ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರದ ಒಂಟಿ ಮನೆಯಲ್ಲಿ ಕೋಟ್ಯಂತರ ರೂ ಮೌಲ್ಯದ ಗಾಂಜಾ ಪತ್ತೆ

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಸೆಪ್ಟೆಂಬರ್ 9: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ವಿಚಾರ ಈಗ ಎಲ್ಲೆಲ್ಲೂ ಚರ್ಚಿತವಾಗುತ್ತಿದೆ. ಈ ಹಿನ್ನೆಲೆ ಪೊಲೀಸರು ಕೂಡ ಹೈ ಅಲರ್ಟ್ ಆಗಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪೊಲೀಸರು ಮಾದಕ ವಸ್ತುಗಳ ಜಾಡು ಹಿಡಿದಿದ್ದಾರೆ.

Recommended Video

Congress ನಾಯಕರ ಜೊತೆ Ragini ಹಾಗು Sanjjanaa - BJP tweet | Oneindia Kannada

ಮಾದಕ ವಸ್ತುಗಳನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂಬ ಉದ್ದೇಶದಿಂದ ಹಳೆಯ ಪ್ರಕರಣಗಳಲ್ಲಿ ಇದ್ದವರನ್ನು ಹಾಗೂ ಅನುಮಾನವಿರುವ ವ್ಯಕ್ತಿಗಳನ್ನು ಕರೆಸಿ ಕೋಲಾರದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆಂಧ್ರ ಹಾಗೂ ತಮಿಳುನಾಡಿಗೆ ಅಂಟಿಕೊಂಡಿರುವ ಗಡಿ ಜಿಲ್ಲೆ ಕೋಲಾರದಲ್ಲಿ ಡ್ರಗ್ಸ್ ಮಾಫಿಯಾ ಜೋರಾಗಿ ನಡೆಯುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ಮಫ್ತಿಯಲ್ಲಿ ದಾಳಿ ನಡೆಸುತ್ತಿದ್ದು, ನಿನ್ನೆ ಕಾರ್ಯಾಚರಣೆ ನಡೆಸಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಗಾಂಜಾ ಜೊತೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Kolar Drug Mafia: Police Seized 190 KG Marijuana

 ಕೋಲಾರ; ದಾಖಲೆ ಇಲ್ಲದ 2 ಕೋಟಿ ಹಣ ಪೊಲೀಸರ ವಶಕ್ಕೆ ಕೋಲಾರ; ದಾಖಲೆ ಇಲ್ಲದ 2 ಕೋಟಿ ಹಣ ಪೊಲೀಸರ ವಶಕ್ಕೆ

ಖಚಿತ ಮಾಹಿತಿ ಮೇರೆಗೆ ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯ ಡಿವೈಎಸ್ಪಿ ಉಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು ಒಂದೂವರೆ ಕೋಟಿಗೂ ಅಧಿಕ ಮೌಲ್ಯದ 190 ಕೆ.ಜಿ.ಯಷ್ಟು ಗಾಂಜಾ ವಶಕ್ಕೆ ಪಡೆದಿದ್ದಾರೆ. ಕೆಜಿಎಫ್ ನ ನೂತನ ಎಸ್ಪಿ ಇಲಕ್ಕಿಯಾ ಕರುಣಾಕರನ್ ಸೂಚನೆ ಮೇರೆಗೆ ದಾಳಿ ನಡೆಸಿದ ಪೊಲೀಸರು, ಜೋಸೆಫ್ ಎಂಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

Kolar Drug Mafia: Police Seized 190 KG Marijuana

ಮಾರಿಕುಪ್ಪಂ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಗಿರಿ ಲೈನ್ ಮನೆಯಲ್ಲಿ ಗಾಂಜಾ ಪತ್ತೆಯಾಗಿದ್ದು, ಆರೋಪಿ ಜೋಸೆಫ್ ಗೆ ಸೇರಿದ್ದ ಒಂಟಿ ಮನೆಯಲ್ಲೇ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಕೆಜಿಎಫ್ ನಲ್ಲಿ ರೌಡಿ ಶೀಟರ್ ಆಗಿ ಎನ್ ಕೌಂಟರ್ ಆಗಿದ್ದ ತಂಗಂ ಸಹೋದರನೇ ಜೋಸೆಫ್. ಜೋಸೆಫ್ ಪಕ್ಕದ ಆಂಧ್ರ, ತಮಿಳುನಾಡು ಭಾಗದಿಂದ ಗಾಂಜಾ ಶೇಖರಿಸಿ ರಾಜ್ಯ ಹಾಗೂ ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸುತ್ತಿದ್ದ. ಜೋಸೆಫ್ ಪೊಲೀಸರ ವಶದಲ್ಲಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

English summary
Kolar police have started operation against drug mafia. They have arrested one and seized 190 kg marijuana
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X