರ್ಗಿ 1, ವಿಜಯಪುರ 2, ಬೆಳಗಾವಿ 2, ಉತ್ತರ ಕನ್ನಡ 1, ಧಾರವಾಡ 2, ರಾಯಚೂರು 1, ಬಳ್ಳಾರಿ 1, ಚಿತ್ರದುರ್ಗ 1, ಶಿವಮೊಗ್ಗ 1, ದಕ್ಷಿಣ ಕನ್ನಡ 2, ಮೈಸೂರು ,2, ಚಿಕ್ಕಮಗಳೂರು 1, ಹಾಸನ1, ತುಮಕೂರು 1, ಮಂಡ್ಯ1, ಬೆಂಗಳೂರು 1, ಬೆಂಗಳೂರು ಗ್ರಾಮಾಂತರ 1, ಕೋಲಾರ 1 ಹಾಗೂ ಕೊಡಗು ಜಿಲ್ಲೆಯ ಒಂದು ಕ್ಷೇತ್ರಕ್ಕೆ ಡಿ. 10ರಂದು ಚುನಾವಣೆ ನಡೆಯಲಿದೆ.

ಕೋಚಿಮುಲ್ ವಿಭಜನೆ; ಸಚಿವ, ಸಿಎಂ ಭಾವಚಿತ್ರಕ್ಕೆ ಹಾಲಿನ ಅಭಿಷೇಕಕೋಚಿಮುಲ್ ವಿಭಜನೆ; ಸಚಿವ, ಸಿಎಂ ಭಾವಚಿತ್ರಕ್ಕೆ ಹಾಲಿನ ಅಭಿಷೇಕ

ಕಣದಲ್ಲಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಲ್ಲಿ ಬಹುತೇಕರು ಭಾರೀ ಕುಳಗಳಾಗಿರುವುದರಿಂದ, ಹಣದ ಹೊಳೆಯೇ ಹರಿಯಲಾರಂಭಿಸಿದೆ ಎನ್ನುವ ಮಾತು ಹೆಚ್ಚಿನ ಕ್ಷೇತ್ರಗಳಲ್ಲಿ ಕೇಳಿ ಬರುತ್ತಿವೆ. ಉಸ್ತುವಾರಿ ವಹಿಸಿಕೊಂಡಿರುವ ಮುಖಂಡರಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಯಾವುದೇ ಚುನಾವಣೆಯಿರಲಿ ಜಿದ್ದಿನ ರಾಜಕೀಯಕ್ಕೆ ಹೆಸರಾಗಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಉಸ್ತುವಾರಿಯಾಗಿ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಭರ್ಜರಿ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ. ಇವರಿಗೆ ಇನ್ನೋರ್ವ ಸಚಿವ ಮುನಿರತ್ನ ಮತ್ತು ಕೋಲಾರ ಸಂಸದ ಮುನಿಸ್ವಾಮಿ ಸಾಥ್ ನೀಡುತ್ತಿದ್ದಾರೆ.

ಮೋದಿಯವರಿಗೆ ದೇವೇಗೌಡರ ಮೇಲೆ ವಿಶೇಷ ಅಕ್ಕರೆ ಏಕೆ?ಮೋದಿಯವರಿಗೆ ದೇವೇಗೌಡರ ಮೇಲೆ ವಿಶೇಷ ಅಕ್ಕರೆ ಏಕೆ?

 ಕೋಲಾರ ಜಿಲ್ಲೆಯ ಕಾಂಗ್ರೆಸ್ ನಾಯಕ ಮತ್ತು ಪ್ರಭಾವೀ ಮುಖಂಡ ಚಂದ್ರ ರೆಡ್ಡಿ

ಕೋಲಾರ ಜಿಲ್ಲೆಯ ಕಾಂಗ್ರೆಸ್ ನಾಯಕ ಮತ್ತು ಪ್ರಭಾವೀ ಮುಖಂಡ ಚಂದ್ರ ರೆಡ್ಡಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಚಿವ ಡಾ.ಸುಧಾಕರ್ ಅವರಿಗೆ ಈ ಚುನಾವಣೆ ಪ್ರತಿಷ್ಠೆಯಾಗಿದ್ದು, ಇವರಿಬ್ಬರ ನಡುವೆ ಈಗಾಗಲೇ ಎರಡು ಸುತ್ತಿನ ರಾಜಕೀಯ ಮೇಲಾಟ ನಡೆದಿದೆ. ಕೋಲಾರ ಜಿಲ್ಲೆಯ ಕಾಂಗ್ರೆಸ್ ನಾಯಕ ಮತ್ತು ಪ್ರಭಾವೀ ಮುಖಂಡ ಚಂದ್ರ ರೆಡ್ಡಿಯವರನ್ನು ಸುಧಾಕರ್ ಅವರು ಬಿಜೆಪಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲೇ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿ ಮುಖಂಡರನ್ನು ಡಿಕೆಶಿಯವರು ಕಾಂಗ್ರೆಸ್ ಪಕ್ಷದತ್ತ ಎಳೆದು ತಂದಿದ್ದಾರೆ.

 ಕೋಲಾರದ ಮತ್ತೋರ್ವ ಕಾಂಗ್ರೆಸ್ ಮುಖಂಡ ವರ್ತೂರು ಪ್ರಕಾಶ್

ಕೋಲಾರದ ಮತ್ತೋರ್ವ ಕಾಂಗ್ರೆಸ್ ಮುಖಂಡ ವರ್ತೂರು ಪ್ರಕಾಶ್

ಇದಕ್ಕೆ ಇನ್ನೊಂದು ತಿರುಗೇಟು ನೀಡಿರುವ ಡಾ.ಸುಧಾಕರ್ ಮತ್ತು ತಂಡ, ಕೋಲಾರದ ಮತ್ತೋರ್ವ ಕಾಂಗ್ರೆಸ್ ಮುಖಂಡ ವರ್ತೂರು ಪ್ರಕಾಶ್ ಅವರನ್ನು ಬಿಜೆಪಿ ಸೇರುವಂತೆ ಮನವೊಲಿಸುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಕಾಂಗ್ರೆಸ್ ಜೊತೆ ಮುನಿಸಿಕೊಂಡಿರುವ ವರ್ತೂರು ಪ್ರಕಾಶ್ ಅವರನ್ನು ಡಾ.ಸುಧಾಕರ್ ಅವರು ಸಿಎಂ ಬಸವರಾಜ ಬೊಮ್ಮಾಯಿಯವರ ಮುಂದೆ ನಿಲ್ಲಿಸಿದ್ದಾರೆ. "ಹುಲಿ ತರ ನೀನು, ಹುಲಿಯಾಗಿಯೇ ಇರು" ಎಂದು ಸಿಎಂ ಬೊಮ್ಮಾಯಿಯವರು ವರ್ತೂರು ಅವರಿಗೆ ಹೇಳಿದ್ದಾರೆ.

 ವೋಟು ಒಂದಕ್ಕೆ ಒಂದು ಲಕ್ಷ ರೂಪಾಯಿಯವರೆಗೆ ನೋಟು

ವೋಟು ಒಂದಕ್ಕೆ ಒಂದು ಲಕ್ಷ ರೂಪಾಯಿಯವರೆಗೆ ನೋಟು

ಈ ಎಲ್ಲಾ ರಾಜಕೀಯ ಮೇಲಾಟ ಒಂದು ಕಡೆಯಾದರೆ, ವೋಟು ಒಂದಕ್ಕೆ ಒಂದು ಲಕ್ಷ ರೂಪಾಯಿಯವರೆಗೆ ಈ ಕ್ಷೇತ್ರದ ಅಭ್ಯರ್ಥಿಗಳು ಖರ್ಚು ಮಾಡಲು ಸಿದ್ದರಿದ್ದಾರೆ ಎಂದು ಹೇಳಲಾಗುತ್ತಿದೆ. ಮೂರು ಕಂತುಗಳಲ್ಲಿ ಈ ಹಣ ಮತದಾರರಿಗೆ ಸಂದಾಯವಾಗಲಿದೆ. ಮುಂಗಡ ಐವತ್ತು ಸಾವಿರ, ಇದಾದ ನಂತರ 25ಸಾವಿರ ಮತ್ತು ಚುನಾವಣೆಯ ಮುನ್ನ ಮತ್ತೆ 25ಸಾವಿರ ನೀಡಲಾಗುತ್ತದೆ ಎನ್ನುವ ಗುಸುಗುಸು ಮಾತುಗಳು ಕೇಳಿಬರುತ್ತಿವೆ.

 ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿಯ ಫೋಟೋ ಮೇಲೆ ಆಣೆ

ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿಯ ಫೋಟೋ ಮೇಲೆ ಆಣೆ

ದುಡ್ಡು ತೆಗೆದುಕೊಂಡವರು ಮತದಾನದ ದಿನ ಕೈಕೊಟ್ಟರೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿಯ ಫೋಟೋ ಮೇಲೆ ಆಣೆ ಮಾಡಿಸಿಕೊಳ್ಳುತ್ತಿದ್ದಾರೆ ಮತ್ತು ಗೌಪ್ಯಸ್ಥಳದಲ್ಲಿ ಈ ವ್ಯವಹಾರ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ಸಿನಿಂದ ಎಂ.ಎಲ್.ಅನಿಲ್ ಕುಮಾರ್, ಜೆಡಿಎಸ್ಸಿನಿಂದ ವಕ್ಕಲೇರಿ ರಾಮಚಂದ್ರ ಮತ್ತು ಬಿಜೆಪಿಯಿಂದ ಡಾ.ಕೆ.ಎನ್.ವೇಣುಗೋಪಾಲ್ ಕಣದಲ್ಲಿದ್ದಾರೆ. ಕಳೆದ ಬಾರಿ ಈ ಕ್ಷೇತ್ರದಿಂದ ಜೆಡಿಎಸ್ಸಿನ ಸಿ.ಆರ್.ಮನೋಹರ್ ಜಯಶೀಲರಾಗಿದ್ದರು.

Recommended Video

ಸರಳತೆ ಮೆರೆದ ಡಿಕೆ ಶಿವಕುಮಾರ್ | Oneindia Kannada

English summary
Huge Money Transaction Suspected In Kolar - Chikkaballapur Legislative Council Election. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X