• search
  • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋಲಾರದಲ್ಲಿ ಕೊರೊನಾ ನಡುವೆಯೂ ನಿರಾತಂಕವಾಗಿ ಸಾಗುವ ಜೂಜು

By ಕೋಲಾರ ಪ್ರತಿನಿಧಿ
|

ಕೋಲಾರ, ಜುಲೈ 31: ಕೊರೊನಾ ಆವರಿಸಿರುವ ಭೀತಿಯ ನಡುವೆಯೂ ಐದಾರು ತಿಂಗಳುಗಳಿಂದ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಅಂದರ್ ಬಾಹರ್ ಜೂಜು ನಿರಾತಂಕವಾಗಿ ಸಾಗುತ್ತಿದೆ. ಇದರ ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಪ್ರತಿ ನಿತ್ಯ ನೂರಾರು ಮಂದಿ ಎರಡು ಪಾಳಿಗಳಲ್ಲಿ ಜೂಜು ಕೇಂದ್ರಗಳಿಗೆ ಬರುವರೆಂದು ತಿಳಿದುಬಂದಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರದ ವ್ಯಕ್ತಿಗಳಿಬ್ಬರು ಆವಲದೊಡ್ಡಿ ಎಂಬ ಗ್ರಾಮದಲ್ಲಿ ಅನಧಿಕೃತವಾಗಿ ಈ ಜೂಜು ಕೇಂದ್ರವನ್ನು ನಡೆಸುತ್ತಿದ್ದು, ಲಾಕ್‌ಡೌನ್, ಸೀಲ್ ‌ಡೌನ್ ಯಾವುದರ ಹಂಗೂ ಇಲ್ಲದೇ ಬೆಳಿಗ್ಗೆಯಿಂದ ಸಂಜೆವರೆಗೂ ಜೂಜು ನಡೆಯುತ್ತಿದೆ.

ಬೀದರ್: ಜೂಜುಅಡ್ಡೆ ಮೇಲೆ ದಾಳಿ ಮಾಡಿದ 17 ಪೊಲೀಸರಿಗೆ ಕ್ವಾರೆಂಟೈನ್!

ಕೋಲಾರ, ಬೆಂಗಳೂರು, ಶ್ರೀನಿವಾಸಪುರ, ಮುಳಬಾಗಿಲು ಹಾಗೂ ಆಂಧ್ರಪ್ರದೇಶದ ಮದನಪಲ್ಲಿ ಇತರೆಡೆಗಳಿಂದ ಬರುವ ನೂರಾರು ಮಂದಿ ಈ ಜೂಜು ಕೇಂದ್ರಗಳಲ್ಲಿ ಜಮಾವಣೆಗೊಂಡು ಲಕ್ಷಾಂತರ ರೂಪಾಯಿಗಳನ್ನು ಪಣಕ್ಕಿಟ್ಟು ಅಂದರ್ ಬಾಹರ್ ಆಡುತ್ತಿರುವ ಮಾಹಿತಿಯಿದೆ. ಜೂಜಾಟವಾಡಿಸುವವರು ನಿತ್ಯ ಎರಡು ಲಕ್ಷ ರೂಪಾಯಿಗಳವರೆಗೂ ಆದಾಯ ಮಾಡಿಕೊಳ್ಳುತ್ತಿದ್ದಾರೆ.

ಕೋಲಾರ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದಲೂ ಹೀಗೆ ಜೂಜು ಕೇಂದ್ರಗಳನ್ನು ನಡೆಸುತ್ತಿದ್ದು, ಪೊಲೀಸ್ ಮತ್ತು ಅಧಿಕಾರಿಗಳ ಭಯ ಈ ಅನಧಿಕೃತ ಜೂಜು ಕೇಂದ್ರಗಳನ್ನು ನಡೆಸುವವರಿಗೆ ಇಲ್ಲವಾಗಿದೆ. ಕೊರೊನಾ ಲಾಕ್ ಡೌನ್ ಸಮಯದಲ್ಲೂ ಜೂಜು ಕೇಂದ್ರ ನಡೆಸಿದ್ದರೆಂದು ತಿಳಿದುಬಂದಿದೆ. ಇದೀಗ ಜೂಜು ನಡೆಸುವ ಪಾಲುದಾರರ ಮಧ್ಯೆ ತಗಾದೆ ಏರ್ಪಟ್ಟಿದ್ದು, ಇದರಿಂದ ಲಕ್ಷ್ಮೀಪುರ ಹಾಗೂ ಆವಲದೊಡ್ಡಿಯಲ್ಲಿ ನಡೆಯುತ್ತಿರುವ ಜೂಜಾಟದ ವಿಡಿಯೋಗಳು ವೈರಲ್ ಆಗಿವೆ. ಪೊಲೀಸರವರೆಗೂ ಪ್ರಕರಣ ಮುಟ್ಟಿದೆ.

ಆದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

English summary
Gambling in the border villages of kolar district has been going smoothly for over five months, amid fear of coronavirus,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X