ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ ಕರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಲು ಹೈಕೋರ್ಟ್‌ ಅಸ್ತು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 28: ಕೋಲಾರ ಜಿಲ್ಲೆಯ ಕೆರೆಗಳಿಗೆ ಕೆ.ಸಿ.ವ್ಯಾಲಿ (ಕೋಲಾರ-ಛಲಘಟ್ಟ) ಯಿಂದ ನೀರು ಹರಿಸಲು ಹೈಕೋರ್ಟ್‌ ಹಸಿರು ನಿಶಾನೆ ತೋರಿಸಿದೆ.

ಕೆ.ಸಿ ವ್ಯಾಲಿಯಿಂದ ಕೋಲಾರ ಜಿಲ್ಲೆ ಕೆರೆಗಳಿಗೆ ಸಂಸ್ಕರಿತ ತ್ಯಾಜ್ಯ ನೀರನ್ನು ಹರಿಸಲು ಈ ಮುಂಚೆ ಮಧ್ಯಂತರ ಪೀಠವು ತಡೆ ಆಜ್ಞೆ ವಿಧಿಸಿತ್ತು. ಆ ತಡೆ ಆಜ್ಞೆಯನ್ನು ಇಂದು ಹೈಕೋರ್ಟ್‌ ತೆರವುಗೊಳಿಸಿದೆ.

ಕೆ.ಸಿ.ವ್ಯಾಲಿ ಎಂಬ ಭೂತ ಕೋಲಾರಕ್ಕೆ ಬಿಟ್ಟವರೆಲ್ಲ ಎಲ್ಲಿ ಹೋದರು?ಕೆ.ಸಿ.ವ್ಯಾಲಿ ಎಂಬ ಭೂತ ಕೋಲಾರಕ್ಕೆ ಬಿಟ್ಟವರೆಲ್ಲ ಎಲ್ಲಿ ಹೋದರು?

ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯ ಆಂಜನೇಯ ಎಂಬುವರು ಹಾಕಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್‌, ಮಧ್ಯಂತರ ತಡೆಯನ್ನು ತೆರವುಗೊಳಿಸಿದ್ದು, ಇನ್ನು ಮುಂದೆ ಕೆ.ಸಿ.ವ್ಯಾಲಿಯ ಸಂಸ್ಕರಿತ ನೀರು ಕೋಲಾರದ ಕೆರೆಗಳಿಗೆ ಹರಿಸಬಹುದಾಗಿದೆ.

High court remove stay on filling Kolar Lakes by KC valley water

ಕೋಲಾರ ಜನತೆಗೆ ಖುಷಿ ತರಬೇಕಿದ್ದ ಕೆ.ಸಿ.ವ್ಯಾಲಿ ವಿಷ ಉಣಿಸುತ್ತಿದೆ!ಕೋಲಾರ ಜನತೆಗೆ ಖುಷಿ ತರಬೇಕಿದ್ದ ಕೆ.ಸಿ.ವ್ಯಾಲಿ ವಿಷ ಉಣಿಸುತ್ತಿದೆ!

ತ್ಯಾಜ್ಯ ನೀರಿನ ಪೂರ್ಣ ಸಂಸ್ಕರಣೆ ಮಾಡದೆ ಕೆರೆಗಳಿಗೆ ಹರಿಸಲಾಗುತ್ತಿದೆ ಎಂದು ಆರೋಪಿಸಿ ನೀರು ಹರಿವು ತಡೆಗೆ ಅರ್ಜಿ ಹಾಕಲಾಗಿತ್ತು. ಆದರೆ ಸರ್ಕಾರದ ಪರ ವಕೀಲರು ನೀರನ್ನು ವೈಜ್ಞಾನಿಕ ರೀತಿಯಲ್ಲಿಯೇ ಸಂಸ್ಕೃಣೆ ಮಾಡಲಾಗುತ್ತಿದೆ ಎಂದು ಭರವಸೆ ಕೊಟ್ಟ ಕಾರಣ ಹೈಕೋರ್ಟ್‌ ಈ ಆದೇಶ ನೀಡಿದೆ.

English summary
High court removed stay on filling Kolar Lakes by KC valley water. Some one accused that KC valley water is not purified perfectly, so the court issued stay on filling Kolar lakes by KC valley water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X