ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಭಾರಿ ಮಳೆ: ಸಂಕಷ್ಟಕ್ಕೆ ಸಿಲುಕಿದ ರೈತರು

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಅಕ್ಟೋಬರ್ 20: ಒಂದು ವಾರಗಳ ಕಾಲ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಳಿಸಿತ್ತು. ಈಗ ಕೋಲಾರ ಜಿಲ್ಲೆಯಲ್ಲೂ ಜೋರಾಗಿ ಮಳೆ ಸುರಿದಿದ್ದು, ಇದರಿಂದ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಮತ್ತು ಕೆಜಿಎಫ್ ನಗರ ಸೇರಿದಂತೆ ಕೆಲವೆಡೆ ಉತ್ತಮ ಮಳೆಯಾಗುತ್ತಿದೆ. ಅಲ್ಲದೆ ಕೋಲಾರ ಜಿಲ್ಲೆಯ ಮುಳಬಾಗಲು, ಶ್ರೀನಿವಾಸಪುರ ಮತ್ತು ಮಾಲೂರು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ಮಳೆಯಿಂದಾಗಿ ರೈತರಲ್ಲಿ ಆತಂಕ ಮೂಡಿದ್ದು, ಕೈಗೆ ಬಂದ ಬೆಳೆಯನ್ನು ರಕ್ಷಿಸಿಕೊಂಡರ ಸಾಕಾಗಿದೆ.

ವರುಣನ ಆರ್ಭಟಕ್ಕೆ ರಾಗಿ ಸೇರಿದಂತೆ ವಿವಿಧ ಬೆಳೆಗಳು ನೆಲ ಕಚ್ಚಿದ್ದು, ಬೆಳೆದ ಬೆಳೆಯೆಲ್ಲ ಮಣ್ಣು ಪಾಲಾಗುತ್ತಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಬಹುತೇಕ ಕೆರೆ ಕುಂಟೆಗಳೆಲ್ಲ ತುಂಬಿವೆ. ಮುಂದೆ ಓದಿ...

ಸತತ 4-5 ಗಂಟೆಗಳ ಕಾಲ ಮಳೆ

ಸತತ 4-5 ಗಂಟೆಗಳ ಕಾಲ ಮಳೆ

ಕೋಲಾರ ಜಿಲ್ಲೆಯಲ್ಲಿ ಮುಂಗಾರಿನಿಂದ ವಾರ್ಷಿಕ ವಾಡಿಕೆ ಮಳೆ 643 ಮಿ.ಮೀ ಇದ್ದು, ಈ ಬಾರಿ ಹೆಚ್ಚಾಗಿ 794 ಮಿ.ಮೀ ನಷ್ಟು ಮಳೆಯಾಗಿದೆ. ಅಂದರೆ ಶೇ.23ರಷ್ಟು ಮಳೆ ಹೆಚ್ಚಾಗಿ ಸುರಿದಿದೆ. ಕೋಲಾರ ಜಿಲ್ಲೆಯ ಪಕ್ಕದ ಜಿಲ್ಲೆಯಾಗಿರುವ ಚಿಕ್ಕಬಳ್ಳಾಪುರದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಬೆಳ್ಳಂಬೆಳಿಗ್ಗೆ ವರಣನ ಆರ್ಭಟ ಜಿಲ್ಲೆಯಲ್ಲಿ ಜೋರಾಗಿದೆ. ಬೆಳಿಗ್ಗೆ 5 ಗಂಟೆಯಿಂದಲೇ ಮಳೆ ಸುರಿಯಲು ಶುರುವಾಗಿದ್ದು, ಸತತ 4-5 ಗಂಟೆಗಳ ಕಾಲ ಬಿಟ್ಟು ಬಿಡದೆ ಮಳೆರಾಯ ಅಬ್ಬರಿಸಿದ್ದಾನೆ.

ಬೆಳಗಾವಿಯಲ್ಲಿ ಮಳೆಯಿಂದ ನೆಲಕಚ್ಚಿದ 200 ಎಕರೆ ಈರುಳ್ಳಿ ಬೆಳೆಬೆಳಗಾವಿಯಲ್ಲಿ ಮಳೆಯಿಂದ ನೆಲಕಚ್ಚಿದ 200 ಎಕರೆ ಈರುಳ್ಳಿ ಬೆಳೆ

ಕೋರೇನಹಳ್ಳಿ ಗ್ರಾಮಕ್ಕೆ ನೀರು ನುಗ್ಗಿದೆ

ಕೋರೇನಹಳ್ಳಿ ಗ್ರಾಮಕ್ಕೆ ನೀರು ನುಗ್ಗಿದೆ

ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಹಳ್ಳ-ಕೊಳ್ಳ, ಕೆರೆ ಕುಂಟೆ ಕಾಲುವೆಗಳು ಸಂಪೂರ್ಣ ಜಲಾವೃತವಾಗಿವೆ. ಚಿಕ್ಕಬಳ್ಳಾಪುರ ತಾಲೂಕಿನ ಜರಮಡಗು ಅರಣ್ಯಪ್ರದೇಶದಿಂದ ಮಾವಿನಕೆರೆಗೆ ರಭಸವಾಗಿ ನೀರು ಹರಿದುಬರುತ್ತಿದ್ದು, ಸುತ್ತಮುತ್ತಲ ಜನ ತುಂಬಾ ಖುಷಿಪಡುತ್ತಿದ್ದಾರೆ. ಗುಡಿಬಂಡೆ ತಾಲೂಕಿನ ಹಲವೆಡೆಯೂ ಭರ್ಜರಿ ಮಳೆಯಾಗಿದ್ದು, ಕೋರೇನಹಳ್ಳಿ ಗ್ರಾಮಕ್ಕೆ ನೀರು ನುಗ್ಗಿ ಮೆಣಿಸಿನಕಾಯಿ ತೋಟ ಜಲಾವೃತವಾಗಿದೆ.

ಮಳೆಯಿಂದ ಜಿಲ್ಲೆಯ ರೈತರಿಗೆ ಸಂಕಷ್ಟ

ಮಳೆಯಿಂದ ಜಿಲ್ಲೆಯ ರೈತರಿಗೆ ಸಂಕಷ್ಟ

ಜಿಲ್ಲೆಯ ಚಿಂತಾಮಣಿ ತಾಲೂಕಿನಾದ್ಯಾಂತ ಭಾರೀ ಮಳೆಯಾಗಿದ್ದು, ಕೋಟಗಲ್, ಅನಕಲ್, ಕೆ.ರಾಗುಟ್ಟಹಳ್ಳಿ ಸೇರಿ ಬಾಗೇಪಲ್ಲಿ ತಾಲೂಕಿನ ಮಾಡಪ್ಪಲ್ಲಿ, ಹೊನ್ನಂಪಲ್ಲಿ ಸೇರಿದಂತೆ ಹಲವು ಕೆರೆಗಳು ಕೋಡಿ ಹರಿದಿವೆ. ಬಹುತೇಕ ಕೆರೆಗಳಿಗೆ ಮಳೆನೀರು ಹರಿದು ಬರುತ್ತಿದ್ದು, ಜಿಲ್ಲೆಯ ಜನತೆಗೆ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಮಳೆಯಿಂದ ಜಿಲ್ಲೆಯ ರೈತರಿಗೆ ಸಂಕಷ್ಟ ಎದುರಾಗಿದ್ದರೂ ಕೆರೆಗಳು ತುಂಬುತ್ತಿರುವುದು ಅಂತರ್ಜಲ ಅಭಿವೃದ್ಧಿ ಆಗಲಿದೆ ಅಂತ ಸಂತೋಷ ತರುತ್ತದೆ.

ಜಲಾವೃತವಾಗಿ ವಾಹನ ಸವಾರ ಪರದಾಟ

ಜಲಾವೃತವಾಗಿ ವಾಹನ ಸವಾರ ಪರದಾಟ

ಮತ್ತೊಂದೆಡೆ ರೈತರು ಬೆಳೆದ ಬೆಳೆಗಳು ಮಳೆಪಾಲಾಗುತ್ತಿದ್ದು, ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ಮಾರ್ಗದ ಜಾತವಾರ ಹೊಸಹಳ್ಳಿ ಬಳಿಯ ರೈಲ್ವೇ ಅಂಡರ್ ಪಾಸ್ ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಗಿದೆ.

Recommended Video

ಹುಷಾರು!! ಇನ್ನು 3 ದಿನ ಮಳೆರಾಯನ ತಡಿಯೋಕ್ ಆಗಲ್ಲ | Oneindia Kannada

English summary
Heavy rain in northern Karnataka for a week has disrupted life. Now it is raining in Kolar and chikkaballapura district and the farmers in this area are in trouble.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X