• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಮಾದಲ್ಲಿರುವ ಪ್ರೀತಿಯ ಪತ್ನಿಯ ಆರೈಕೆಗೆ ನಿಂತ ಪತಿರಾಯ!

By ಕೋಲಾರ ಪ್ರತಿನಿಧಿ
|

ಕೋಲಾರ, ಫೆಬ್ರವರಿ 15; ಇಂದು ನಿಷ್ಕಲ್ಮಶ ಪ್ರೀತಿ ಸಿಗುವುದು ತುಂಬಾ ವಿರಳ. ಎಲ್ಲವೂ ಸರಿಯಿದ್ದರೆ ಮಾತ್ರ ಅಲ್ಲಿ ಪ್ರೀತಿಗೆ ಸ್ಥಳವಿರುತ್ತದೆ. ಕೊಂಚ ವ್ಯತ್ಯಾಸವಾದರೂ ಪ್ರೀತಿ ಮಾಯವಾಗುತ್ತದೆ. ಅಂತಹ ಸ್ವಾರ್ಥ ಪ್ರಪಂಚದಲ್ಲಿ ಇಂದು ನಾವಿದ್ದೇವೆ. ಆದರೆ ಈ ಜೋಡಿ ಮಾತ್ರ ಭಿನ್ನ ವಿಭಿನ್ನ.

ಹೌದು ಕಷ್ಟ ಅಂತ ಬಂದಾಗ ಕೈಕೊಟ್ಟು ಬೇರೆ ದಾರಿಯತ್ತ ಮುಖ ಮಾಡುವವರ ನಡುವೆ, ಕೋಲಾರದ ವ್ಯಕ್ತಿಯೊಬ್ಬ ತನ್ನ ಪ್ರೀತಿಯನ್ನು ಹೇಗೆ ಪೋಷಿಸುತ್ತಿದ್ದಾನೆಂದು ತಿಳಿದರೆ ನಿಜಕ್ಕೂ ಕಣ್ಣಂಚಲ್ಲಿ ನೀರು ತುಂಬಿಕೊಳ್ಳುತ್ತದೆ.

ಮೈಸೂರು: ಬಂದ್ ನಡುವೆ ಪ್ರೀ ವೆಡ್ಡಿಂಗ್ ಶೂಟ್‌ ನಡೆಸಿದ ನವಜೋಡಿ

ಕೋಲಾರ ಜಿಲ್ಲೆಯ ಮಾಲೂರು ತಾಲೂಕು ದೊಡ್ಡಕಡತೂರು ಗ್ರಾಮದ ನಿವಾಸಿಗಳಾದ ರಘು ಹಾಗೂ ದಿವ್ಯಾ 2013ರ ಮೇ 24ರಂದು ತಮ್ಮ ಹೆತ್ತವರ ವಿರೋಧದ ನಡುವೆಯೂ ಮದುವೆಯಾಗಿದ್ದಾರೆ.

Lockdown Love Story: ಇದು ಬಾಲ್ಕನಿಯಲ್ಲಿ ಅರಳಿದ ಪ್ರೀತಿ!

ನೂರಾರು ಕನಸನ್ನು ಕಟ್ಟಿಕೊಂಡು 6 ವರ್ಷಗಳ ಕಾಲ ಪ್ರೀತಿಸಿ, ಮನಸಾರೆ ಇಷ್ಟಪಟ್ಟು ಮದುವೆಯಾದರು. ನಾಲ್ಕು ವರ್ಷಗಳ ಕಾಲ ಪ್ರೀತಿಯಿಂದಲೇ ಸಂಸಾರ ನಡೆಸಿದರು. ಇನ್ನೇನು ಸುಂದರ ಸಂಸಾರದಲ್ಲಿ ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ 2017ರಲ್ಲಿ ಹೊಸ ಅಥಿತಿಯ ಆಗಮನವಾಗಲಿದೆ ಅನ್ನುವ ಸಮಯದಲ್ಲಿ ಆಸ್ಪತ್ರೆಯವರು ಮಾಡಿದ ಯಡವಟ್ಟು ಸುಂದರ ಸಂಸಾರದ ಸಂತಸವನ್ನು ಹಾಳು ಮಾಡಿದೆ.

ಮದುವೆಯಾಗಿ 18 ದಿನಕ್ಕೆ ಪತಿಗೆ ಕೈಕೊಟ್ಟ ಪತ್ನಿ; ಪ್ರೇಮಿ ಜೊತೆ ಜೂಟ್!

ಕೋಮಾದಲ್ಲಿರುವ ದಿವ್ಯಾ

ಕೋಮಾದಲ್ಲಿರುವ ದಿವ್ಯಾ

ಐದು ವರ್ಷಗಳ ಹಿಂದೆ ಹೆರಿಗೆ ಸಂದರ್ಭದಲ್ಲಿ ವೈದ್ಯರು ನೀಡಿದ ಅತಿಯಾದ ಅರವಳಿಕೆಯಿಂದ ದಿವ್ಯಾ ಕೋಮಾ ಸ್ಥಿತಿಗೆ ತಲುಪಿದ್ದಾರೆ. ಅಂದಿನಿಂದಲೂ ಅವರು ಚೇತರಿಕೆ ಕಂಡಿಲ್ಲ. ಜೀವಂತ ಶವವಾಗಿರುವ ತನ್ನ ಪ್ರಿಯತಮೆಯನ್ನು ರಘು ಅವರು ತನ್ನ ಅಂಗೈನಲ್ಲಿಟ್ಟುಕೊಂಡು ಆರೈಕೆ ಮಾಡುತ್ತಿದ್ದಾರೆ.

ಕಣ್ಣೀರು ಬರುತ್ತದೆ

ಕಣ್ಣೀರು ಬರುತ್ತದೆ

ಕೋಮಾ ಸ್ಥಿತಿಯಲ್ಲಿರುವ ದಿವ್ಯಾಳ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ನೋಡಿದರೆ ಒಂದು ಕ್ಷಣ ಕಣ್ಣುಗಳು ತುಂಬಿ ಬರುತ್ತವೆ. ಕೋಮಾಗೆ ಹೋಗಿ ಐದು ವರ್ಷಗಳಾಗಿದೆ, ಮತ್ತೆ ಯಥಾಸ್ಥಿತಿಗೆ ಬಾರದ ತನ್ನ ಪ್ರಿಯತಮೆ ದಿವ್ಯಾಳನ್ನು ಮಗುವಂತೆ ಆರೈಕೆ ಮಾಡುತ್ತಾ ರಘು ತನ್ನ ಜೀವನ‌ ಕಳೆಯುತ್ತಿದ್ದಾರೆ.

ದೇವರಿಗೂ ಕರುಣೆ ಬಂದಿಲ್ಲ

ದೇವರಿಗೂ ಕರುಣೆ ಬಂದಿಲ್ಲ

ಕೋಮಾ ಸ್ಥಿತಿಯಲ್ಲಿರುವ ದಿವ್ಯಾ ಮತ್ತೆ ಮೊದಲಿನಂತಾಗಲಿ ಎಂದು ರಘು ಹಾಗೂ ದಿವ್ಯಾಳ ಪೋಷಕರು ಮಾಡದ ಕೆಲಸವಿಲ್ಲ, ಬೇಡದ ದೇವರಿಲ್ಲ, ಸುತ್ತದ ಆಸ್ಪತ್ರೆಗಳಿಲ್ಲ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ರಘು ಇಂದಿಗೂ ದಿವ್ಯಾಳನ್ನು ಮಗುವಂತೆ ನೋಡಿಕೊಳ್ಳುತ್ತಿದ್ದಾರೆ. ತನ್ನನ್ನು ಇಷ್ಟು ಪ್ರೀತಿಸುವ ಗಂಡನನ್ನು ಬಿಟ್ಟು ಹೋಗದೆ ದಿವ್ಯಾ ಸಹ ಉಸಿರು ಬಿಗಿಹಿಡಿದುಕೊಂಡಿದ್ದಾಳೆ.

  ಎಲ್‌ಪಿಜಿ ಸಿಲಿಂಡರ್‌ ಬೆಲೆ 50ರೂ ಹೆಚ್ಚಳ..!ಇಂದಿನಿಂದಲೇ ಪರಿಷ್ಕ್ರತ ದರ ಜಾರಿಗೆ | Oneindia Kannada
  ಪ್ರೇಮಿಗಳಿಗೆ ಮಾದರಿ

  ಪ್ರೇಮಿಗಳಿಗೆ ಮಾದರಿ

  ಸಣ್ಣ-ಸಣ್ಣ ವಿಚಾರಕ್ಕೆ ಜಗಳ ಮಾಡಿಕೊಂಡು ದೂರವಾಗೋ ಪ್ರೇಮಿಗಳ ನಡುವೆ, ನಿಷ್ಕಲ್ಮಶವಾದ ಪ್ರೀತಿ ಇಂದಿಗೂ ಜೀವಂತವಾಗಿದೆ ಅನ್ನೋದನ್ನ ತೋರಿಸಿಕೊಟ್ಟ ರಘು ಮತ್ತು ದಿವ್ಯಾ ಇಂದಿನ ದಿನಗಳಲ್ಲಿ ಪ್ರೇಮಿಗಳಿಗೆ ಮಾದರಿ.

  English summary
  Kolar district Malur taluk Raghu looking his wife Divya from past 5 years. Raghu and Divya married in 2013 and Divya is in coma state.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X