ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಸಂಸದರ ವಿರುದ್ಧ 'ಮುನಿ'ದ ಸಚಿವ ಎಚ್. ನಾಗೇಶ್!

|
Google Oneindia Kannada News

ಕೋಲಾರ, ನವೆಂಬರ್ 02: ಕೋಲಾರ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ. ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಮತ್ತು ಸಂಸದ ಎಸ್. ಮನಿಸ್ವಾಮಿ ನಡುವಿನ ಜಟಾಪಟಿ ಬಹಿರಂಗವಾಗಿದೆ.

"ಸಚಿವನಾದ ನನಗೆ ಮರ್ಯಾದೆ ಇಲ್ಲವೇ?. ನಾನು ಬಿಟ್ಟಿ ಬಿದ್ದಿದ್ದೇನಾ?" ಎಂದು ಸಚಿವ ಎಚ್. ನಾಗೇಶ್ ಸಂಸದರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಈ ಮೂಲಕ ಜಿಲ್ಲಾ ಬಿಜೆಪಿಯಲ್ಲಿ 'ಮುನಿ'ಸನ್ನು ಜನರ ಮುಂದಿಟ್ಟಿದ್ದಾರೆ.

ಸಿಎಂ ಬಗ್ಗೆ ಯತ್ನಾಳ್ ಹೇಳಿಕೆ; ಅಬಕಾರಿ ಸಚಿವ ನಾಗೇಶ್ ಪ್ರತಿಕ್ರಿಯೆಸಿಎಂ ಬಗ್ಗೆ ಯತ್ನಾಳ್ ಹೇಳಿಕೆ; ಅಬಕಾರಿ ಸಚಿವ ನಾಗೇಶ್ ಪ್ರತಿಕ್ರಿಯೆ

ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್. ನಾಗೇಶ್ ಬಿಜೆಪಿ ಸರ್ಕಾರ ರಚನೆಗೆ ಬೆಂಬಲ ನೀಡಿದ್ದಾರೆ. ಆದ್ದರಿಂದ ಯಡಿಯೂರಪ್ಪ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದಾರೆ. ಕೋಲಾರ ಜಿಲ್ಲಾ ಉಸ್ತುವಾರಿಯೂ ಅವರ ಹೆಗೆಲೇರಿದೆ.

 ಅಬಕಾರಿ ಸಚಿವ ನಾಗೇಶ್ ಹೇಳಿಕೆ ವಿರುದ್ಧ ರೇಣುಕಾಚಾರ್ಯ ಅಸಮಾಧಾನ ಅಬಕಾರಿ ಸಚಿವ ನಾಗೇಶ್ ಹೇಳಿಕೆ ವಿರುದ್ಧ ರೇಣುಕಾಚಾರ್ಯ ಅಸಮಾಧಾನ

2019ರ ಲೋಕಸಭೆ ಚುನಾವಣೆಯಲ್ಲಿ ಕೋಲಾರದಲ್ಲಿ ಕಾಂಗ್ರೆಸ್‌ನ ಕೆ. ಎಚ್. ಮುನಿಯಪ್ಪ ಸೋಲಿಸಿದ ಎಸ್. ಮುನಿಸ್ವಾಮಿ ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡಿದ್ದಾರೆ. ಆದರೆ ನಾಗೇಶ್ ಮತ್ತು ಮುನಿಸ್ವಾಮಿ ನಡುವೆ ಎಲ್ಲವೂ ಸರಿ ಇಲ್ಲ.

ಸಚಿವ ಸ್ಥಾನಕ್ಕೆ ಪಕ್ಷೇತರ ಶಾಸಕ ಎಚ್ ನಾಗೇಶ್ ರಾಜೀನಾಮೆ, ಬಿಜೆಪಿಗೆ ಬೆಂಬಲ ಘೋಷಣೆಸಚಿವ ಸ್ಥಾನಕ್ಕೆ ಪಕ್ಷೇತರ ಶಾಸಕ ಎಚ್ ನಾಗೇಶ್ ರಾಜೀನಾಮೆ, ಬಿಜೆಪಿಗೆ ಬೆಂಬಲ ಘೋಷಣೆ

ನನಗೆ ಗೌರವ ಕೊಡಬೇಕು

ನನಗೆ ಗೌರವ ಕೊಡಬೇಕು

ಸಚಿವ ಎಚ್. ನಾಗೇಶ್ ಮಾತನಾಡಿ, "ಸಂಸದ ಮುನಿಸ್ವಾಮಿ ಅವರು ಜಿಲ್ಲಾ ಉಸ್ತುವಾರಿ ಸಚಿವನಾದ ನನಗೆ ಗೌರವ ಕೊಡಬೇಕು. ಅವರು ನನ್ನ ಬಗ್ಗೆ ಹಗುರವಾಗಿ ಮಾತನಾಡಿದರೆ ಹೋರಾಟ ಮಾಡುತ್ತೇನೆ" ಎಂದು ಎಚ್ಚರಿಕೆ ನೀಡಿದರು.

ಸಂಸದರಿಗೆ ಕೊನೆ ಎಚ್ಚರಿಕೆ

ಸಂಸದರಿಗೆ ಕೊನೆ ಎಚ್ಚರಿಕೆ

"ಸಚಿವನಾದ ನನಗೆ ಮರ್ಯಾದೆ ಇಲ್ಲವೇ?. ನಾನು ಬಿಟ್ಟಿ ಬಿದ್ದಿದ್ದೇನಾ?. ಸಂಸದರು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಇದೇ ರೀತಿ ಮಾತನಾಡುತ್ತಿದ್ದರಾ?" ಎಂದು ಎಚ್. ನಾಗೇಶ್ ಪ್ರಶ್ನೆ ಮಾಡಿದರು.

ಚಿಕ್ಕವರೆಂದು ಕ್ಷಮಿಸಿದ್ದೇನೆ

ಚಿಕ್ಕವರೆಂದು ಕ್ಷಮಿಸಿದ್ದೇನೆ

"ಮುನಿಸ್ವಾಮಿ ನನ್ನ ಸಂಬಂಧಿ ಮತ್ತು ಸಹೋದರ. ನನಗಿಂತ ಚಿಕ್ಕವರೆಂದು ಕ್ಷಮಿಸಿದ್ದೇನೆ. ಇನ್ನಾದರೂ ಅವರು ತಮ್ಮ ವರಸೆ ಬದಲಿಸಿಕೊಂಡರೆ ಒಳ್ಳೆಯದು" ಎಂದು ಎಚ್. ನಾಗೇಶ್ ಎಚ್ಚರಿಕೆ ನೀಡಿದರು.

Recommended Video

Modi ಯಿಂದ ಭಾರತೀಯರಿಗೆ ಮತ್ತೊಂದು Gift | Oneindia Kannada
ನನ್ನ ವಿರೋಧಿಗಳು

ನನ್ನ ವಿರೋಧಿಗಳು

"ಪಕ್ಷೇತರ ಶಾಸಕನಾದ ನಾನು ಎಲ್ಲರಿಗೂ ಬೇಕು. ನಾಲ್ಕೈದು ಜನರನ್ನು ಬಿಟ್ಟು ನನಗೆ ಯಾರೂ ಶತ್ರುಗಳಿಲ್ಲ. ಕೊತ್ತೂರು ಮಂಜುನಾಥ್ ಗುಂಪಿನವರು ಮಾತ್ರ ನನ್ನ ವಿರೋಧಿಗಳು. ಹೀಗಾಗಿ ಅವರನ್ನು ದೂರ ಇಟ್ಟಿದ್ದೇನೆ. ಅವರ ವರ್ತನೆ ಸರಿಯಿಲ್ಲ" ಎಂದು ಎಚ್. ನಾಗೇಶ್ ಆರೋಪಿಸಿದರು.

English summary
Kolar BJP unit witnessed for leaders verbal fight. Excise and Kolar district in-charge minister H. Nagesh unhappy with BJP MP Muniswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X