• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಚಿವ ನಾಗೇಶ್ ರಾಜೀನಾಮೆ; ಸ್ವ ಕ್ಷೇತ್ರದಲ್ಲಿ ಪಟಾಕಿ ಸಿಡಿಸಿ ಸಂಭ್ರಮ!

By ಕೋಲಾರ ಪ್ರತಿನಿಧಿ
|

ಕೋಲಾರ, ಜನವರಿ 13: ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಅಬಕಾರಿ ಸಚಿವರಾಗಿದ್ದ ಹೆಚ್. ನಾಗೇಶ್ ರಾಜೀನಾಮೆ ನೀಡಿದರು. ಕೋಲಾರದ ಮುಳಬಾಗಿಲು ಕ್ಷೇತ್ರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗಿದೆ.

ಬುಧವಾರ ಸಚಿವ ಸಂಪುಟ ವಿಸ್ತರಣೆಗೆ ಮುನ್ನವೇ ಅಬಕಾರಿ ಸಚಿವ ಹೆಚ್. ನಾಗೇಶ್ ರಾಜೀನಾಮೆ ನೀಡಿದರು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೂಚನೆಯಂತೆ ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಹೆಚ್. ನಾಗೇಶ್ ರಾಜೀನಾಮೆ ನೀಡಿದ್ದಾರೆ.

ಮುನಿರತ್ನಗೆ ಕೈ ತಪ್ಪಿದ ಸಚಿವ ಸ್ಥಾನ; ಶ್ರೀರಾಮುಲು ಹೇಳಿದ್ದೇನು?

ರಾಜೀನಾಮೆ ನೀಡುತ್ತಿದ್ದಂತೆ ಹೆಚ್. ನಾಗೇಶ್ ಸ್ವಕ್ಷೇತ್ರ ಕೋಲಾರದ ಮುಳಬಾಗಿಲಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಹೆಚ್.ನಾಗೇಶ್ ನಡುವೆ ಅಸಮಾಧಾನವಿದೆ.

ಸಂಪುಟ ವಿಸ್ತರಣೆ ವೇಳೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು: ಈಶ್ವರಪ್ಪ

ಕೊತ್ತೂರು ಮಂಜುನಾಥ್ ಬೆಂಬಲಿಗರು ಪಟಾಕಿ ಸಿಡಿಸಿ, ಸಂಭ್ರಮಾಚರಣೆಯನ್ನು ನಡೆಸಿದರು. ಜಾತಿ ಪ್ರಮಾಣ ಪತ್ರ ಅನೂರ್ಜಿತ ವಾದ ಹಿನ್ನಲೆ ಕೊತ್ತೂರು ಮಂಜುನಾಥ್ ವಿಧಾನಸಭೆಗೆ ಸ್ಪರ್ಧೆ ಮಾಡಲು ಸಾಧ್ಯವಾಗಿರಲಿಲ್ಲ.

ಸಚಿವಸ್ಥಾನಕ್ಕೆ ಎಚ್. ನಾಗೇಶ್ ರಾಜೀನಾಮೆ: ವಿಧಾನಸೌಧದಲ್ಲಿ ಹೈಡ್ರಾಮಾ!

ಈ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೆಚ್. ನಾಗೇಶ್‌ರನ್ನು ಬೆಂಬಲಿಸಿದ್ದ ಕೊತ್ತೂರು ಮಂಜುನಾಥ್ ಅವರ ಗೆಲುವಿಗೆ ಕಾರಣರಾಗಿದ್ದರು. ಆದರೆ, ನಾಗೇಶ್ ಸಚಿವರಾದ ನಂತರ ಇಬ್ಬರ ಸಂಬಂಧ ಹಳಸಿತ್ತು.

ಈ ಹಿನ್ನಲೆಯಲ್ಲಿ ಹೆಚ್. ನಾಗೇಶ್ ರಾಜೀನಾಮೆ ನೀಡುತ್ತಿದ್ದಂತೆ ಮುಳಬಾಗಿಲು ಬಸ್ ನಿಲ್ದಾಣದ ಬಳಿ ಪಟಾಕಿ ಸಿಡಿಸಿದ ಕೊತ್ತೂರು ಮಂಜುನಾಥ್ ಬೆಂಬಲಿಗರು, ಅಭಿಮಾನಿಗಳು ಸಂಭ್ರಮಾಚರಣೆಯನ್ನು ನಡೆಸಿದರು.

ಶ್ರೀರಾಮುಲು ಪ್ರತಿಕ್ರಿಯೆ: ಅಬಕಾರಿ ಸಚಿವ ಹೆಚ್. ನಾಗೇಶ್ ರಾಜೀನಾಮೆ ಕುರಿತು. ಕೋಲಾರದ ಬಂಗಾರಪೇಟೆಯಲ್ಲಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಪ್ರತಿಕ್ರಿಯೆ ನೀಡಿದರು.

"ನಾಗೇಶ್ ಅವರನ್ನು ನಾವು ಕೈ ಬಿಡುವುದಿಲ್ಲ. ಯಡಿಯೂರಪ್ಪನವರು ಯಾವತ್ತೂ ನಂಬಿದವರ ಕೈ ಬಿಡುವಿದಿಲ್ಲ. ನಾಗೇಶ್ ಯಾಕೆ ರಾಜೀನಾಮೆ ಕೊಟ್ಟರು ಎಂದು ತಿಳಿದುಕೊಳ್ಳುತ್ತೇನೆ. ಮುಖ್ಯಮಂತ್ರಿಗಳು ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದಾರೆ. ಅಧಿಕಾರದಲ್ಲಿದ್ದಾಗ ನಾಗೇಶ್ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ಮುಂದೆ ಒಳ್ಳೆಯದಾಗಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದರು.

"ಸಿದ್ದರಾಮಯ್ಯ ಒಂದೊಂದು ದಿನ ಒಂದೊಂದು ಹೇಳಿಕೆ ಕೊಡಿತ್ತಾರೆ. ಯಡಿಯೂರಪ್ಪನವರು ಅಧಿಕಾರದಿಂದ ಇಳಿಯುತ್ತಾರೆ ಅಂತ ಹೇಳುತ್ತಾರೆ. ಇಲ್ಲ ಮುಂದುವರೆಯುತ್ತಾರೆ ಅಂತ ಹೇಳುತ್ತಾರೆ.

   Munirathna ಮತ್ತು Nagesh ಇಬ್ಬರ ನಡುವೆ ಜಟಾಪಟಿ!! | Oneindia Kannada

   ಸಿದ್ದರಾಮಯ್ಯ ಅವರೇನು ಬಿಜೆಪಿ ಪಕ್ಷದ ವಕ್ತಾರರಲ್ಲ. ಅವರಿಗೆ ಅಧಿಕಾರ ಕಳೆದುಕೊಂಡು ಮತಿಭ್ರಮಣೆ ಆಗಿದೆ ಅನ್ನಿಸುತ್ತದೆ" ಎಂದು ಹೇಳಿದರು.

   English summary
   Mulbagal MLA H. Nagesh resigned for excise minister post. Kothur Manjunath supporters celebration in Mulbagal, Kolar district.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X