ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಸ್ಪೀಕರ್ ರಾಜಕೀಯ ನಿವೃತ್ತಿ ವದಂತಿ; ರಮೇಶ್ ಕುಮಾರ್ ಹೇಳಿದ್ದೇನು?

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಡಿಸೆಂಬರ್ 8: ಮಾಜಿ ಸ್ಪೀಕರ್, ಹಾಲಿ ಶ್ರೀನಿವಾಸಪುರ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರ ರಾಜಕೀಯ ನಿವೃತ್ತಿ ಎಂಬ ವದಂತಿ ಹಿನ್ನೆಲೆಯಲ್ಲಿ ಸ್ವತಃ ರಮೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಕೋಲಾರದ ಜನ್ನಘಟ್ಟ ಗ್ರಾಮದಲ್ಲಿ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ""ನಾನು ಜನರಿಗಾಗಿ ಮಾಡುವುದು ಇನ್ನೂ ಸಾಕಷ್ಟಿದೆ. ನಾನು ಇಂದಿರಾ ಗಾಂಧಿ ಭಾಷಣವನ್ನು ಕನ್ನಡಕ್ಕೆ ಭಾಷಾಂತರ ಮಾಡಿದವನು'' ಎಂದು ತಿಳಿಸಿದರು.

ಕೋಲಾರದಿಂದ ಬೆಂಗಳೂರು, ಮೈಸೂರು ರೈಲು ಪುನರಾರಂಭಕೋಲಾರದಿಂದ ಬೆಂಗಳೂರು, ಮೈಸೂರು ರೈಲು ಪುನರಾರಂಭ

ನನ್ನ ಜೀವನದಲ್ಲಿ ಯಾರೂ ಆಟವಾಡಲು ಬರಬಾರದು, ನನ್ನ ರಾಜಕೀಯ ನಿವೃತ್ತಿ ಎಂದು ತಿಳಿದು ಸುಮಾರು ಜನ ಗಣ್ಯರು ಫೋನ್ ಮಾಡುತ್ತಿದ್ದಾರೆ. ಆದರೆ ನಾನು ಈಗಲೇ ರಾಜಕೀಯ ನಿವೃತ್ತಿ ಬಯಸಿಲ್ಲವೆಂದರು.

 Kolar: Former Speaker Ramesh Kumar Clarification On Political Resignation Rumors

ಬೆಂಗಳೂರು, ಬೆಳಗಾವಿ, ವಿಜಯಪುರಗಳಿಂದ ಹಲವರು ಫೋನ್ ಮಾಡಿ ವಿಚಾರಿಸಿದ್ದಾರೆ. ನನ್ನ ರಾಜಕೀಯ ನಿವೃತ್ತಿ ನನ್ನೊಬ್ಬನ ನಿರ್ಧಾರ ಆಗಿರುವುದಿಲ್ಲ. ನಿವೃತ್ತಿಯಾಗುವಷ್ಟು ಸಮಯ ನನಗಿಲ್ಲ, ನಾನು ಸಾಕಷ್ಟು ಬಂಧನದಲ್ಲಿ ಸಿಲುಕಿದ್ದೇನೆ ಎಂದು ಭಾವನಾತ್ಮಕವಾಗಿ ನುಡಿದರು.

ಯಾರಿಗೂ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಹೇಳಿಲ್ಲ. ದಯಮಾಡಿ ಸುಳ್ಳು ಸುದ್ದಿ ಹಬ್ಬಿಸಿ ನನ್ನ ಮಾನ ಹರಣ ಮಾಡಬೇಡಿ ಎಂದು ವಿನಂತಿಸಿದರು.

Recommended Video

ಮೋದಿ ಸರ್ಕಾರ ಮಾಡ್ತಿರೋದು ಸರಿ ಅಂತೆ | Oneindia Kannada

ಖಾಸಗಿ ದಿನ ಪತ್ರಿಕೆ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ರಾಜಕೀಯ ನಿವೃತ್ತಿ ವದಂತಿ ತಳ್ಳಿಹಾಕಿದರು. ಇವರು ಕೋಲಾರ ಜಿಲ್ಲೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ.

English summary
Former Speaker Ramesh Kumar has made Clarification on the wake of rumors that Congress MLA Ramesh Kumar's political retirement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X