• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿಎಂ ಯಡಿಯೂರಪ್ಪ ಜನಪರ ಬಜೆಟ್ ಕೊಟ್ಟಿದ್ದಾರೆ: ವಿಶ್ವನಾಥ್

By ಕೋಲಾರ ಪ್ರತಿನಿಧಿ
|

ಕೋಲಾರ, ಮಾರ್ಚ್ 08: ವಿರೋಧ ಪಕ್ಷದವರು ಇರುವುದೇ ವಿರೋಧ ಮಾಡುವುದಕ್ಕೆ, ಆದರೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಒಂದು ಯೋಗ್ಯವಾದಂತಹ ಆಯವ್ಯಯವನ್ನು ಎಲ್ಲಾ ವಗ೯ದವರನ್ನು ಮನಸ್ಸಿನಲ್ಲಿಟ್ಟುಕೊಂಡು ಮಂಡಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದರು.

ಕೋಲಾರದಲ್ಲಿ ಮಾತನಾಡಿದ ಅವಾರು, ಜನರ ಸಂಕಷ್ಟಗಳನ್ನು ಹೃದಯದಲ್ಲಿಟ್ಟುಕೊಂಡು ಒಂದು ಒಳ್ಳೆಯ, ಜನಪರ ಬಜೆಟ್ ನ್ನು ಕೊಟ್ಟಿದ್ದಾರೆ ಎಂದು ಎಚ್.ವಿಶ್ವನಾಥ್ ಪ್ರತಿಕ್ರಿಯಿಸಿದರು.

ಉಲ್ಟಾ ಹೊಡೆದ ಯುವತಿ; ಪರಾರಿಯಾಗಿದ್ದ ಕೋಲಾರ ಸ್ವಾಮೀಜಿ ಈಗ ಜೈಲುಪಾಲು

ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಅವರು, ಮಂಡ್ಯದಲ್ಲಿ ಕುಮಾರಸ್ವಾಮಿ ಯಾವ ರೀತಿ ಚುನಾವಣೆ ಮಾಡಿದ್ದಾರೆ ಎಂದು ನನಗೂ ಗೊತ್ತಿದೆ, ಜನರಿಗೂ ತಿಳಿದಿದೆ ಎಂದರು. ಕುಮಾರಸ್ವಾಮಿ ದುಡ್ಡು ಇರುವ ವ್ಯಕ್ತಿ, ಕುಮಾರಸ್ವಾಮಿ ಅಂದ್ರೆ ಅದು ಕೇವಲ ಕುಮಾರಸ್ವಾಮಿ ಮಾತ್ರ ಆಗಿರಬಾರದು. ಸಾವ೯ಜನಿಕ ಜೀವನದಲ್ಲಿ ನಾವೂ ಹೇಗೆ ಇರುತ್ತೇವೆ ಅಂತ ಅವರೂ ಅಥ೯ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಚ್.ಡಿ ಕುಮಾರಸ್ವಾಮಿ ತನ್ನ ಮಗನ ನಿಶ್ಚಿತಾಥ೯ಕ್ಕೆ ಥೈಲ್ಯಾಂಡ್ ನಿಂದ ಹಾರ ತರಿಸಿದ್ದಾರೆ. ಐವತ್ತು ಅರವತ್ತು ಎಕರೆಯಲ್ಲಿ ಮದುವೆ ಮಾಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ ಇದೆಲ್ಲಾ ಬೇಕಾ ಅಂತ ನಾನು ಕುಮಾರಸ್ವಾಮಿಯವರಿಗೆ ಪ್ರಶ್ನೆ ಮಾಡಿದ್ದೇನೆ ಅಷ್ಟೇ. ಸಾವ೯ಜನಿಕರ ಜೀವನದಲ್ಲಿ ಇರುವವರು ಆದಶ೯ವಾಗಿ ಬದುಕಬೇಕು ಹಾಗೂ ಆದಶ೯ವಾಗಿ ಮದುವೆಯಾಗಬೇಕು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರಿಗೆ ವ್ಯಂಗ್ಯವಾಡಿದರು.

ರಾಜ್ಯಕ್ಕೆ ಕೊರೊನಾ ಭೀತಿ: ಗಡಿ ಜಿಲ್ಲೆ ಕೋಲಾರದಲ್ಲಿ ಕಟ್ಟೆಚ್ಚರ

ಇದೇ ವೇಳೆ ಮಾತನಾಡಿದ ಇನ್ನೊಬ್ಬ ಮಾಜಿ ಸಚಿವ ಆರ್.ಶಂಕರ್, ಬಿಜೆಪಿಯ ಹಿರಿಯ ನಾಯಕರು ಈಗಲೂ ನನ್ನ ಜೊತೆಯಲ್ಲಿದ್ದಾರೆ ಎಂದು ತಿಳಿಸಿದರು. ಕುರುಬರ ಸಮುದಾಯದ ಕಾಯ೯ಕ್ರಮಕ್ಕೆ ಕೋಲಾರಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು ಮೊದಲಿನಂತೆ ಈಗಲೂ ಬಿಜೆಪಿಯ ನಾಯಕರು ನನ್ನ ಜೊತೆ ಇದ್ದಾರೆ ಎಂದು ಹೇಳಿದರು.

ಮುಂದೆ ಏನಾಗುತ್ತೆ ಅಂತ ಭವಿಷ್ಯ ಹೇಳುವ ತ್ರಿಕಾಲ ಜ್ಞಾನಿ ನಾನಲ್ಲ ಆದರೆ ನೂರಕ್ಕೆ ನೂರು ಸಕಾ೯ರ ಸುಭದ್ರವಾಗಿರುತ್ತದೆ ಅಂತ ತಿಳಿಸಿದರು. ನಾನು ಮಂತ್ರಿ ಆಗಿದ್ದವನು ಹಾಗಾಗಿ ನಿಗಮ ಮಂಡಳಿಗೆ ಬೇಡಿಕೆ ಇಟ್ಟಿಲ್ಲ. ಮೊನ್ನೆ ನಡೆದ ಎಂಎಲ್ಸಿ ಚುನಾವಣೆ ವೇಳೆ ಲಕ್ಷ್ಮಣ್ ಸವದಿ ಜೊತೆಯಲ್ಲಿ ನಾನು ಸಹ ಸಿಎಂ ಬಳಿ ಟಿಕೇಟ್ ಗೆ ಬೇಡಿಕೆ ಇಟ್ಟಿದ್ದೆ, ಆದರೆ ಟಿಕೆಟ್ ನನ್ನ ಕೈ ತಪ್ಪಿದೆ.

ಜೂನ್ ತಿಂಗಳಲ್ಲಿ ನಡೆಯುವ ಎಂಎಲ್ಸಿ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗಲಿದೆ, ಸ್ವತಃ ಸಿಎಂ ಬಿ.ಎಸ್ ಯಡಿಯೂರಪ್ಪನವರೇ ಟಿಕೆಟ್ ಕೊಟ್ಟು ಮಂತ್ರಿ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

English summary
Former Minister H Vishwanath said that Chief Minister BS Yeddyurappa had presented a decent budget with all Class People in mind.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more