• search
 • Live TV
ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಡ್ರಗ್ಸ್ ಜಾಲ ಪತ್ತೆಗೆ ಅಬಕಾರಿ ಇಲಾಖೆಯಿಂದಲೂ ಸಹಕಾರ"

By ಕೋಲಾರ ಪ್ರತಿನಿಧಿ
|

ಕೋಲಾರ, ಸೆಪ್ಟೆಂಬರ್ 11: "ಡ್ರಗ್ಸ್ ದಂಧೆ ಮೊದಲಿನಿಂದಲೂ ನಡೆಯುತ್ತಿದೆ. ಅಬಕಾರಿ ಇಲಾಖೆಯೂ ಈ ಜಾಲವನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆಗೆ ಅಬಕಾರಿ ಇಲಾಖೆಯೂ ಸಹಕಾರ ನೀಡುತ್ತಿದೆ" ಎಂದು ಹೇಳಿದ್ದಾರೆ ಅಬಕಾರಿ ಸಚಿವ ಎಚ್.ನಾಗೇಶ್.

ಕೋಲಾರದಲ್ಲಿ ಇಂದು ಡ್ರಗ್ಸ್ ಮಾಫಿಯಾ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ವಿದ್ಯಾರ್ಥಿಗಳು ಮಾದಕ ವಸ್ತುವಿನ ವ್ಯಸನಕ್ಕೆ ಹೆಚ್ಚು ಒಳಗಾಗಿದ್ದಾರೆ. ಜೊತೆಗೆ ತೊಗರಿ ಗಿಡಗಳ ಮಧ್ಯೆ ಗಾಂಜಾ ಬೆಳೆದರೆ ಗೊತ್ತಾಗುವುದಿಲ್ಲ. ಗಾಂಜಾ ಗಿಡಗಳು ನೋಡಲು ತೊಗರಿ ಗಿಡಗಳ ರೀತಿ ಕಾಣುತ್ತದೆ, ಹೀಗಾಗಿ ಗಾಂಜಾ ಬೆಳೆಯುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಗಾಂಜಾ ಜಾಲ ಪತ್ತೆ ಹಚ್ಚುವುದರಲ್ಲಿ ಪೊಲೀಸ್ ಇಲಾಖೆಯ ಜೊತೆ ಜಂಟಿ ಕಾರ್ಯಾಚರಣೆ ಮಾಡುತ್ತೇವೆ" ಎಂದು ಹೇಳಿದರು.

ಆನ್‌ಲೈನ್‌ನಲ್ಲಿ ಮದ್ಯ ಮಾರಾಟ; ಮೊದಲ ಹೆಜ್ಜೆ ಇಟ್ಟ ಕರ್ನಾಟಕ

ಇಂದು ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಭೇಟಿ ಆದ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿ, "ಇನ್ನು ಎರಡೂವರೆ ವರ್ಷಗಳ ಕಾಲ ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ. ನಮ್ಮಲ್ಲಿ ಒಗ್ಗಟ್ಟಿದೆ, ಶಿಸ್ತಿನಿಂದ ಕೆಲಸ ಮಾಡುತ್ತಿದ್ದೇವೆ. ಸಂಕಷ್ಟದಲ್ಲೂ ಎಲ್ಲರನ್ನೂ ನಿಭಾಯಿಸಿಕೊಂಡು ಸಿಎಂ ಕೆಲಸ ಮಾಡುತ್ತಿದ್ದಾರೆ. ಮುಂದಿನ ಬೆಳವಣಿಗೆ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ" ಎಂದರು.

   ಪೋಷಕರಿಗೆ ಸಿಹಿ ಸುದ್ದಿ ಕೊಟ್ಟ BJP government | Oneindia Kannada

   ಸಂಪುಟ ವಿಸ್ತರಣೆ ಕುರಿತೂ ಮಾತನಾಡಿ, "ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಊಹಾಪೋಹಗಳ ಬಗ್ಗೆ ಗೊತ್ತಿಲ್ಲ, ಸ್ಪಷ್ಟವಾದ ಚಿತ್ರಣವಿಲ್ಲ. ಅಧಿವೇಶನಕ್ಕೂ ಮುನ್ನ ಮಾಡ್ತಾರೋ ಇಲ್ಲವೋ ಆದಮೇಲೆ ಮಾಡ್ತಾರೋ ಗೊತ್ತಿಲ್ಲ. ಸಂಪುಟ ವಿಸ್ತರಣೆ, ಪುನರಚನೆ ಏನಿದ್ದರೂ ಸಿಎಂಗೆ ಬಿಟ್ಟದ್ದು" ಎಂದು ತಿಳಿಸಿದರು.

   English summary
   "The Excise Department is co-operating with the Police Department in finding drugs network" said Excise Minister H Nagesh in kolar,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X