ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಜಾತಿ ನಿಂದನೆ ಮಾಡಿದ ಬೇತಮಂಗಲ ಪಿಎಸ್ಐ ವಜಾಗೊಳಿಸಿ'

|
Google Oneindia Kannada News

ಬೆಂಗಳೂರು, ನವೆಂಬರ್ 20: ಕೆ.ಜಿ.ಎಫ್ ತಾಲ್ಲೂಕಿನ ಬೇತಮಂಗಲ ಪೊಲೀಸ್ ಠಾಣೆಯ ಪಿ ಎಸ್ ಐ ಹೊನ್ನೇಗೌಡ ರನ್ನು ಸೇವೆಯಿಂದ ವಜಾಗೊಳಿಸಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಅಧಿನಿಯಮದಡಿಯಲ್ಲಿ ಜಾತಿನಿಂದನೆ ದೂರು ದಾಖಲಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ ಸಿ ಎಸ್ ರಘು ಆಗ್ರಹಿಸಿದ್ದಾರೆ.

ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಆರೋಪಿಗೆ ಬೂಟು ಕಾಲಿನಿಂದ ಒದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪವನ್ನು ಎಸ್ ಐ ಹೊನ್ನೇಗೌಡ ಅವರು ಹೊತ್ತುಕೊಂಡಿದೆ.

ಣೆಯಲ್ಲೇ ಪಿಎಸ್ಐ ಡ್ಯಾನ್ಸ್ ರಾಜಾ ಡ್ಯಾನ್ಸ್: ಇಲಾಖೆ ತಲೆತಗ್ಗಿಸುವ ಘಟನೆಣೆಯಲ್ಲೇ ಪಿಎಸ್ಐ ಡ್ಯಾನ್ಸ್ ರಾಜಾ ಡ್ಯಾನ್ಸ್: ಇಲಾಖೆ ತಲೆತಗ್ಗಿಸುವ ಘಟನೆ

ಬೆಂಗಳೂರಿನ ಟೌನ್ ಹಾಲ್ ಎದರು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದರು. ಪಿ ಎಸ್ ಐ ಹೊನ್ನೇಗೌಡ ಅವರು ಆರೋಪಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಅಲ್ಲದೆ, ಹಿಂದುಳಿದ ಜಾತಿಗೆ ಸೇರಿದವರು ಎನ್ನುವ ಬೆನ್ನಲ್ಲೇ ಜಾತಿಗೆ ಸಂಬಂಧಿಸಿದಂತೆ ಅಸಹ್ಯ ಮಾತುಗಳನ್ನು ಆಡಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ಬೇತಮಂಗಲ ಪೊಲೀಸ್ ಠಾಣೆಯ ಪಿ ಎಸ್ ಐ ಹೊನ್ನೇಗೌಡ ಅವರ ಅಣುಕು ಶವಯಾತ್ರೆಯನ್ನು ನಡೆಸಲಾಯಿತು.

ಬೂಟು ಕಾಲಿನಿಂದ ಹಲ್ಲೆಯನ್ನು ನಡೆಸಿದ್ದಾರೆ

ಬೂಟು ಕಾಲಿನಿಂದ ಹಲ್ಲೆಯನ್ನು ನಡೆಸಿದ್ದಾರೆ

ತಮ್ಮ ಬೂಟು ಕಾಲಿನಿಂದ ಹಲ್ಲೆಯನ್ನು ನಡೆಸಿದ್ದಾರೆ. ಇಂತಹ ಕೃತ್ಯವನ್ನು ಎಸಗಿರುವ ಬೇತಮಂಗಲು ಪೊಲೀಸ್ ಠಾಣೆಯ ಪಿ ಎಸ್ ಐ ಹೊನ್ನೇಗೌಡ ಹಾಗೂ ಈ ಕೃತ್ಯಕ್ಕೆ ಬೆಂಬಲಿಸಿದ ಈತನ ಸಹಚರ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಬೇಕು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಅಧಿನಿಯಮದಡಿಯಲ್ಲಿ ಜಾತಿನಿಂದನೆಯ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಾತಿ ನಿಂದನೆ ಆರೋಪ

ಜಾತಿ ನಿಂದನೆ ಆರೋಪ

'ಒಕ್ಕಲಿಗರ ಮನೆ ಬಳಿ ಹೋಗುತ್ತೀರಾ? ನಿಮಗೆ ಒಕ್ಕಲಿಗರ ಮನೆ ಹುಡುಗಿ ಬೇಕಾ ವಡ್ ನನ್ ಮಕ್ಳಾ' ಎಂದು ಪಿಎಸ್ಐ ವಿಚಾರಣೆ ನಡೆಸುತ್ತಿದ್ದರು. ಆರೋಪಿಗಳಿಬ್ಬರೂ ಭೋವಿ ಜನಾಂಗದವರಾಗಿದ್ದು, ವಿಚಾರಣೆ ನೆಪದಲ್ಲಿ ನಮ್ಮ ಜನಾಂಗದವರನ್ನು ವಡ್ಡ ಎಂದು ಪಿಎಸ್ಐ ಅವಮಾನಿಸಿದ್ದಾರೆ. ಅತ್ಯಂತ ಕೀಳುಮಟ್ಟದ ಪದವನ್ನು ಬಳಸಿ ವಿಚಾರಣೆ ನಡೆಸಲಾಗಿದೆ ಎನ್ನುವ ಕೂಗು ಪಿಎಸ್ಐ ವಿರುದ್ದ ಕೇಳಿಬಂದಿದೆ.

ಗಬ್ಬರ್ ಸಿಂಗ್ ಶೈಲಿಯಲ್ಲಿ ಡ್ಯಾನ್ಸ್

ಗಬ್ಬರ್ ಸಿಂಗ್ ಶೈಲಿಯಲ್ಲಿ ಡ್ಯಾನ್ಸ್

ಪವನ್ ಕಲ್ಯಾಣ್ ಅಭಿನಯದ ಗಬ್ಬರ್ ಸಿಂಗ್ ಚಿತ್ರದ ದೃಶ್ಯವನ್ನು ನಕಲು ಮಾಡಿ ಕುಣಿದಾಡಿದ ಪಿಎಸ್ಐ ನಂತರ, ಅತ್ಯಂತ ಕೆಟ್ಟ ಪದಗಳನ್ನು ಬಳಸುತ್ತಾ, ಜೋಗಿ ಚಿತ್ರದ ಹೊಡಿಮಗ.. ಹೊಡಿಮಗ ಹಾಡು ಹೇಳುತ್ತಾ, ಕಾಲಿಂದ ಒದೆಯುತ್ತಾ, ಗಬ್ಬರ್ ಸಿಂಗ್ ಸಿನಿಮಾ ಸ್ಟೈಲಿನಲ್ಲಿ ಪಿಎಸ್ಐ ವಿಚಾರಣೆ ನಡೆಸುತ್ತಿರುವುದನ್ನು ಠಾಣಾ ಸಿಬ್ಬಂದಿಯೇ ಮೊಬೈಲ್‌ ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದಾರೆ.

ಕಠಿಣ ಕ್ರಮಕ್ಕೆ ಆಗ್ರಹ

ಕಠಿಣ ಕ್ರಮಕ್ಕೆ ಆಗ್ರಹ

ಜಿಲ್ಲಾ ವರಿಷ್ಠಾಧಿಕಾರಿ ಲೋಕೇಶ್‌ ಕುಮಾರ್‌ ಘಟನೆ ಸಂಬಂಧ ತನಿಖೆ ನಡೆಸಿ ಶನಿವಾರ (17) ವರದಿ ನೀಡುವಂತೆ ಡಿವೈಎಸ್ಪಿಗೆ ಆದೇಶಿಸಿದ್ದಾರೆ. ಕೆಲವು ದಿನಗಳ ಹಿಂದೆ, ಇದೇ ಠಾಣೆಯ ಇಬ್ಬರು ಪೇದೆಗಳು ಮದ್ಯಸೇವನೆ ಮಾಡಿ, ಕಂಗಾಡ್ಲ ಹಳ್ಳಿಯಲ್ಲಿ ರಂಪಾಟ ನಡೆಸಿದ್ದರು. ಈ ಇಬ್ಬರು ಪೇದೆಗಳನ್ನು ಜಿಲ್ಲಾ ಎಸ್ಪಿ ಅಮಾನತುಗೊಳಿಸಿದ್ದರು. ಆದೆರೆ, ಭೋವಿ ಜನಾಂಗದವರು ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.

English summary
PSI Honnegowda of Bethamangala, Kolar district who danced like Actor Pawan Kalyan infront of accused has become viral, but, Dalit Sangharsh Samiti (DSS) demanded Government to sack the PSI who insulted Dalits
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X