ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುಡ್ಡಿದ್ದೋರು ಮಾತ್ರ ಮದ್ಯ ಕುಡೀರಿ; ಅಬಕಾರಿ ಸಚಿವ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಮೇ 07: "ಯಾರ ಬಳಿ ದುಡ್ಡಿದೆಯೋ ಅವರು ಮಾತ್ರ ಕುಡಿಯಿರಿ" ಎಂದಿದ್ದಾರೆ ಅಬಕಾರಿ ಸಚಿವ ಎಚ್.ನಾಗೇಶ್. ಕೋಲಾರದಲ್ಲಿ ಅಬಕಾರಿ ಸುಂಕ ಹೆಚ್ಚಳದ ಕುರಿತು ಪ್ರತಿಕ್ರಿಯಿಸಿದ ಅವರು, "ದೆಹಲಿ ಹಾಗೂ ಆಂಧ್ರ ಮಾದರಿಯಲ್ಲಿ ನಮ್ಮಲ್ಲೂ ಟ್ಯಾಕ್ಸ್ ಹೆಚ್ಚಳ ಆಗಿದೆ" ಎಂದು ಹೇಳಿದ್ದಾರೆ.

"ರಾಜ್ಯಾದ್ಯಂತ ಶೇ.40 ರಷ್ಟು ಮದ್ಯದಂಗಡಿಗಳು ತೆರೆದಿವೆ. ಎಂಎಸ್ಐಎಲ್ ಹಾಗೂ ವೈನ್ ಶಾಪ್ ಮೂಲಕ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಇದುವರೆಗೂ 500 ಕೋಟಿವರೆಗೂ ಕಲೆಕ್ಷನ್ ಆಗಿದೆ. ಇಂದಿನಿಂದ 11 ಪರ್ಸೆಂಟ್ ಟ್ಯಾಕ್ಸ್ ಹೆಚ್ಚಿಸಲಾಗಿದೆ" ಎಂದು ತಿಳಿಸಿದರು.

ಬಾರ್, ರೆಸ್ಟೋರೆಂಟ್ ಸದ್ಯಕ್ಕೆ ಓಪನ್ ಮಾಡಲ್ಲ: ಸಚಿವ ನಾಗೇಶ್ಬಾರ್, ರೆಸ್ಟೋರೆಂಟ್ ಸದ್ಯಕ್ಕೆ ಓಪನ್ ಮಾಡಲ್ಲ: ಸಚಿವ ನಾಗೇಶ್

"ಒಟ್ಟು 18 ಸ್ಲ್ಯಾಬ್ ನಲ್ಲಿ 4 ಸ್ಲ್ಯಾಬ್ ನಲ್ಲಿ ಹೆಚ್ಚಿನ ಆದಾಯ ಬರಲಿದೆ. ಒಂದು ಕ್ವಾರ್ಟರ್ ಮೇಲೆ 5 ರೂಪಾಯಿ ಹೆಚ್ಚಳವಾಗಲಿದೆ. ಒಟ್ಟು 22,500 ಸಾವಿರ ಕೋಟಿ ಟಾರ್ಗೆಟ್ ಇತ್ತು. ತೆರಿಗೆ ಹೆಚ್ಚಳ ಆಗಿರೋದ್ರಿಂದ 2,500 ಕೋಟಿ ಹೆಚ್ಚಿಗೆ ಬರಲಿದೆ. ಈ ವರ್ಷ ಒಟ್ಟು 25 ಸಾವಿರ ಕೋಟಿ ನಮ್ಮ ಬೊಕ್ಕಸಕ್ಕೆ ಬರಲಿದೆ" ಎಂದರು.

Excise Minister H Nagesh Speaks About Excise Tax Hike

ಎಂಎಸ್ಐಎಲ್ ಹಾಗೂ ವೈನ್ ಶಾಪ್ ಬಿಟ್ಟು, ಇನ್ನುಳಿದ ಶಾಪ್ ಗಳನ್ನು ತೆರೆಯಲು 18ನೇ ತಾರೀಖಿನ ಬಳಿಕ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

English summary
''Those who have money, drink alcohol" said Excise minister H Nagesh in kolar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X