ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಚ್ಚರಿ ಮೂಡಿಸಿದ ಜಿ. ಟಿ. ದೇವೇಗೌಡ ಸುಧಾಕರ್ ಭೇಟಿ!

|
Google Oneindia Kannada News

ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 27: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ. ಚಿಂತಾಮಣಿಯ ರಾಜಕೀಯ ನಾಯರೊಬ್ಬರು ದೇವೇಗೌಡರ ಜೊತೆ ಕಾಣಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ.

ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಡಾ. ಎಂ. ಸಿ. ಸುಧಾಕರ್ ಜಿ. ಟಿ. ದೇವೇಗೌಡ ಜೊತೆ ಕಾಣಿಸಿಕೊಂಡಿದ್ದಾರೆ. ಜಿ. ಟಿ. ದೇವೇಗೌಡರಂತೆ ಡಾ. ಎಂ. ಸಿ. ಸುಧಾರಕರ್ ಸಹ ಕಾಂಗ್ರೆಸ್ ಸೇರಲಿದ್ದಾರೆಯೇ? ಎಂಬ ಚರ್ಚೆಗಳು ಆರಂಭವಾಗಿವೆ.

ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ; ಜೆಡಿಎಸ್ ಶಾಸಕನಿಗೆ ಸವಾಲು! ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ; ಜೆಡಿಎಸ್ ಶಾಸಕನಿಗೆ ಸವಾಲು!

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಸಮಯವಿದೆ. ಡಾ. ಎಂ. ಸಿ. ಸುಧಾಕರ್ ಮುಂದಿನ ರಾಜಕೀಯ ನಡೆ ಇನ್ನೂ ಅಂತಿಮವಾಗಿಲ್ಲ. ಕಳೆದ ಚುನಾವಣೆಯಲ್ಲಿ ಅವರು ಚಿಂತಾಮಣಿಯಲ್ಲಿ ಭಾರತೀಯ ಪ್ರಜಾ ಪಕ್ಷದಿಂದ ಕಣಕ್ಕಿಳಿದಿದ್ದರು. 82,080 ಮತಗಳನ್ನು ಪಡೆದು ಸೋತಿದ್ದರು.

ಒಂದೇ ದಿನ ಕಾಂಗ್ರೆಸ್‌ ನಾಯಕರನ್ನು ಭೇಟಿಯಾದ ಇಬ್ಬರು ಜೆಡಿಎಸ್ ಶಾಸಕರು! ಒಂದೇ ದಿನ ಕಾಂಗ್ರೆಸ್‌ ನಾಯಕರನ್ನು ಭೇಟಿಯಾದ ಇಬ್ಬರು ಜೆಡಿಎಸ್ ಶಾಸಕರು!

2013ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದಿದ್ದ ಡಾ. ಎಂ. ಸಿ. ಸುಧಾಕರ್ ಎರಡು ಬಾರಿ ಸೋತಿದ್ದಾರೆ. ಈಗ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿರುವ ಕಾಂಗ್ರೆಸ್ ಸುಧಾಕರ್‌ಗೆ ಅವಕಾಶ ನೀಡಲಿದೆಯೇ? ಕಾದು ನೋಡಬೇಕು.

ಜೆಡಿಎಸ್ 30 ಸೀಟಿನ ಪಕ್ಷ ಎಂದವರಿಗೆ ಎಚ್‌ಡಿಕೆ ತಿರುಗೇಟು! ಜೆಡಿಎಸ್ 30 ಸೀಟಿನ ಪಕ್ಷ ಎಂದವರಿಗೆ ಎಚ್‌ಡಿಕೆ ತಿರುಗೇಟು!

ಡಿ. ಕೆ. ಶಿವಕುಮಾರ್ ಭೇಟಿಯಾಗಿದ್ದಾರೆ

ಡಿ. ಕೆ. ಶಿವಕುಮಾರ್ ಭೇಟಿಯಾಗಿದ್ದಾರೆ

ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಡಾ. ಎಂ. ಸಿ. ಸುಧಾಕರ್ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಆದರೆ ಮುಂದಿನ ರಾಜಕೀಯ ತೀರ್ಮಾನವನ್ನು ಇನ್ನೂ ಕೈಗೊಂಡಿಲ್ಲ. ಮಾಜಿ ಶಾಸಕರಾದರೂ ಅಪಾರ ಜನಪ್ರಿಯತೆ ಹೊಂದಿರುವ ಡಾ. ಎಂ. ಸಿ. ಸುಧಾಕರ್ ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಒಪ್ಪಿಗೆ ನೀಡುವ ಸಾಧ್ಯತೆ ಇದೆ. 2018ರ ಚುನಾವಣೆಯಲ್ಲಿ ಚಿಂತಾಮಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಡೆದಿದ್ದು ಕೇವಲ 2,223 ಮತಗಳು. ಆದ್ದರಿಂದ ಸುಧಾಕರ್ ಸೇರ್ಪಡೆಗೆ ಒಪ್ಪಿಗೆ ಸಿಗಲಿದೆ ಎಂಬುದು ಲೆಕ್ಕಾಚಾರವಾಗಿದೆ.

ಕೋಲಾರ ರಾಜಕೀಯ ಲೆಕ್ಕಾಚಾರ

ಕೋಲಾರ ರಾಜಕೀಯ ಲೆಕ್ಕಾಚಾರ

ಡಾ. ಎಂ. ಸಿ. ಸುಧಾಕರ್ ಡಿ. ಕೆ. ಶಿವಕುಮಾರ್ ಭೇಟಿಯಾದ ವೇಳೆ ಗೌರಿಬಿದನೂರು ಶಾಸಕ ಎನ್. ಎಚ್. ಶಿವಶಂಕರ ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ ಸಹ ಇದ್ದರು. ಆದರೆ ಮಾಜಿ ಸಂಸದ ಕೆ. ಎಚ್. ಮುನಿಯಪ್ಪ ಡಾ. ಎಂ. ಸಿ. ಸುಧಾಕರ್ ಸೇರ್ಪಡೆಗೆ ಒಪ್ಪಿಗೆ ನೀಡಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ. 2013ರ ಚುನಾವಣೆ ಸಮಯದಲ್ಲಿ ಸುಧಾಕರ್‌ಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವಂತೆ ಮುನಿಯಪ್ಪ ಸಲಹೆ ಕೊಟ್ಟಿದ್ದರು. ಆದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಅವರು ಸೋಲು ಕಂಡಿದ್ದರು. 2018ರಲ್ಲಿಯೂ ಕಾಂಗ್ರೆಸ್ ಟಿಕೆಟ್ ಬೇಡ ಎಂದು ಭಾರತೀಯ ಪ್ರಜಾ ಪಕ್ಷದಿಂದ ಕಣಕ್ಕಿಳಿದಿದ್ದರು.

ಮುನಿಯಪ್ಪ ಅಸಮಾಧಾನಗೊಂಡಿದ್ದಾರೆ

ಮುನಿಯಪ್ಪ ಅಸಮಾಧಾನಗೊಂಡಿದ್ದಾರೆ

2018ರಲ್ಲಿ ಡಾ. ಎಂ. ಸಿ. ಸುಧಾಕರ್ ಕಾಂಗ್ರೆಸ್ ಟಿಕೆಟ್ ತಿರಸ್ಕರಿಸಿದ್ದರು. ಆಗ ಮುನಿಯಪ್ಪ ಜೆಡಿಎಸ್‌ನಲ್ಲಿದ್ದ ವಾಣಿ ಕೃಷ್ಣಾ ರೆಡ್ಡಿಯನ್ನು ಕಾಂಗ್ರೆಸ್‌ಗೆ ಕರೆತಂದು ಅಭ್ಯರ್ಥಿಯಾಗಿಸಿದ್ದರು. ಚುನಾವಣೆಯಲ್ಲಿ ಅಭ್ಯರ್ಥಿ ಠೇವಣಿ ಕಳೆದುಕೊಂಡರು. ಇದರಿಂದಾಗಿ ಡಾ. ಎಂ. ಸಿ. ಸುಧಾಕರ್ ಮೇಲೆ ಮುನಿಯಪ್ಪ ಅಸಮಾಧಾನ ಹೊಂದಿದ್ದಾರೆ. ಜೆಡಿಎಸ್‌ನ ಜಿ. ಕೆ. ಕೃಷ್ಣಾ ರೆಡ್ಡಿ ಕ್ಷೇತ್ರದ ಹಾಲಿ ಶಾಸಕರು. ಬಿಜೆಪಿಗೆ ಕ್ಷೇತ್ರದಲ್ಲಿ ನೆಲೆ ಇಲ್ಲ. ಕಾಂಗ್ರೆಸ್ ಅಥವ ಜೆಡಿಎಸ್ ಚುನಾವಣೆಯಲ್ಲಿ ಗೆಲ್ಲಲು ತಂತ್ರ ರೂಪಿಸುತ್ತವೆ.

Recommended Video

ಭಾರತದ ಡೇಟಾಬೇಸ್ ಕದ್ದು ಚೀನಾ ಮಾಡೋದೇನು? ಆಘಾತಕಾರಿ ಮಾಹಿತಿ ಬಯಲು | Oneindia Kannada
ಕುತೂಹಲ ಮೂಡಿಸಿದ ಚುನಾವಣೆ

ಕುತೂಹಲ ಮೂಡಿಸಿದ ಚುನಾವಣೆ

2019ರ ಲೋಕಸಭೆ ಚುನಾವಣೆಯಲ್ಲಿ ಕೆ. ಎಚ್. ಮುನಿಯಪ್ಪ ಸೋಲು ಕಂಡಿದ್ದಾರೆ. ಆದ್ದರಿಂದ ಚಿಂತಾಮಣಿ ಕ್ಷೇತ್ರದ 2023ರ ಚುನಾವಣೆಯ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಡೆದಿದ್ದು ಕೇವಲ 1961 ಮತ. ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಸಂಸದ ಮುನಿಸ್ವಾಮಿ ಕ್ಷೇತ್ರದಲ್ಲಿ ಪಕ್ಷಕ್ಕೆ ಬಲ ತುಂಬಲಿದ್ದಾರೆಯೇ? ಕಾದು ನೋಡಬೇಕು. ಡಾ. ಎಂ. ಸಿ. ಸುಧಾಕರ್‌ ಕಾಂಗ್ರೆಸ್ ಸೇರಿದರೆ ಕ್ಷೇತ್ರದ ಚುನಾವಣಾ ಚಿತ್ರಣ ಬದಲಾಗುವ ನಿರೀಕ್ಷೆ ಇದೆ.

English summary
Chintamani former MLA Dr. M. C. Sudhakar met JD(S) MLA and former minister G. T. Deve Gowda. G. T. Deve Gowda announced that he will join Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X