• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್‌ನಲ್ಲೂ ಹಲವರು ಸೂಟು ಹೊಲಿಸಿಕೊಂಡಿದ್ದಾರೆ; ಎಚ್‌ಡಿಕೆ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜೂನ್ 18; "ಮುಖ್ಯಮಂತ್ರಿ ಆಗುವುದಕ್ಕೆ ಕೆಲವರು ಸೂಟ್ ಹೊಲಿಸಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲೂ ಸೂಟ್ ಹೊಲಿಸಿಕೊಂಡು ರೆಡಿ ಇದ್ದಾರೆ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ಶುಕ್ರವಾರ ಕೋಲಾರದಲ್ಲಿ ಮಾತನಾಡಿದ ಅವರು, "ಕೂಡಲೇ ಕೊರೊನಾ ವಿಚಾರವಾಗಿ ಕಲಾಪ ಕರೆಯಬೇಕು. ಬಿಜೆಪಿ ಪಕ್ಷದ ಶಾಸಕರಲ್ಲೇ ಹೊಂದಾಣಿಕೆ ಇಲ್ಲ. ನಾಯಕತ್ವ ಗೊಂದಲ ಒಂದು ದುರಾದೃಷ್ಟಕರ ವಿಚಾರವಾಗಿದೆ" ಎಂದರು.

ಕೋಲಾರ; ಶಾಲಾ ಆವರಣದಲ್ಲಿ ಮದ್ಯ ಸೇವನೆ, ಜೂಜಾಟ ಕೋಲಾರ; ಶಾಲಾ ಆವರಣದಲ್ಲಿ ಮದ್ಯ ಸೇವನೆ, ಜೂಜಾಟ

"ಕಾಂಗ್ರೆಸ್‌ನಲ್ಲೂ ಮುಖ್ಯಮಂತ್ರಿಯಾಗಲು ಸೂಟ್ ಹೊಲಿಸಿಕೊಂಡು ರೆಡಿ ಇದ್ದಾರೆ. ಗೊತ್ತಾಗುತ್ತೆ 2023 ರಲ್ಲಿ ಏನು ಆಗುತ್ತೆ ಅಂತ" ಎಂದು ಕುಮಾರಸ್ವಾಮಿ ತಿಳಿಸಿದರು.

ಬಿಜೆಪಿ ಶಾಸಕನ ಫೋನ್ ಕದ್ದಾಲಿಕೆ; ಸಿದ್ದರಾಮಯ್ಯ ಸರಣಿ ಟ್ವೀಟ್ ಬಿಜೆಪಿ ಶಾಸಕನ ಫೋನ್ ಕದ್ದಾಲಿಕೆ; ಸಿದ್ದರಾಮಯ್ಯ ಸರಣಿ ಟ್ವೀಟ್

"ನಮ್ಮದು ರಾಕ್ಷಸಿ ಸರ್ಕಾರ ಅಂತ ಹೇಳಿ ಹೋದ ಒಬ್ಬ ಶಾಸಕ ಭ್ರಷ್ಟಾಚಾರದ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತಾರಂತೆ. ಕೇವಲ ನೀರಾವರಿ ಇಲಾಖೆಯಲ್ಲಿ ಮಾತ್ರ ಭ್ರಷ್ಟಾಚಾರವಿಲ್ಲ. ಎಲ್ಲ ಇಲಾಖೆಯಲ್ಲೂ ಇದೆ" ಎಂದು ಆರೋಪಿಸಿದರು.

ವಿಶ್ವನಾಥ್ ಸರ್ಟಿಫಿಕೇಟ್ ನನಗೆ ಅಗತ್ಯವಿಲ್ಲ; ರೇಣುಕಾಚಾರ್ಯ ವಿಶ್ವನಾಥ್ ಸರ್ಟಿಫಿಕೇಟ್ ನನಗೆ ಅಗತ್ಯವಿಲ್ಲ; ರೇಣುಕಾಚಾರ್ಯ

"ಬಿಜೆಪಿಯವರು ದಂಗೆ ನಡೆಸುವ ಕಾಲವಲ್ಲ ಇದಲ್ಲ. ಜನರು ಕಷ್ಟದಲ್ಲಿ ಇದ್ದಾರೆ. ಸರ್ಕಾರ ತನ್ನ ಅಸ್ಥಿರತೆ ತೋರಿಸುತ್ತ ಕುಳಿತುಕೊಂಡರೆ ಜನರ ಬದುಕು ಏನಾಗಬೇಕು?. ಸ್ವಾಮೀಜಿಗಳು ಧಾರ್ಮಿಕ ವಿಚಾರದಲ್ಲಿ ಆಸಕ್ತಿ ವಹಿಸಬೇಕು. ನಾಡಿನ ಜನರ ಪರವಾಗಿ ಸ್ವಾಮೀಜಿಗಳು ಇರಬೇಕು" ಎಂದರು.

ಎಚ್. ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, "ಯಾರು ಯಾರು ಯಾವ ಟೈಂನಲ್ಲಿ ಹೃದಯದಲ್ಲಿ ಇರುತ್ತಾರೆ ಅಂತ ನನಗೆ ಗೊತ್ತಿದೆ. ಬೇಕಾದಾಗ ಹೃದಯದಲ್ಲಿ ಇಟ್ಟುಕೊಳ್ಳುತ್ತಾರೆ. ಬೇಡವೆಂದಾಗ ಜೆಡಿಎಸ್ ಪಕ್ಷದ ಬಗ್ಗೆ ಟೀಕೆ ಮಾಡುತ್ತಾರೆ" ಎಂದು ಟಾಂಗ್ ನೀಡಿದರು.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, "ಬಿಜೆಪಿ ಸರ್ಕಾರ ಬರಬೇಕಾದರೆ ಕಾಂಗ್ರೆಸ್ ನೇರ ಕಾರಣ. ಬಿಜೆಪಿಯ ದುರಾಡಳಿತದಲ್ಲಿ ಕಾಂಗ್ರೆಸ್‌ನವರದ್ದು ಸಮಾನ ಪಾಲಿದೆ. ಚುನಾವಣೆಯಲ್ಲಿ ನಾನು ಯಾರ ಜೊತೆಗೂ ರಾಜಿ ಮಾಡಿಕೊಂಡಿಲ್ಲ. ಸಿದ್ದರಾಮಯ್ಯ ಏನು ಮಹಾ ಹರಿಶ್ಚಂದ್ರರ?" ಎಂದು ಪ್ರಶ್ನಿಸಿದರು.

"ಸಿದ್ದರಾಮಯ್ಯ ಅವರಿಂದ ನಾನು ಏನೂ ಕಲಿಯಬೇಕಿಲ್ಲ. 2008ರಲ್ಲಿ ಆಪರೇಷನ್ ಕಮಲ ಚುನಾವಣೆಯಲ್ಲಿ ನೀವು ಯಡಿಯೂರಪ್ಪನವರ ಬಳಿ ಹಣ ಪಡೆದಿರಿ ಎಂದು ನಿಮ್ಮ ಆಪ್ತರು ಹೇಳಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸೋಕೆ ನೀವು ಹಣ ಪಡೆದಿದ್ದೀರಿ. ಯಾವ ಟೈಂನಲ್ಲಿ ಕತ್ತು ಕೊಯ್ಯಬೇಕು ಅನ್ನೋದು ಸಿದ್ದರಾಮಯ್ಯ ಜಾಯಮಾನ. ನಿಮಗೆ ಎಷ್ಟು ಕೋಟಿ ಬಂತು?, ನಿಮ್ಮ ಜೇಬಲ್ಲಿ ಎಷ್ಟು ಹಣ ಹೋಯ್ತು ಅಂತ ನಿಮ್ಮ ಆಪ್ತರು ಹೇಳಿದ್ದಾರೆ" ಎಂದು ಹೇಳಿದರು.

   WTC ಮೊದಲ ದಿನ ದಿನದ ಪಂದ್ಯ ನಡೆಯೋದಿಲ್ಲ | Oneindia Kannada

   "ನನ್ನ ಬಗ್ಗೆ ಮಾತನಾಡುವಾಗ ಹುಷಾರ್, ನಾಲಿಗೆ ಬಿಗಿ ಹಿಡಿದು ಮಾತನಾಡಿ. ಜಿಂದಾಲ್ ವಿಚಾರದಲ್ಲಿ ನಾನು ಏಕೆ ಕಿಕ್ ಬ್ಯಾಕ್ ಪಡೆದುಕೊಳ್ಳಲಿ. ಹಾಗಿದ್ದರೆ ಕ್ಯಾಬಿನೆಟ್ ಸಬ್ ಕಮಿಟಿ ಏಕೆ ಮಾಡುತ್ತಿದ್ದೆ. ರಾಜ್ಯದ ಆಸ್ತಿ ಅಡವಿಟ್ಟು ರಾಜಕೀಯ ಮಾಡು ಅಂತ ನನ್ನಪ್ಪ ಹೇಳಿಕೊಟ್ಟಿಲ್ಲ" ಎಂದು ಕುಮಾರಸ್ವಾಮಿ ತಿಳಿಸಿದರು.

   English summary
   Former chief minister H. D. Kumaraswamy verbal attack on Congress party and opposition leader Siddaramaiah
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X