ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರದಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಜೂನ್ 26: ಚಿನ್ನದ ನಾಡು ಕೋಲಾರದಲ್ಲಿ ಕೊರೊನಾಗೆ ಮೊದಲ ಬಲಿಯಾಗಿದೆ. ಕೊರೊನಾ ಪಾಸಿಟಿವ್ ಬಂದಿರುವ ಮಹಿಳೆ ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದಾರೆ.

Recommended Video

T20 worldcup fixture will decide if IPL gets cancelled this year | Oneindia Kannada

ಕೋಲಾರ‌ ಜಿಲ್ಲೆ ಕೆಜಿಎಫ್ ತಾಲೂಕಿನ ತೂಕಲ್ಲು ಗ್ರಾಮದ‌ 43 ವರ್ಷದ ಮಹಿಳೆ ಕಳೆದ ಒಂದು ವಾರದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜೂನ್ 16ರಂದು ದೆಹಲಿಯಿಂದ ಕೆಜಿಎಫ್ ತಾಲೂಕಿನ ತೂಕಲ್ಲು ಗ್ರಾಮಕ್ಕೆ ಮದುವೆಗೆಂದು ಆಗಮಿಸಿದ್ದ ಈ ಮಹಿಳೆಯಲ್ಲಿ ಕೆಮ್ಮು, ಜ್ವರದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು.

ಕೋಲಾರದಲ್ಲಿ ಕೊವಿಡ್ ಕೇಂದ್ರದ ವಿರುದ್ಧ ಖಾಸಗಿ ವೈದ್ಯನ ವಿಡಿಯೋ ವೈರಲ್ಕೋಲಾರದಲ್ಲಿ ಕೊವಿಡ್ ಕೇಂದ್ರದ ವಿರುದ್ಧ ಖಾಸಗಿ ವೈದ್ಯನ ವಿಡಿಯೋ ವೈರಲ್

ಜೂನ್ 19ರಂದು ಈ ಮಹಿಳೆಯಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಮಹಿಳೆಯ ಪತಿಗೂ ಕೊರೊನಾ ಸೋಂಕು ಇದ್ದು, ಅವರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಈ ಮಹಿಳೆ ನಿನ್ನೆ ರಾತ್ರಿ ಮೃತಪಟ್ಟಿರುವುದಾಗಿ ಕೋಲಾರ ಡಿಎಚ್ ಒ ಡಾ. ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.

First Corona Virus Death Case Reported In Kolar

ಮಹಿಳೆ ಕೊರೊನಾದಿಂದಲೇ ಸಾವನಪಿದ್ದಾರೆಯೇ ಅಥವಾ ಇನ್ಯಾವುದಾದರೂ ಸಮಸ್ಯೆಯಿಂದ ಸಾವನಪ್ಪಿದ್ದಾರೆಯೇ ಎನ್ನುವ ಅನುಮಾನವಿದ್ದು ಮತ್ತೊಮ್ಮೆ ಮೃತಳ ಸ್ವಾಬ್ ತೆಗೆದು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.

ಗ್ರಾಮ ಪಂಚಾಯಿತಿಯಿಂದ ಮೃತ ಮಹಿಳೆ ಇದ್ದ ಗ್ರಾಮಕ್ಕೆ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ.

English summary
First coronavirus death case reported in kolar district today. 43 year old woman died last night in private hospital,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X