ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರ; ವೆಂಟಿಲೇಟರ್ ಸಮಸ್ಯೆ 4 ರೋಗಿಗಳು ಸಾವು

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಏಪ್ರಿಲ್ 26; ಕೋಲಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ರೋಗಿಗಳು ವೆಂಟಿಲೇಟರ್ ಸಮಸ್ಯೆಯಿಂದ ಭಾನುವಾರ ರಾತ್ರಿ ಮೃತಪಟ್ಟಪಟ್ಟಿದ್ದಾರೆ. ಮೃತಪಟ್ಟವರ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಸಿಯು ವಾರ್ಡ್‌ನಲ್ಲಿ ರಾತ್ರಿ 11 ಗಂಟೆಗೆ ಆಕ್ಸಿಜನ್ ತೆಗೆದಿದ್ದಾರೆ. ಇದರಿಂದಾಗಿ ಏಕಾಏಕಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.

ಕೋಲಾರ; ತಾಲೂಕಿಗೆ 2 ಕೋವಿಡ್ ಕೇರ್ ಸೆಂಟರ್ ಆರಂಭ ಕೋಲಾರ; ತಾಲೂಕಿಗೆ 2 ಕೋವಿಡ್ ಕೇರ್ ಸೆಂಟರ್ ಆರಂಭ

"ನನ್ನ ತಮ್ಮ ಶ್ರೀನಿವಾಸ್ ಸಹ ಮೃತಪಟ್ಟರು. ಮೂವರು ಪುರುಷರು, ಓರ್ವ ಮಹಿಳಾ ರೋಗಿ ಸಾವನ್ನಪ್ಪಿದರು. ಒಂದು ವೇಳೆ ರಾತ್ರಿ ವೆಂಟಿಲೇಟರ್ ಇದಿದ್ದರೆ ಅವರು ಉಳಿಯುತ್ತಿದ್ದರು" ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಕೋಲಾರ; ಕಾಡಾನೆ ದಾಳಿಗಿಲ್ಲ ಪರಿಹಾರ, ರೈತರು ಹೈರಾಣಕೋಲಾರ; ಕಾಡಾನೆ ದಾಳಿಗಿಲ್ಲ ಪರಿಹಾರ, ರೈತರು ಹೈರಾಣ

Four Patients On Ventilator Support Die At Kolar

"ವೆಂಟಿಲೇಟರ್ ಸಮಸ್ಯೆ ಬಗ್ಗೆ ಜಿಲ್ಲಾ ಸರ್ಜನ್‌ಗೆ ಕರೆ ಮಾಡಿದರೆ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಎಷ್ಟು ಕೇಳಿಕೊಂಡರು 'ಡಿ' ಗ್ರೂಪ್ ನೌಕರರು, ಸಿಬ್ಬಂದಿಗಳು ಸ್ಪಂದಿಸಿಲ್ಲ. ಜಿಲ್ಲಾಧಿಕಾರಿಗೆ ಕರೆ ಮಾಡಿದರೆ ಉತ್ತರಿಸಲಿಲ್ಲ" ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಕೋವಿಡ್; ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಕೋವಿಡ್; ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ

"ಜೀವ ಉಳಿಸಿಕೊಳ್ಳಬೇಕು ಎಂದುದ ನಾವು ಜಿಲ್ಲಾಸ್ಪತ್ರೆಗೆ ಬಂದರೆ ಇಲ್ಲಿ ಜೀವ ಹೋಗುತ್ತಿದೆ. ಜನಪ್ರತಿನಿಧಿಗಳಿಂದ ರೆಫರ್ ಮಾಡಿದ್ರೆ ಐಸಿಯು ಬೆಡ್ ಸಿಗುತ್ತೆ, ಜನ ಸಾಮಾನ್ಯರ ಗತಿ ಏನು?" ಎಂದು ಪ್ರಶ್ನಿಸಿದರು.

Recommended Video

ಕೋವಿಡ್‌ ಅಲೆಗೆ ತತ್ತರಿಸಿದ ಭಾರತದ ನೆರವಿಗೆ ನಿಂತ ಯುಕೆ, ಯು.ಎಸ್‌ ಸೇರಿ ಹಲವು ರಾಷ್ಟ್ರಗಳು | Oneindia Kannada

ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, "ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ಸಮಸ್ಯೆ ಇಲ್ಲ" ಎಂದು ಹೇಳಿದರು. ಹಾಗಾದರೆ ವೆಂಟಿಲೇಟರ್ ಸಮಸ್ಯೆ ಕುರಿತು ಸಂಬಂಧಿಕರು ಹೇಳುವುದು ಸುಳ್ಳಾ ಅಥವಾ ಜಿಲ್ಲಾಧಿಕಾರಿ ಹೇಳೋದು ಸುಳ್ಳಾ? ಎಂಬುದು ಪ್ರಶ್ನೆ.

English summary
People alleged that Four patients who were admitted to the ICU died in Kolar hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X