ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

30 ಮಹಿಳೆಯರನ್ನು ಸ್ವಾವಲಂಬಿಯಾಗಿಸಿದ ಯುನೈಟೆಡ್ ಬೆಂಗಳೂರು

|
Google Oneindia Kannada News

ಕೋಲಾರ, ಮಾರ್ಚ್ 3: ಯುನೈಟೆಡ್ ವೇ ಬೆಂಗಳೂರು ಕೋಲಾರದಲ್ಲಿ 30 ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಅನುಕೂಲವಾಗುವಂತೆ ಜೀವನೋಪಾಯಕ್ಕಾಗಿ ಕುರಿಗಳನ್ನು ನೀಡಿದೆ.

ಬೆಂಗಳೂರು ಯುನೈಟೆಡ್ ಸಂಸ್ಥೆ, ಅಪ್ಲೈಡ್ ಮಟೀರಿಯಲ್ಸ್ ನೆರವಿನೊಂದಿಗೆ ಜೀವ ಸಂಕುಲ ಸಂರಕ್ಷಣೆಯ ಯೋಜನೆಯಡಿ ಬಂಗಾರ ಪೇಟೆ ತಾಲೂಕಿನ 30 ಮಹಿಳೆಯರಿಗೆ ಮಹಿಳಾ ಬಲವರ್ಧನೆಗಾಘಿ ನೆರವು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಕರ್ನಾಟಕ ಬಜೆಟ್ ನಲ್ಲಿ ಮಹಿಳೆ ಮತ್ತು ಮಕ್ಕಳಿಗೇನಿದೆ?ಕರ್ನಾಟಕ ಬಜೆಟ್ ನಲ್ಲಿ ಮಹಿಳೆ ಮತ್ತು ಮಕ್ಕಳಿಗೇನಿದೆ?

Helping hands of United way gives life to many women

ಚಿಕ್ಕಣ್ಣ ಮತ್ತು ರಾಜಣ್ಣ ಸೇವಾ ಸಂಸ್ಥೆಯು ಯುನೈಟೆಡ್ ವೇ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. 30 ಮಹೀಲೆಯರಿಗೆ ಕುರಿಗಳನ್ನು ನೀಡಿ ಅವರು ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಪ್ರೇರೇಪಿಸಲಾಯಿತು. ಈ ಯೋಜನೆಯ ಮುಖ್ಯ ಉದ್ದೇಶವೇನೆಂದರೆ 30 ಮಂದಿ ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕವಾಗಿ ಬಲಗೊಳಿಸುವುದಾಗಿದೆ. ಅದರ ಜತೆಗೆ ಸ್ವಸಹಾಯ ಸಂಘಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸ್ವಲ್ಪ ಹಣವನ್ನು ಉಳಿತಾಯ ಮಾಡುವ ಕುರಿತು ಅವರಿಗೆ ಮನವರಿಕೆ ಮಾಡಿಕೊಡಲಾಯಿತು.

Helping hands of United way gives life to many women

ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಒಟ್ಟು 12 ಹಳ್ಳಿಗಳ 30 ಮಹಿಳೆಯರನ್ನು ಬಲಗೊಳಿಸುವುದು, ತಿಂಗಳ ಆದಾಯ 5 ಸಾವಿರ ರೂ ಗು ಕಡಿಮೆ ಇರುವ ಕುಟುಂಬಕ್ಕೆ ಆದಾರವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸುವುದು ಗುರಿಯಾಗಿದೆ.

Helping hands of United way gives life to many women

ಈ ಕಾರ್ಯಕ್ರಮದಲ್ಲಿ ಕೋಲಾರದಲ್ಲಿ65 ಕುರಿಗಳನ್ನು ನೀಡಲಾಗಿತ್ತು ಅದೀಗ 425 ಕುರಿಗಳಾಗಿವೆ. ಸುಮಾರು 4ಲಕ್ಷ ರೂ ಬಂಡವಾಳ ಹೂಡಿ 15 ಲಕ್ಷ ಆಸ್ತಿಯನ್ನು ಪಡೆದಂತಾಗಿದೆ. ಈ ಯೋಜನೆಯನ್ನು ಶೀಘ್ರದಲ್ಲಿ ವಿಸ್ತರಿಸಲಾಗುತ್ತದೆ.

English summary
United Way of Bengaluru funding for women empowerment through sustainable livelihood. The Foundation has been distributed Goats to 30 women in Bangarpet taluk of Kolar district to start their own poultry farming.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X