ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ ಬಗ್ಗೆ ಗೊತ್ತಿಲ್ಲ ಎಂದ ಆರೋಗ್ಯ ಸಚಿವ

|
Google Oneindia Kannada News

ಕೋಲಾರ, ನವೆಂಬರ್ 03 : ಇಡೀ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆ ವೈದ್ಯರು ತಮ್ಮ ಆಸ್ಪತ್ರೆಗಳಿಗೆ ಕದ ಹಾಕಿ ಪ್ರತಿಭಟನೆ ನಡೆಸಿರುವುದರ ಬಗ್ಗೆ ರಾಜ್ಯ ಆರೋಗ್ಯ ಸಚಿವರ ಗಮನಕ್ಕೆ ಇಲ್ಲವಂತೆ.

LIVE: ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ, ಸರ್ಕಾರಿ ಆಸ್ಪತ್ರೆಯೇ ದಿಕ್ಕುLIVE: ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ, ಸರ್ಕಾರಿ ಆಸ್ಪತ್ರೆಯೇ ದಿಕ್ಕು

ಈ ಬಗ್ಗೆ ಕೋಲಾರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಜ್ಯ ಆರೋಗ್ಯ ಸಚಿವ ರಮೇಶ್ ಕುಮಾರ್, "ಖಾಸಗಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ನನಗೆ ಗೊತ್ತಿಲ್ಲ. ಧರಣಿ ನಡೆಸುವ ಬಗ್ಗೆ ನನಗೆ ಯಾವುದೇ ನೊಟೀಸ್ ಕೊಟ್ಟಿಲ್ಲ" ಎಂದು ಹೇಳಿದರು.

In Pics : ವೈದ್ಯರ ಮುಷ್ಕರದಿಂದ ರೋಗಿಗಳ ನೀಗದ ಸಂಕಷ್ಟ

Health Minister Ramesh Kumar reacts to the doctors strike in the state

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ (ತಿದ್ದುಪಡಿ) 2017 ಅನ್ನು ವಿಧಾಸಭೆಯಲ್ಲಿ ಮಂಡಿಸುವ ಪೂರ್ವದಲ್ಲಿಯೇ ಖಾಸಗಿ ವೈದ್ಯಕೀಯ ಸಂಸ್ಥೆ ಸದಸ್ಯರ ಜತೆ ಚರ್ಚಿಸಲಾಗಿದೆ.

ವೈದ್ಯರ ಮುಷ್ಕರ, ಸರ್ಕಾರದ ಹಠ, ರೋಗಿಗಳ ಪರದಾಟವೈದ್ಯರ ಮುಷ್ಕರ, ಸರ್ಕಾರದ ಹಠ, ರೋಗಿಗಳ ಪರದಾಟ

ಬಳಿಕ ಕರಡನ್ನು ಅವರಿಗೆ ಕೊಟ್ಟ ಇದರ ಬಗ್ಗೆ ಸಲಹೆಗಳನ್ನು ಕೇಳಲಾಗಿತ್ತು. ಹಾಗೂ ಎರಡು ಬಾರಿ ನನ್ನ ಜತೆ ಮತ್ತು ಒಂದು ಬಾರಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿದ್ದಾರೆ. ಬಳಿಕ ತಿದ್ದು ಪಡೆಯ ವಿಧೇಯಕವನ್ನು ಪರಿಶೀಲನೆಗೆ ಅಸೆಂಬ್ಲಿಯಲ್ಲಿ ಇಡಲಾಗಿತ್ತು.

ಇದಾದ ಮೇಲೆ ಇದರಲ್ಲಿ ಸಂಬಂಧವಿರುವವರನ್ನು ಕರೆಸಿ ಅಭಿಪ್ರಾಯಗಳನ್ನು ಕೇಳಿ ಸಮಿತಿಯ ಅಧ್ಯಕ್ಷರು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆದರೆ, ಇದೀಗ ಯಾಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವುದು ತಿಳಿದಿಲ್ಲವೆಂದು ಹೇಳಿದರು.

ಅದು ಏನೇ ಇರಲಿ ವೈದ್ಯರು ಮತ್ತು ಸರ್ಕಾರದ ನಡುವಿನ ತಿಕ್ಕಾಟದಲ್ಲಿ ತೊಂದರೆ ಅನುಭವಿಸುತ್ತಿರುವುದು ಮಾತ್ರ ಸಾರ್ವಜನಿಕರು.

ನವೆಂಬರ್ 03ರಂದು ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ ನಡೆಸುತ್ತಿರುವ ಬಗ್ಗೆ ಕಳೆದ ಮೂರು ದಿನಗಳಿಂದ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಪ್ರಸಾರವಾಗುತ್ತಿದೆ. ಆದರೆ, ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ತಮ್ಮ ಗಮನಕ್ಕೆ ಬಂದಿಲ್ಲ ಎನ್ನುವುದು ಎಷ್ಟು ಸರಿ.

English summary
Karnataka Health Minister Ramesh Kumar reacts to the private hospitals doctors strike in state on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X