ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಡಿ ಪ್ರಕರಣದ ಕುರಿತು ನನ್ನನ್ನು ಏನೂ ಕೇಳಬೇಡಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್

|
Google Oneindia Kannada News

ಕೋಲಾರ, ಏಪ್ರಿಲ್ 1: ಸಿಡಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ, ನನ್ನನ್ನು ಏನೂ ಕೇಳಬೇಡಿ. ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ಇಲ್ಲ, ಅದು ಕಾನೂನು ರೀತಿ ನಡೆಯುತ್ತದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.

ಕೋಲಾರದ ನಿರ್ಮಿತಿ ಕೇಂದ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್ಚು ಆಸಕ್ತಿಯಿಂದ ವ್ಯಾಖ್ಯಾನ ಮಾಡೋದು ನನ್ನ ಯೋಗ್ಯತೆ, ಗೌರವಕ್ಕೆ ಒಳ್ಳೆಯದಲ್ಲ. ಕಾಂಗ್ರೆಸ್ ಆದರೂ ಆಗ್ರಹ ಮಾಡಬಹುದು, ಯಾರಾದರು ಮಾಡಬಹುದು. ಅಧಿವೇಶನದ ಸಮಯದಲ್ಲಿ ನ್ಯಾಯವಾಗಿ ಮಾತನಾಡಿದ್ದೇನೆ ಎಂದರು.

ಸಿಡಿ ಸಂತ್ರಸ್ಥ ಯುವತಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ: ಮಾಜಿ ಸ್ಪೀಕರ್ ರಮೇಶ್ ಕುಮಾರ್ಸಿಡಿ ಸಂತ್ರಸ್ಥ ಯುವತಿಗೆ ರಕ್ಷಣೆ ನೀಡುವುದು ನಮ್ಮ ಕರ್ತವ್ಯ: ಮಾಜಿ ಸ್ಪೀಕರ್ ರಮೇಶ್ ಕುಮಾರ್

ಸಿಡಿ ಸಂತ್ರಸ್ತೆ ಈಗಾಗಲೇ ಕೋರ್ಟ್ ಮುಂದೆ ಬಂದಿದ್ದಾಳೆ, ಅಲ್ಲಿಗೆ ಎಲ್ಲಾ ಮುಗೀತು, ಇನ್ನು ಕೋರ್ಟ್ ಆಯ್ತು ಅವರಾಯ್ತು ಅಷ್ಟೆ. ನ್ಯಾಯಾಂಗವೇ ಸಂತ್ರಸ್ತೆಗೆ ಅವಕಾಶ ನೀಡಿದೆ. ವ್ಯವಸ್ಥೆಯ ಮೇಲೆ ನಂಬಿಕೆ ಇಡಬೇಕು ಎಂದರು.

Kolar: Former Speaker Ramesh Kumar Reaction On Ramesh Jarkiholi CD Row Case

ಕೊಚ್ಚೆ ನೀರಲ್ಲಿ ಸಂಪಿಗೆ ವಾಸನೆ ಬರಲ್ಲ, ಮನುಷ್ಯ ಅಂದಮೇಲೆ ಚಪಲ ಇರುತ್ತೆ. ಪಂಚೇದ್ರಿಯಗಳು ಕೆಲಸ ಮಾಡುತ್ತವೆ, ಇದೆಲ್ಲಾ ಕಾಮನ್ ರೀ, ದೊಡ್ಡ ವಿಚಾರವೇ ಅಲ್ಲ, ಜನರ ಕಷ್ಟ ಯಾರೂ ಮಾತನಾಡುವುದಿಲ್ಲ. ಅಸಹ್ಯವಾಗಿ ನಡೆದುಕೊಂಡಾಗ ಸಂವಿಧಾನ ಶಿಕ್ಷೆ ಕೊಡುತ್ತದೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಕಾರಿನ ಮೇಲೆ ಚಪ್ಪಲಿ ಎಸೆದ ಕುರಿತು ಪ್ರತಿಕ್ರಿಯಿಸಿದ ರಮೇಶ್ ಕುಮಾರ್, ಚಪ್ಪಲಿ ಹಳೆಯದಾಗಿತ್ತೇನೋ ಇರಲಿ ಬಿಡಿ, ಕಾರ್ಪೊರೇಷನ್‍ನವರು ಕ್ಲೀನ್ ಮಾಡ್ತಾರೆ ಎಂದು ವ್ಯಂಗ್ಯವಾಗಿ ಉತ್ತರಿಸಿದರು.

Recommended Video

ಇವರ ಕೆಟ್ಟ ಆಡಳಿತದ ವಿರುದ್ಧ ನಾವು ಹೋರಾಟ ಮಾಡ್ತೀವಿ ! | DK Shivakumar | Oneindia Kannada

ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ

English summary
I have nothing to do with the CD case, don't ask me anything. there is not much interest in the issue, Former Speaker Ramesh Kumar said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X