• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟೊಮೆಟೊ ಬೆಳೆಗಾರರ ನೆರವಿಗೆ ಧಾವಿಸುವಂತೆ ಸಿಎಂಗೆ ಹೆಚ್ ನಾಗೇಶ್ ಪತ್ರ

|
Google Oneindia Kannada News

ಕೋಲಾರ, ಮೇ 17: ಮಾಜಿ ಸಚಿವ ಎಚ್‌ ನಾಗೇಶ್ ಅವರು ಟೊಮೆಟೋ ಬೆಳೆಗಾರರ ಪರವಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಪತ್ರವನ್ನು ಬರೆದಿದ್ದು ನೆರವಿಗೆ ಧಾವಿಸುವಂತೆ ಮನವಿ ಮಾಡಿದ್ದಾರೆ. ಲಾಕ್‌ಡೌನ್‌ನ ಕಾರಣದಿಂದಾಗಿ ಟೊಮೆಟೋ ಬೆಳೆಗಾರರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಅವರಿಗೆ ನೆರವು ನೀಡಬೇಕೆಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ. ಮುಳಬಾಗಿಲು ತಾಲೂಕಿನ ರೈತರು ಅಸಹಾಯಕರಾಗಿದ್ದಾರೆ. ಹೀಗಾಗಿ ಸರ್ಕಾರ ಬೆಳೆಗಾರರ ನೆರವಿಗೆ ಮುಂದಾಗಬೇಕು ಅಂತ ಮಾಜಿ ಸಚಿವ ಎಚ್‌ ನಾಗೇಶ್ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ರೈತರು ಹೆಚ್ಚಾಗಿ ಟೊಮೆಟೋ ಬೆಳೆ ಬೆಳೆದಿದ್ದಾರೆ. ಆದರೆ ಸರಿಯಾಗಿ ಬೆಂಬಲ ಬೆಲೆ ಸಿಗದೆ ರೈತರು ಉತ್ತಮವಾಗಿ ಬಂದ ಬೆಳೆಯನ್ನು ರಸ್ತೆಗೆ ಸುರಿಸು ಹೋಗುತ್ತಿದ್ದು ಬಹಳಷ್ಟು ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಮುಳಬಾಗಿಲು ಕ್ಷೇತ್ರದಲ್ಲಿ 6 ಸಾವಿರ ಎಕರೆ ಪ್ರದೇಶದಲ್ಲಿ ರೈತರು ಟೊಮೆಟೋ ಹಣ್ಣನ್ನು ಬೆಳೆಯುತ್ತಿದ್ದು ಎಕರೆಗೆ 1.50 ಲಕ್ಷಕ್ಕೂ ಅಧಿಕ ವೆಚ್ಚವಾಗುತ್ತದೆ. ಆದರೆ ಈಗಿನ ಮಾರುಕಟ್ಟೆ ದರದ ಅನ್ವಯ ಬೆಳೆದ ವೆಚ್ಚವೂ ಕೈಸೇರುತ್ತಿಲ್ಲ. ಮುಳಬಾಗಿಲು ಕ್ಷೇತ್ರದ ವಡ್ಡಹಳ್ಳಿ ಮಾರುಕಟ್ಟೆಗೆ ಪ್ರತಿದಿನವೂ 40 ಸಾವಿರಕ್ಕೂ ಅಧಿಕ ಕ್ರೇಟ್‌ಗಳು ಹರಾಜಿಗೆ ಬರುತ್ತಿದ್ದರೂ ಸರಿಯಾದ ಬೆಲೆ ದೊರೆಯದ ಕಾರಣ ರೈತರು ನಿರಾಸೆಯಿಂದ ರಸ್ತೆಗೆ ರಸ್ತೆಗೆ ಸುರಿಯುವಂತಾ ಸ್ಥಿತಿ ಉಂಟಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

   Black Fungus ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ | Oneindia Kannada

   ಹೀಗಾಗಿ ರಾಜ್ಯ ಸರ್ಕಾರದ ವತಿಯಿಂದ ಟೊಮೆಟೋ ಬೆಳೆಗೆ ನ್ಯಾಯಯುತವಾದ ಬೆಂಬಲ ಬೆಲೆಯನ್ನು ಒದಗಿಸುವ ಮೂಲಕ ರೈತರ ಬದುಕಿಗೆ ಸಹಾಯ ಮಾಡಬೇಕೆಂದು ಪತ್ರದ ಮೂಲಕ ನಾಗೇಶ್ ಮನವಿಯನ್ನು ಮಾಡಿಕೊಂಡಿದ್ದಾರೆ

   English summary
   Former Minister H Nagesh writes letter to CM Yediyurappa requesting him to help tomato growers who are facing losses due to lockdown effect. Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X